Asianet Suvarna News Asianet Suvarna News

ಕ್ರಿಸ್ ಗೇಲ್‌ ಅಬ್ಬರ, ಆಸೀಸ್‌ ಎದುರು ಟಿ20 ಸರಣಿ ವಿಂಡೀಸ್ ಪಾಲು

* ಆಸ್ಟ್ರೇಲಿಯಾ ವಿರುದ್ದ ಟಿ20 ಸರಣಿ ಕೈವಶ ಮಾಡಿಕೊಂಡಿಕೊಂಡ ವೆಸ್ಟ್ ಇಂಡೀಸ್‌

* ಮೂರನೇ ಟಿ20 ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಚಚ್ಚಿದ ಕ್ರಿಸ್‌ ಗೇಲ್‌

* ಟಿ20 ಕ್ರಿಕೆಟ್‌ನಲ್ಲಿ ಹೊಸ ಮೈಲುಗಲ್ಲು ನೆಟ್ಟ ಗೇಲ್

West Indies Cricketer Chris Gayle becomes 1st batsman to score 14000 runs in T20 cricket kvn
Author
St Lucia, First Published Jul 13, 2021, 12:15 PM IST

ಸೇಂಟ್ ಲೂಸಿಯಾ(ಜು.13): ಯುನಿವರ್ಸಲ್‌ ಬಾಸ್‌ ಖ್ಯಾತಿಯ ಕ್ರಿಸ್ ಗೇಲ್‌ ಬಾರಿಸಿದ(67 ರನ್‌, 38 ಎಸೆತ) ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಮೂರನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ವೆಸ್ಟ್ ಇಂಡೀಸ್ ತಂಡವು 6 ವಿಕೆಟ್‌ಗಳ ಜಯ ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಟಿ20 ಸರಣಿಯಲ್ಲಿ ಇನ್ನೂ ಎರಡು ಪಂದ್ಯಗಳು ಬಾಕಿ ಇರುವಂತೆಯೇ ನಿಕೋಲಸ್ ಪೂರನ್‌ ನೇತೃತ್ವದ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು3-0 ಅಂತರದಲ್ಲಿ ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿದೆ.

ಮೊದಲು ಬ್ಯಾಟ್ ಮಾಡಿದ ಪ್ರವಾಸಿ ಆಸ್ಟ್ರೇಲಿಯಾ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 141 ರನ್‌ ಕಲೆಹಾಕಿತ್ತು. ಈ ಸಾಧಾರಣ ಗುರಿ ಬೆನ್ನತ್ತಿದ ವೆಸ್ಟ್ ಇಂಡಿಸ್ ತಂಡವು ಇನ್ನೂ 31 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ವಿಂಡೀಸ್‌ ನಾಯಕ ನಿಕೋಲಸ್ ಪೂರನ್‌ 27 ಎಸೆತಗಳಲ್ಲಿ ಅಜೇಯ 32 ರನ್‌ ಬಾರಿಸುವ ಮೂಲಕ ತಂಡವನ್ನು ಸುರಕ್ಷಿತವಾಗಿ ಗೆಲುವಿನ ದಡ ಸೇರಿಸಿದರು.

ಟಿ20 ಕ್ರಿಕೆಟ್: ಆಸೀಸ್ ಎದುರು ರೋಚಕ ಗೆಲುವು ಸಾಧಿಸಿದ ವೆಸ್ಟ್ ಇಂಡೀಸ್

ದಾಖಲೆ ಬರೆದ ಕ್ರಿಸ್‌ ಗೇಲ್‌: ಆಸ್ಟ್ರೇಲಿಯಾ ವಿರುದ್ದದ ಮೊದಲೆರಡು ಪಂದ್ಯಗಳಲ್ಲಿ ಮಂಕಾಗಿದ್ದ 41 ವರ್ಷದ ಕ್ರಿಸ್‌ ಗೇಲ್‌, ಮೂರನೇ ಟಿ20 ಪಂದ್ಯದಲ್ಲಿ ಅಕ್ಷರಶಃ ಅಬ್ಬರಿಸಿದರು. ಕೇವಲ 38 ಎಸೆತಗಳನ್ನು ಎದುರಿಸಿದ ಗೇಲ್‌ 4 ಬೌಂಡರಿ ಹಾಗೂ 7 ಆಕರ್ಷಕ ಸಿಕ್ಸರ್‌ ಚಚ್ಚುವ ಮೂಲಕ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದರು. ಈ ಮೂಲಕ ರಾಷ್ಟ್ರೀಯ ತಂಡದ 2016ರ ಬಳಿಕ ಮೊದಲ ಅರ್ಧಶತಕ ಬಾರಿಸಿ ಗೇಲ್‌ ಫಾರ್ಮ್‌ಗೆ ಮರಳಿದರು. 

ಇನ್ನು ಇದೇ ಪಂದ್ಯದಲ್ಲಿ ಗೇಲ್‌ 29 ರನ್‌ ಬಾರಿಸುತ್ತಿದ್ದಂತೆಯೇ ಟಿ20 ಕ್ರಿಕೆಟ್ ಇತಿಹಾಸದಲ್ಲಿ 14 ಸಾವಿರ ರನ್‌ ಬಾರಿಸಿದ ಮೊದಲ ಬ್ಯಾಟ್ಸ್‌ಮನ್‌ ಎನ್ನುವ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ.  ಇದುವರೆಗೂ ಒಟ್ಟು 431 ಟಿ20 ಪಂದ್ಯಗಳನ್ನಾಡಿರುವ ಕ್ರಿಸ್ ಗೇಲ್‌ 38ರ ಸರಾಸರಿಯಲ್ಲಿ 87 ಅರ್ಧಶತಕ ಹಾಗೂ 22 ಶತಕ ಸಹಿತ 14,038 ರನ್‌ ಬಾರಿಸಿದ್ದಾರೆ. ಸರಾಸರಿ ಪ್ರತಿ 20 ಪಂದ್ಯಗಳಿಗೆ ಒಂದು ಶತಕ ಹಾಗೂ ಪ್ರತಿ 5 ಟಿ20 ಪಂದ್ಯಗಳಿಗೆ ಒಂದು ಅರ್ಧಶತಕ ಚಚ್ಚಿದ್ದಾರೆ ಕ್ರಿಸ್‌ ಗೇಲ್‌. ಟಿ20 ಕ್ರಿಕೆಟ್‌ನಲ್ಲಿ ರನ್‌ ಗಳಿಕೆಯ ವಿಚಾರದಲ್ಲಿ ಮೊದಲ ಸ್ಥಾನದಲ್ಲಿರುವ ಕ್ರಿಸ್‌ ಗೇಲ್‌ ಅವರಿಗೂ ಎರಡನೇ ಸ್ಥಾನದಲ್ಲಿರುವ ಕೀರನ್ ಪೊಲ್ಲಾರ್ಡ್‌ಗೂ 3,202 ರನ್‌ಗಳ ಅಂತರವಿದೆ.

ವೆಸ್ಟ್ ಇಂಡೀಸ್‌ನವರೇ ಆದ ಆಲ್ರೌಂಡರ್ ಕೀರನ್ ಪೊಲ್ಲಾರ್ಡ್‌ 10,836 ರನ್‌ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಶೋಯೆಬ್ ಮಲಿಕ್‌ 10,741 ಹಾಗೂ ಡೇವಿಡ್ ವಾರ್ನರ್ 10,017 ರನ್‌ ಬಾರಿಸಿ ಟಾಪ್ 4 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ

Follow Us:
Download App:
  • android
  • ios