Asianet Suvarna News Asianet Suvarna News

40 ಓವರ್‌ಗೆ ಇಳಿಯಲಿದ್ಯಾ ಏಕದಿನ ಕ್ರಿಕೆಟ್‌ ಮಾದರಿ?

60 ಓವರ್‌ಗಳಿದ್ದ ಏಕದಿನ ಕ್ರಿಕೆಟ್‌ ಮಾದರಿ ಆ ಬಳಿಕ 50 ಓವರ್‌ಗಳಿಗೆ ಇಳಿದಿತ್ತು. ಆದರೆ, ಏಕದಿನ ಕ್ರಿಕೆಟ್‌ಅನ್ನು ಇನ್ನಷ್ಟು ಅಂದಗಾಣಿಸುವ ನಿಟ್ಟಿನಲ್ಲಿ ಇದು 40 ಓವರ್‌ಗಳಿಗೆ ಇಳಿಯುವ ಬಗ್ಗೆ ಚರ್ಚೆ ನಡೆಯುತ್ತಿದೆ.
 

Wasim Akram feels ODI format needs transformation Should be reduced 40 overs per side san
Author
First Published Dec 17, 2023, 5:58 PM IST

ನವದೆಹಲಿ (ಡಿ.17): ಪಾಕಿಸ್ತಾನದ ಮಾಜಿ ವೇಗಿ ವಾಸಿಂ ಅಕ್ರಮ್ ಇತ್ತೀಚೆಗೆ ಏಕದಿನ ಕ್ರಿಕೆಟ್ ಬಗ್ಗೆ ತಮ್ಮ ಪ್ರಮುಖ ಅಭಿಪ್ರಾಯವನ್ನು ನೀಡಿದ್ದಾರೆ. ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ನಡೆಯುತ್ತಿರುವ ಟೆಸ್ಟ್‌ನಲ್ಲಿ ಕಾಮೆಂಟರಿ ತಂಡದ ಭಾಗವಾಗಿರುವ ಅಕ್ರಮ್ 50-ಓವರ್‌ಗಳ ಸ್ವರೂಪದಲ್ಲಿ ಮೆನ್ ಇನ್ ಗ್ರೀನ್‌ನ ಪ್ರಸ್ತುತ ಸ್ಥಿತಿಯ ಕುರಿತು ಮಾತನಾಡಿದರು. 2023ರ ಏಕದಿನ ವಿಶ್ವಕಪ್‌ ನಂತರ, ಬಾಬರ್ ಅಜಮ್ ಅವರನ್ನು ಎಲ್ಲಾ  ಪ್ರಕಾರದ ಕ್ರಿಕೆಟ್‌ ನಾಯಕತ್ವದಿಂದ ಅವರನ್ನು ಕೆಳಗಿಳಿಸಲಾಗಿದೆ. ಶಾನ್ ಮಸೂದ್ ಪಾಕಿಸ್ತಾನ ಟೆಸ್ಟ್‌ ತಂಡವನ್ನು ಮುನ್ನಡೆಸಲಿದ್ದರೆ, ಶಾಹೀನ್ ಅಫ್ರಿದಿ T20I ತಂಡವನ್ನು ಮುನ್ನಡೆಸಲಿದ್ದಾರೆ. 2024ರ ನವೆಂಬರ್‌ವರೆಗೆ ಪಾಕಿಸ್ತಾನ ತಂಡಕ್ಕೆ ಏಕದಿನ ಕ್ರಿಕೆಟ್‌ ಸರಣಿಗಳಿಲ್ಲ. ಆ ಕಾರಣಕ್ಕಾಗಿ ಏಕದಿನ ಕ್ರಿಕೆಟ್‌ಗೆ ಈವರೆಗೂ ಪಾಕಿಸ್ತಾನ ತಂಡದ ನಾಯಕರನ್ನು ಘೋಷಣೆ ಮಾಡಲಾಗಿಲ್ಲ.

ಮುಂದೆ ಇನ್ನೊಂದು 50 ಓವರ್‌ಗಳ ವಿಶ್ವಕಪ್‌ ಟೂರ್ನಿ ಬರುತ್ತದೆ? ದೇವರೆ, ಏಕದಿನ ಕ್ರಿಕಟ್‌ ಮಾದರಿಗೆ ಏನಾದರೂ ಮಾಡಿ. ಇದು ಬಹಳ ದೀರ್ಗವಾಗಿದೆ. ಈಗಾಗಲೇ ಏಕದಿನ ಕ್ರಿಕೆಟ್‌ ಮಾಯವಾಗಿ ಹೋಗಿದೆ. ಅದರಲ್ಲೂ ದ್ವಿಪಕ್ಷೀಯ ಸರಣಿಗಳಲ್ಲಿ ಏಕದಿನ ಕ್ರಿಕೆಟ್‌ ಕಾಣುತ್ತಲೇ ಇಲ್ಲ. ಟಿ20 ಹಾಗೂ ಟೆಸ್ಟ್‌ ಕ್ರಿಕೆಟ್‌ಗಿಂತ ಅದು ಬಹಳ ಭಿನ್ನ. ಇವೆರಡರ ನಡುವೆ ಏಕದಿನ ಕ್ರಿಕೆಟ್‌ ಸಿಕ್ಕಿಹಾಕಿಕೊಂಡಿದೆ. ಇದರಲ್ಲಿ ಆಡಬೇಕಾದಲ್ಲಿ ನೀವು ಸ್ಪೆಷಲಿಸ್ಟ್‌ ಆಗಿರಬೇಕು ಎಂದು ವಾಸಿಂ ಅಕ್ರಮ್‌ ಕಾಮೆಂಟರಿಯಲ್ಲಿ ಹೇಳಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ನನ್ನ ಏಕೈಕ ಸಮಸ್ಯೆ ಏನೆಂದರೆ, ಅದು 10 ರಿಂದ 40ನೇ ಓವರ್‌. ಹೆಚ್ಚಿನ ಪಂದ್ಯಗಳಲ್ಲಿ ಈ ಓವರ್‌ಗಳಲ್ಲಿ ಏನೂ ಆಗೋದಿಲ್ಲ. ಈ ಹಂತದಲ್ಲಿ ತಂಡಗಳು ಓವರ್‌ಗೆ 4ರನ್‌ನಂತೆ ಆಡುತ್ತದೆ.  ಬೌಲಿಂಗ್‌ ಸೈಡ್‌ ಕೂಡ ಓಕೆ. ನಾವು ನಿಮಗೆ 4ಕ್ಕಿಂತ ಹೆಚ್ಚಿನ ರನ್‌ ನೀಡೋದಿಲ್ಲ ಎಂದು ಆಟವಾಡುತ್ತದೆ. ಮೊದಲ 10 ಓವರ್‌ಗಳು ಹಾಗೂ ಕೊನೆಯ 10 ಓವರ್‌ಗಳಲ್ಲಿ ಪವರ್‌ ಪ್ಲೇ ಬರುವ ಕಾರಣ ಬಹಳ ಎಕ್ಸೈಟ್‌ ಆಗಿರುತ್ತದೆ. ಈ ಸಮಯದಲ್ಲಿ ಪಂದ್ಯವನ್ನು ನೋಡಲು ಖುಷಿಯಾಗುತ್ತದೆ ಎಂದು ಅವರು ಹೇಳಿದ್ದಾರೆ.

40 ಓವರ್‌ಗಳ ಗೇಮ್‌ ಆಗಬೇಕು:  ಇದಲ್ಲದೆ, ಏಕದಿನ ಕ್ರಿಕೆಟ್ ಅನ್ನು ಮೊಟಕುಗೊಳಿಸಿ ಅದನ್ನು 50 ರಿಂದ 40 ಓವರ್‌ಗಳಾಗಿ ಆಡಲು ನೋಡುವುದಾಗಿ ವಾಸಿಂ ಅಕ್ರಮ್‌ ಹೇಳಿದ್ದಾರೆ. T20 ಕ್ರಿಕೆಟ್ ಅನ್ನು ಪರಿಚಯಿಸಿದಾಗಿನಿಂದ ಗಮನವು ಅದರತ್ತ ಹೆಚ್ಚಾಗಿ ಹೋಗಿರುವ ಕಾರಣ ಏಕದಿನ ಕ್ರಿಕೆಟ್‌ ಆಸಕ್ತಿ ಮತ್ತಷ್ಟು ಕಡಿಮೆಯಾಗಿದೆ ಎಂದು ಹೇಳಿದರು. “ನಾನು ಬಹುಶಃ 50 ಓವರುಗಳಿಗೆ ಬದಲಾಗಿ 40 ಓವರ್‌ಗಳ ಪಂದ್ಯವನ್ನು ಇಷ್ಟಪಡುತ್ತೇನೆ. ಟಿ20 ಸ್ವರೂಪದಿಂದಾಗಿ ಏಕದಿನ ಮಾದರಿ ಸ್ವಲ್ಪಮಟ್ಟಿಗೆ ಮರೆಯಾಗುತ್ತಿದೆ. ಟೆಸ್ಟ್ ಕ್ರಿಕೆಟ್ ಅಲ್ಟಿಮೇಟ್‌' ಎಂದು ಅಕ್ರಂ ಹೇಳಿದ್ದಾರೆ.

ನಟಿಯ ರೇಪ್‌ ಮಾಡಿದ್ರಾ ಜೆಎಸ್‌ಡಬ್ಲ್ಯು ಗ್ರೂಪ್‌ ಸಿಎಂಡಿ ಸಜ್ಜನ್‌ ಜಿಂದಾಲ್‌, ಮುಂಬೈನಲ್ಲಿ ಎಫ್‌ಐಆರ್‌

ಸಚಿನ್‌ ಕೂಡ ಹಿಂದೊಮ್ಮೆ ಏಕದಿನ ಕ್ರಿಕೆಟ್‌ಅನ್ನು ತಲಾ 25 ಓವರ್‌ಗಳ 4 ಇನ್ನಿಂಗ್ಸ್‌ ಮಾಡುವಂತೆ ಸಲಹೆ ನೀಡಿದ್ದರು. ಆದರೆ, ಹಾಗೆ ಮಾಡಿದರೂ ಪಂದ್ಯವನ್ನು ಮೂರು ದಿನಗಳ ಕಾಲ ಆಡುವಂತ ಸ್ಥಿತಿ ಬರಬಹುದು. ತಲಾ 25 ಓವರ್‌ಗಳ ಎರಡು ಇನ್ನಿಂಗ್ಸ್‌ಗಳಿರುವ ಪಂದ್ಯವನ್ನು ನಾನು 2001ರಲ್ಲಿ ಕಾರ್ಡಿಫ್‌ನಲ್ಲಿ ಆಡಿದ್ದೆ. ಇದು ಬಹಳ ಇಂಟರೆಸ್ಟಿಂಗ್‌ ಆಗಿತ್ತು. ಆದರೆ, ಬಹಳ ದೀರ್ಘ ಎನಿಸಿತ್ತು ಎಂದು ಹೇಳಿದ್ದಾರೆ.

ಆವೇಶ್-ಆರ್ಶದೀಪ್ ಬಿರುಗಾಳಿ, ಹರಿಣಗಳ ವಿಕೆಟ್ ಚೆಲ್ಲಾಪಿಲ್ಲಿ: ಮೊದಲ ಒನ್‌ಡೇ ಗೆಲ್ಲಲು ಭಾರತಕ್ಕೆ 117 ಗುರಿ

Follow Us:
Download App:
  • android
  • ios