ಹೈದರಾಬಾದ್(ಜು.26): ಕೊರೋನಾ ಚಿಕಿತ್ಸೆ ಪಡೆದು ಗುಣಮುಖರಾದವರು ಪ್ಲಸ್ಮಾ ದಾನ ಮಾಡಿ ಇತರರ ಜೀವ ಉಳಿಸಿ ಎಂದು ಹೈದರಾಬಾದ್ ಪೊಲೀಸರು ಅಭಿಯಾನ ಆರಂಭಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಕೈಜೋಡಿಸಿದ್ದಾರೆ. 

IPL 2020 ಆರಂಭದ ದಿನಾಂಕ ಖಚಿತ ಪಡಿಸಿದ ಬ್ರಿಜೇಶ್ ಪಟೇಲ್

ಹೈದರಾಬಾದ್ ಪೊಲೀಸರು ವಿಡಿಯೋ ಮೂಲಕ ಪ್ಲಸ್ಮಾ ದಾನ ಮಾಡಲು ಮನವಿ ಮಾಡಿದ್ದರು. ಕೊರೋನಾದಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡಿ ಇತರರ ಜೀವ ಉಳಿಸಲು ನೆರವಾಗಬೇಕು ಎಂದು ಪೊಲೀಸರು ಮನವಿ ಮಾಡಿದ್ದರು. ಈ ವಿಡಿಯೋ ಟ್ವೀಟ್ ಮಾಡಿದ್ದರು.

ಇದೀಗ ವಿವಿಎಸ್ ಲಕ್ಷಣ್ ಪೊಲೀಸರ ಕಾರ್ಯವನ್ನು ಬೆಂಬಲಿಸಿದ್ದಾರೆ. ಇಷ್ಟೇ ಅಲ್ಲ ಲಕ್ಷ್ಮಣ್ ಕೂಡ ಪ್ಲಾಸ್ಮಾ ದಾನ ಮಾಡಲು ಮನವಿ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

 

ತೆಲಂಗಾಣದಲ್ಲಿ 40,000 ಕರೋನಾ ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು ತೆಲಂಗಾಣದಲ್ಲಿ 52, 466 ಕೊರೋನಾ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಹೇಳಿದೆ. 455 ಮಂದಿ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ.