ದುಬೈ(ಆ.28): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ತಮ್ಮ ಅಭಿಮಾನಿಗಳಿಗೆ ಗುರುವಾರಷ್ಟೇ ತಾವು ಜನವರಿ ವೇಳೆಗೆ ಮೂರು ಮಂದಿಯಾಗುತ್ತೇವೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಸಿಹಿಸುದ್ದಿಯನ್ನು ನೀಡಿದ್ದರು.

ವಿರುಷ್ಕಾ ಜೋಡಿ ತಮ್ಮ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮುದ್ದಾದ ಫೋಟೋವನ್ನು ಶೇರ್ ಮಾಡಿಕೊಳ್ಲುವ ಮೂಲಕ ನಾವೀಗ ಮೂರು ಮಂದಿ. ಜನವರಿ ವೇಳೆ ಬರುತ್ತಿದ್ದಾರೆ ಎಂದು ಬರೆದುಕೊಂಡಿದ್ದರು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರಲಾರಂಭಿಸಿದೆ. 

 
 
 
 
 
 
 
 
 
 
 
 
 

And then, we were three! Arriving Jan 2021 ❤️🙏

A post shared by Virat Kohli (@virat.kohli) on Aug 26, 2020 at 10:32pm PDT

ಮೊದಲಿಗೆ ಲೆಗ್‌ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅಣ್ಣ ಅತ್ತಿಗೆಗೆ ಅಭಿನಂದನೆಗಳು ಎಂದು ಶುಭ ಕೋರಿದ್ದಾರೆ. ನಂತರ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ ಕೂಡಾ ಅಭಿನಂದನೆಗಳು ಸಹೋದರ ಎಂದು ಶುಭ ಹಾರೈಸಿದರು.

IPL ಆರಂಭಕ್ಕೂ ಮುನ್ನ ಅಭಿಮಾನಿಗಳಿಗೆ ಗುಡ್‌ ನ್ಯೂಸ್ ನೀಡಿದ ವಿರುಷ್ಕಾ ಜೋಡಿ

ಅಭಿನಂದನೆಗಳು ಕಾಕಾ ಎಂದ ಗೇಲ್: ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಕ್ರಿಸ್ ಗೇಲ್, ಟೀಂ ಇಂಡಿಯಾ ನಾಯಕನಿಗೆ ವಿನೂತನ ಶೈಲಿಯಲ್ಲಿಯೇ ಶುಭ ಕೋರಿದ್ದಾರೆ. ಅಭಿನಂದನೆಗಳು ಕಾಕಾ ಎನ್ನುವ ಮೂಲಕ ದೇಸಿ ಸೊಗಡಿನಲ್ಲೇ ಗೇಲ್ ಶುಭ ಹಾರೈಸಿದ್ದಾರೆ. 

ಈ ಈ ರೀತಿ ಶುಭ ಕೋರುತ್ತಿದ್ದಂತೆಯೇ ಈ ಕಮೆಂಟ್‌ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಗೇಲ್ ಭಾರತೀಯ ಭಾಷೆಗಳ ಮೇಲೆ ಅಭಿಮಾನದಿಂದಲೇ ಕಾಕಾ ಎಂದು ಶುಭಕೋರಿದ್ದಾರೆ ಎಂದು ಪೋಸ್ಟ್ ಮಾಡುವ ಮೂಲಕ ಈ ಕಮೆಂಟ್‌ನ್ನು ವೈರಲ್ ಮಾಡಿದ್ದಾರೆ.

ಸದ್ಯ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದುಬೈನಲ್ಲಿದ್ದು, 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿದ್ದಾರೆ. ಕಳೆದ 12 ಆವೃತ್ತಿಗಳಲ್ಲೂ ಕಪ್ ಗೆಲ್ಲಲು ವಿಫಲವಾಗಿರುವ ರಾಯಲ್ ಚಾಲೆಂಜರ್ಸ್‌ ತಂಡ ಇದೇ ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಐಪಿಎಲ್‌ ಟೂರ್ನಿಯಲ್ಲಿ ಹೊಸ ಉತ್ಸಾಹದೊಂದಿಗೆ ಕಣಕ್ಕಿಳಿಯಲು ಎದುರು ನೋಡುತ್ತಿದೆ.
"