ವಿರಾಟ್ ಕೊಹ್ಲಿ ಇಯರ್​ಬಡ್ಸ್​​ ಮೇಲೆ ಎಲ್ಲರ ಕಣ್ಣು..! ಏನಿದರ ವಿಶೇಷತೆ? ಬೆಲೆ ಎಷ್ಟು?

ವಿರಾಟ್ ಕೊಹ್ಲಿ ಇಯರ್‌ ಬಡ್ಸ್‌ ಈಗ ಟಾಕ್ ಆಫ್‌ ದಿ ಟೌನ್
ವಿರಾಟ್ ಕೊಹ್ಲಿ ಬಳಸುವ ಇಯರ್‌ ಬಡ್ಸ್‌ ಭಾರತದಲ್ಲಿ ಸಿಗೊಲ್ಲ
ವಿರಾಟ್ ಕೊಹ್ಲಿ ಯೂಸ್ ಮಾಡುವ ಇಯರ್ ಬಡ್ಸ್‌ ಬೆಲೆ 20 ಸಾವಿರ..!

Virat Kohli uses Rs 20000 Apple earbuds that are not available in India kvn

ಬೆಂಗಳೂರು(ಜು.27) ರನ್​ಮಷಿನ್ ವಿರಾಟ್ ಕೊಹ್ಲಿ ಒಬ್ಬ ಕ್ರಿಕೆಟರ್ ಅಷ್ಟೇ ಅಲ್ಲ, ಯೂಥ್ ಐಕಾನ್ ಕೂಡ ಹೌದು. ಕೊಹ್ಲಿ ತಮ್ಮ ಲುಕ್, ಸ್ಟೈಲ್​ನಿಂದಲೂ ಅಭಿಮಾನಿಗಳನ್ನ ಸೆಳೆಯುತ್ತಾರೆ. ಆಫ್​ಫೀಲ್ಡ್​ನಲ್ಲಿ ಸದಾ ಕೂಲ್ ಆ್ಯಂಡ್​ ಕಾಮ್ ಆಗಿರೋ ಕೊಹ್ಲಿ ಮೂಸಿಕ್ ಲವರ್ ಕೂಡಾ ಹೌದು. ಕೊಹ್ಲಿ ಕಿವಿಯಲ್ಲಿ ಯಾವಾಗ್ಲೂ ಇಯರ್​ಬಡ್ಸ್​ ಹಾಕಿಕೊಂಡು, ತಮ್ಮಿಷ್ಟದ ಹಾಡುಗಳನ್ನ ಕೇಳ್ತಿರ್ತಾರೆ. 

ಅದರಂತೆ ಮೊನ್ನೆ ವಿಂಡೀಸ್ ಪ್ಲೇಯರ್​​ ಜೊಶುವಾ ಡಿ ಸಿಲ್ವಾ ಅವರ ತಾಯಿಯ ಭೇಟಿ ವೇಳೆ, ಕೊಹ್ಲಿ ಇಯರ್​ಬಡ್ಸ್​ ಹಾಕಿಕೊಂಡಿದ್ರು. ಈ ಇಯರ್​ ಬಡ್ಸೇ ಈಗ ಸಖತ್ ಟ್ರೆಂಡಿಂಗ್​ನಲ್ಲಿವೆ.

ಕೊಹ್ಲಿ ಯಾವ ಇಯರ್​ಬಡ್ಸ್​​ಗಳನ್ನ ಬಳಸ್ತಾರೆ ಅಂತ ಫ್ಯಾನ್ಸ್ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ರು. ಅದಕ್ಕೀಗ ಉತ್ತರ ಸಿಕ್ಕಿದೆ.  ಕೊಹ್ಲಿ Beats Powerbeats Pro TWS ಅನ್ನೋ ಇಯರ್​ಬಡ್ಸ್​ನ ಬಳಸುತ್ತಾರೆ. ಇವು ​ ಇಂಪೋರ್ಟೆಡ್ ಆಗಿದ್ದು, ಭಾರತದ ಮಾರುಕಟ್ಟೆಯಲ್ಲಿ ಸಿಗೋದೆ ಇಲ್ಲ.  ಆ್ಯಪಲ್ ಕಂಪನಿಯ ಅಧಿಕೃತ ಮಾರಾಟ ಮಳಿಗೆಯಲ್ಲಿ ಇವುಗಳ ಬೆಲೆ 20 ಸಾವಿರ ರೂಪಾಯಿ ಅಂತ ಹೇಳಲಾಗಿದೆ. 

ರಾಂಚಿ ರಸ್ತೆಯಲ್ಲಿ ವಿಂಟೇಜ್‌ ರೋಲ್ಸ್ ರಾಯ್ಸ್‌ ಕಾರು ಡ್ರೈವ್ ಮಾಡಿದ ಧೋನಿ..! ವಿಡಿಯೋ ವೈರಲ್

ನೀರಿನಲ್ಲಿ ಬಿದ್ದರೂ ಹಾಳಾಗಲ್ಲ ಈ ಇಯರ್​ಬಡ್ಸ್​..! 

ಈ ಇಯರ್​ ಬಡ್ಸ್​​​ ವಿಶೇಷತೆ ಬಗ್ಗೆ ಹೇಳೋದಾದ್ರೆ, ಇವು ಅಡ್ಜಸ್ಟೇಬಲ್‌ ಆಗಿದ್ದು, ಲೈಟ್​ವೇಯ್ಟ್​ನಿಂದ ಕೂಡಿದ್ದು ಸಖತ್ ಕಂಫರ್ಟ್ ಆಗಿರುತ್ವೆ. ಅಲ್ಲದೇ ವಾಟರ್​ ಪ್ರೂಫ್ ಆಗಿದ್ದು, ಬೆವರು ಮತ್ತು ಮಳೆ ಹನಿ ಬಿದ್ದರು ಏನು ಆಗಲ್ಲ.  ಒಂದೆಡೆ ಕೊಹ್ಲಿಯ ಇಯರ್​ಬಡ್ಸ್​​​ ಟ್ರೆಂಡಿಂಗ್​ನಲ್ಲಿದ್ರೆ, ಮತ್ತೊಂದೆಡೆ ಕೆರಿಬಿಯನ್ನರ ವಿರುದ್ಧ ಕೊಹ್ಲಿಯ ಅಂಕಿಅಂಶಗಳೂ ಟ್ರೆಂಡಿಂಗ್​ನಲ್ಲಿವೆ.

ವಿಂಡೀಸ್ ವಿರುದ್ಧ ಕೊಹ್ಲಿಯ ಅದ್ಭುತ ದಾಖಲೆ..! 

ಯೆಸ್, ಇಂಡಿಯಾ- ವೆಸ್ಟ್ ಇಂಡೀಸ್ ಏಕದಿನ ಸರಣಿ ಇಂದಿನಿಂದ ಆರಂಭವಾಗಲಿದೆ. ಟೆಸ್ಟ್​ ಸರಣಿ ಸೋತ ವಿಂಡೀಸ್, ಫಿಫ್ಟಿ ಓವರ್​ಫಾರ್ಮೆಟ್​ನಲ್ಲಿ ಸ್ಟ್ರಾಂಗ್​ ಕಮ್​ಬ್ಯಾಕ್ ಮಾಡಲು ಪಣ ತೊಟ್ಟಿದೆ. ಆದ್ರೆ,  ಕೊಹ್ಲಿಯನ್ನ ಕಟ್ಟಿಹಾಕೋದು ಹೇಗೆ ಅನ್ನೋದೆ ವಿಂಡೀಸ್​ಗೆ ದೊಡ್ಡ ಪ್ರಶ್ನೆಯಾಗಿದೆ. ಯಾಕೆಂದ್ರೆ, ಕೊಹ್ಲಿ ವಿಂಡೀಸ್ ವಿರುದ್ಧ ಅದ್ಭುತ ಟ್ರ್ಯಾಕ್​ ರೆಕಾರ್ಡ್ ಹೊಂದಿದ್ದಾರೆ.

Ind vs WI: ಇಂದಿನಿಂದ ಭಾರತ vs ವೆಸ್ಟ್ ಇಂಡೀಸ್ ಏಕದಿನ ಸರಣಿ..!

ವೆಸ್ಟ್ ಇಂಡೀಸ್ ವಿರುದ್ಧ ಕೊಹ್ಲಿ ಈವರೆಗು 42 ಪಂದ್ಯಗಳನ್ನಾಡಿದ್ದು, 66.50ರ ಸರಾಸರಿಯಲ್ಲಿ 2261 ರನ್​ ಕಲೆಹಾಕಿದ್ದಾರೆ. 9 ಶತಕ, 11 ಅರ್ಧಶತಕ ಸಿಡಿಸಿದ್ದಾರೆ. ಇನ್ನೊಂದು ಶತಕ ಬಾರಿಸಿದ್ರೆ, ಶ್ರೀಲಂಕಾ ಮತ್ತು ವಿಂಡೀಸ್ ವಿರುದ್ಧ 10 ಶತಕ ಬಾರಿಸಿದ ದಾಖಲೆ ಬರೆಯಲಿದ್ದಾರೆ. ಒಟ್ಟಿನಲ್ಲಿ ದೂರದ ಊರಲ್ಲಿ, ಹೊತ್ತಲ್ಲದ ಹೊತ್ತಲ್ಲಿ ಟೀಮ್ ಇಂಡಿಯಾ ವಿಂಡೀಸ್ ವಿರುದ್ದ ಏಕದಿನ ಸರಣಿಗೆ ರೆಡಿಯಾಗಿದೆ. ಇಂತಹ ನಾಮ್​ಕಾವಾಸ್ತೆ ಸರಣಿಯಲ್ಲೂ  ಕೊಹ್ಲಿ ಸಖತ್ ಸುದ್ದಿಯಲ್ಲಿದ್ದಾರೆ.

Latest Videos
Follow Us:
Download App:
  • android
  • ios