556 ದಿನಗಳ ಬಳಿಕ ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕತ್ವ ವಹಿಸಿಕೊಂಡು ತಂಡವನ್ನು ಸತತ ಸೋಲಿನಿಂದ ಪಾರು ಮಾಡಿದ್ದಾರೆ. ನಾಯಕನಾಗಿ ಕೊಹ್ಲಿ ತೆಗೆದುಕೊಂಡ ಕೆಲ ನಿರ್ಧಾರವೇ ಈ ಗೆಲುವಿಗೆ ಕಾರಣ. ಇದರ ಜೊತೆಗೆ ಕೊಹ್ಲಿ ಕೆಲ ದಾಖಲೆಯನ್ನು ನಿರ್ಮಿಸಿದ್ದಾರೆ. ಇದೀಗ ಅಭಿಮಾನಿಗಳು ಆರ್‌ಸಿಬಿಗೆ ಕೊಹ್ಲಿ ನಾಯಕನಾಗಿ ಮುಂದುವರಿಯಲಿ ಎಂದು ಆಗ್ರಹಿಸಿದ್ದಾರೆ.
ಮೊಹಾಲಿ(ಏ.20): IPL 2023 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೆ ಗೆಲುವಿನ ಹಳಿಗೆ ಮರಳಿದೆ. ವಿಶೇಷ ಅಂದರೆ ತಂಡ ಸತತ ಸೋಲಿನಿಂದ ಕಂಗೆಟ್ಟಿರುವಾಗ ಮತ್ತೆ ವಿರಾಟ್ ಕೊಹ್ಲಿ ಕೈಹಿಡಿದಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ಕೊಹ್ಲಿ ನಾಯಕತ್ವ ವಹಿಸಿಕೊಂಡು ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ. ಈ ಮೂಲಕ ಕೆಲ ದಾಖಲೆ ಬರೆದಿದ್ದಾರೆ. ವಿರಾಟ್ ಕೊಹ್ಲಿ ಬರೋಬ್ಬರಿ 556 ದಿನಗಳ ಬಳಿಕ ಆರ್‌ಸಿಬಿ ನಾಯಕತ್ವ ವಹಿಸಿಕೊಂಡಿದ್ದಾರೆ. ಇನ್ನು ಮರಳಿ ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದ್ದಾರೆ.
ನಾಯಕನಾಗಿ ಕಣಕ್ಕಿಳಿದ ಕೊಹ್ಲಿ ಬ್ಯಾಟಿಂಗ್‌ನಲ್ಲೂ ದಿಟ್ಟ ಹೋರಾಟ ನೀಡಿದ್ದಾರೆ. 47 ಎಸೆತದಲ್ಲಿ ಕೊಹ್ಲಿ 59 ರನ್ ಸಿಡಿಸಿ ಮಿಂಚಿದ್ದಾರೆ. ಸ್ಲೋ ವಿಕೆಟ್‌ನಲ್ಲಿ ಕೊಹ್ಲಿ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರನಿರ್ವಹಿಸಿದ್ದಾರೆ. ಇತ್ತ ಫಾಪ್ ಡುಪ್ಲೆಸಿಸ್ ಜೊತೆಗೆ ಮೊದಲ ವಿಕೆಟ್‌ಗೆ 100 ಪ್ಲಸ್ ರನ್ ಜೊತೆಯಾಟ ನೀಡುವ ಮೂಲಕ ಆರ್‌ಸಿಬಿ ಅತ್ಯುತ್ತಮ ಆರಂಭ ಒದಗಿಸಿದ್ದಾರೆ.
IPL 2023 ಸಿರಾಜ್ ಬೆಂಕಿ ಬೌಲಿಂಗ್, ಪಂಜಾಬ್ ಬಗ್ಗುಬಡಿದ ಆರ್‌ಸಿಬಿ..!
ಪಂಜಾಬ್ ತಂಡಕ್ಕೆ 175 ರನ್ ಟಾರ್ಗೆಟ್ ನೀಡಿದ ಆರ್‌ಸಿಬಿ ಬೌಲಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿತು. ಪಂಜಾಬ್ ಬ್ಯಾಟ್ಸ್‌ಮನ್, ಪಂದ್ಯದ ಲೆಕ್ಕಾಚಾರ ಅರಿತು 3ನೇ ಓವರ್‌ನಲ್ಲಿ ಹಸರಂಗಗೆ ಬೌಲಿಂಗ್ ನೀಡಿ ಯಶಸ್ವಿಯಾದರು. ನಾಯಕನಾಗಿ ಇಂದು 3 ಯಶಸ್ವಿ ರಿವ್ಯೂವ್ ಪಡೆಯುವ ಮೂಲಕ ಆರ್‌ಸಿಬಿ ತಂಡಕ್ಕೆ ಮಹತ್ವದ ಮುನ್ನಡೆ ತಂದುಕೊಟ್ಟರು.
ಐಪಿಎಲ್ ಟೂರ್ನಿಯಲ್ಲಿ 100 ಬಾರಿ 30 ಪ್ಲಸ್ ರನ್ ಸಿಡಿಸಿದ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲ ಐಪಿಎಲ್ ಟೂರ್ನಿಯಲ್ಲಿ 600 ಬೌಂಡರಿ ಬಾರಿಸಿದ ದಾಖಲೆಯನ್ನು ಬರೆದಿದ್ದಾರೆ.
ಇದೀಗ ಅಭಿಮಾನಿಗಳು ಕೊಹ್ಲಿ ನಾಯಕನಾಗಿ ಮುಂದುವರಿಯಲಿ ಎಂದು ಆಗ್ರಹಿಸಿದ್ದಾರೆ.ಮತ್ತೆ ಅದೇ ಆಕ್ರಮಣಕಾರಿ ನಾಯಕತ್ವ ಮೈದಾನದಲ್ಲಿ ನೋಡುವುದೇ ಆನಂದ. ಕೊಹ್ಲಿ ಆರ್‌ಸಿಬಿ ನಾಯಕತ್ವ ವಹಿಸಿಕೊಳ್ಳಲಿ. ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ಈ ಬಾರಿ ಅತ್ಯುತ್ತಮ ಹೋರಾಟ ನೀಡುವುದರಲ್ಲಿ ಅನುಮಾನವಿಲ್ಲ ಎಂದು ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
ಫಾಫ್ ಡು ಪ್ಲೆಸಿಸ್ ಇದ್ದೂ ವಿರಾಟ್ ಕೊಹ್ಲಿ RCB ನಾಯಕರಾಗಿದ್ದು ಯಾಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ..!
ಆರ್‌ಸಿಬಿ ಪರ ಕೊಹ್ಲಿ 59 ರನ್ ಸಿಡಿಸಿದರೆ, ಫಾಫ್ ಡುಪ್ಲೆಸಿಸ್ 56 ಎಸೆತದಲ್ಲಿ 84 ರನ್ ಸಿಡಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ ಅಬ್ಬರಿಸಿಲ್ಲ. ಮಹಿಪಾಲ್ ಲೊಮ್ರೊರ್, ಶಹಬಾಜ್ ಅಹಮ್ಮದ್ ಕೊನೆಯ ಹಂತದಲ್ಲಿ ನಿರೀಕ್ಷಿತ ರನ್ ಹರಿದು ಬರಲಿಲ್ಲ. ಆರ್‌ಸಿಬಿ 174 ರನ್ ಸಿಡಿಸಿತು. ಇತ್ತ ಪಂಜಾಬ್ ಕಿಂಗ್ಸ್ ಪರ ಪ್ರಭಾಸಿಮ್ರನ್ ಸಿಂಗ್ 46 ರನ್ ಕಾಣಿಕೆ ನೀಡಿದರೆ, ಜಿತೇಶ್ ಶರ್ಮಾ 41 ರನ್ ಸಿಡಿಸಿದರು. ಇನ್ನುಳಿದವರಿಂದ ರನ್ ಬರಲಿಲ್ಲ. ಹೀಗಾಗಿ ಪಂಜಾಬ್ ತಂಡ 18.2 ಓವರ್‌ಗಳಲ್ಲಿ 150 ರನ್‌ಗೆ ಆಲೌಟ್ ಆಯಿತು. ಆರ್‌ಸಿಬಿ 24 ರನ್ ಗೆಲುವು ದಾಖಲಿಸಿತು.
