* ಇಂಗ್ಲೆಂಡ್ ವಿರುದ್ಧ ಟೆಸ್ಟ್ ಗೆದ್ದ ಕೊಹ್ಲಿ ಪಡೆ* ಗೆಲುವಿನ ನಂತರ ಕೊಹ್ಲಿ ವರ್ತನೆಯನ್ನು ಕ್ಲಾಸ್ ಲೆಸ್ ಎಂದ ಇಂಗ್ಲೆಂಡ್* ಭಾರತ ಐತಿಹಾಸಿಕ ಗೆಲುವನ್ನು ದಾಖಲಿಸಿತ್ತು* ಕೊಹ್ಲಿ ಸಹ ಅಂತದ್ದೇ ಠಕ್ಕರ್ ನೀಡಿದ್ದಾರೆ. 

ನವದೆಹಲಿ(ಸೆ. 07) ಇಂಗ್ಲೆಂಡ್ ವಿರುದ್ಧ ಭಾರತ ಟೆಸ್ಟ್ ಗೆದ್ದು ಬೀಗಿದೆ. ಭಾರತೀಯ ಆಟಗಾರರ ಸಂಭ್ರಮವೂ ಒಂದು ಕೈ ಜೋರಾಗಿಯೇ ಇತ್ತು. ಅಗ್ರೆಸಿವ್ ನಾಯಕ ವಿರಾಟ್ ಕೊಹ್ಲಿ ವಿಭಿನ್ನ ಸಂಭ್ರಮಾಚರಣೆ ಈಗ ಟ್ರೋಲ್ ಗೂ ಆಹಾರವಾಗಿದೆ.

ಗೆಲುವಿನ ನಂತ ಕೊಹ್ಲಿ ಪೀಪಿ ಊದುವ ಆಕ್ಷನ್ ಮಾಡಿ ಸಂಭ್ರಮಿಸಿದ್ದರು. ಇದಕ್ಕೆ ಕಾರಣ ಇಂಗ್ಲೆಂಡ್ ಸೋಶಿಯಲ್ ಮೀಡಿಯಾ ನಡೆದುಕೊಂಡ ರೀತಿ. ಆದರೆ ಟ್ವಿಟರ್ ನಲ್ಲಿ ಇದು ಭಿನ್ನ ಪ್ರತಿಕ್ರಿಯೆಗೆ ಕಾರಣವಾಯಿತು. 

ನೀವು ನೋಡಿರದ ಟೀಂ ಇಂಡಿಯಾ ಸಂಭ್ರಮಾಚರಣೆ

ಇದಾದ ಮೇಲೆ ಇಂಗ್ಲೆಂಡ್ ಕ್ರಿಕೆಟ್ ಆಟಗಾರರಿಗೆ ಬೆಂಬಲವಾಗಿ ನಿಲ್ಲುವ Barmy Army ಟ್ವೀಟರ್ ಮೂಲಕ ಒಂದು ಏಟನ್ನು ಕೊಟ್ಟಿದೆ. ಕೊಹ್ಲಿಯ ಅವತಾರವನ್ನು ಕ್ಲಾಸ್ ಲೆಸ್ ಎಂದು ಕರೆದಿವೆ. ಇಂಗ್ಲೆಂಡಿನ ಪತ್ರಕರ್ತರು ಕೊಹ್ಲಿ ಕಾಲೆಳೆದಿದ್ದಾರೆ.

ಭಾರತದ ಉಳಿದ ಆಟಗಾರರು ವಿಕೆಟ್ ಕಿತ್ತು ಸಂಭ್ರಮಿಸಿದರೆ ಕೊಹ್ಲಿ ಟಾಂಟ್ ನೀಡುವುದರಲ್ಲಿ.. ಸಲ್ಲದ ಟೀಕೆ ಮಾಡುವುದರಲ್ಲಿ ದಿನ ಕಳೆದರು ಎಂದು ಠಕ್ಕರ್ ಕೊಟ್ಟಿದ್ದಾರೆ.

ಟಾಪ್ ಕ್ಲಾಸ್ ಆಟಗಾರನೊಬ್ಬ ಗೆದ್ದರೆ ಈ ರೀತಿಯ ವರ್ತನೆ ತೋರಿಸುವುದಿಲ್ಲ. ಅಭಿಮಾನಿಗಳು ಮತ್ತು ಕ್ರಿಕೆಟ್ ಜಗತ್ತು ಇದನ್ನು ಬೇರೆ ರೀತಿಯೇ ನೋಡುತ್ತದೆ ಎಂದಿದ್ದಾರೆ.

ಕೊಹ್ಲಿ ಕಾಲೆಳೆದಿರುವ Barmy Army ' ನಮಗೆ ಗೊತ್ತು ಕೊಹ್ಲಿಯವರೆ, ನೀವು ಆರ್ಮಿಯಲ್ಲಿರಬೇಕಿತ್ತು.. ಅದಕ್ಕೆ ಬೇಕಾದ ಹಿಂಟ್ ಕೊಟ್ಟಿದ್ದೀರಿ ಎನ್ನುತ್ತ ಕೊಹ್ಲಿಯ 'ಪೀಪಿ ಊದುವ' ಪೋಟೋ ಶೇರ್ ಮಾಡಿಕೊಂಡಿದೆ. 

Scroll to load tweet…