Asianet Suvarna News Asianet Suvarna News

Ind vs Eng ನೀವು ನೋಡಿರದ ಟೀಂ ಇಂಡಿಯಾ ಗೆಲುವಿನ ಸಂಭ್ರಮಾಚರಣೆಯಿದು..!

* ಓವಲ್ ಟೆಸ್ಟ್‌ ಪಂದ್ಯವನ್ನು 157 ರನ್‌ಗಳಿಂದ ಜಯಿಸಿದ ಟೀಂ ಇಂಡಿಯಾ

* 50 ವರ್ಷಗಳ ಬಳಿಕ ಓವಲ್‌ ಮೈದಾನದಲ್ಲಿ ಭಾರತಕ್ಕೆ ಮೊದಲ ಗೆಲುವು

* ಅಭಿಮಾನಿಗಳ ಮನ ಗೆದ್ದ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂ ಸಂಭ್ರಮಾಚರಣೆ

Ind vs Eng Team India Oval Test Win Dressing Room Celebration goes viral kvn
Author
London, First Published Sep 7, 2021, 12:33 PM IST

ಲಂಡನ್‌(ಸೆ.07): ಮೊದಲ ಇನ್ನಿಂಗ್ಸ್‌ನ ಹಿನ್ನಡೆ ಹಾಗೂ 3ನೇ ಟೆಸ್ಟ್‌ನಲ್ಲಿನ ಆಘಾತಕಾರಿ ಸೋಲನ್ನು ಮೆಟ್ಟಿನಿಂತ ಟೀಂ ಇಂಡಿಯಾ ಇಂಗ್ಲೆಂಡ್‌ ವಿರುದ್ಧದ 4ನೇ ಟೆಸ್ಟ್‌ನಲ್ಲಿ 157 ರನ್‌ಗಳ ಅಧಿಕಾರಯುತ ಜಯ ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 2-1 ಅಭೇದ್ಯ ಮುನ್ನಡೆ ಸಾಧಿಸಿದೆ. ಇದಷ್ಟೇ ಅಲ್ಲದೇ ನೀವೆಂದೂ ನೋಡಿರದ ಡ್ರೆಸ್ಸಿಂಗ್ ರೂಂ ಸಂಭ್ರಮಾಚರಣೆಯ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೌದು, ಕೇವಲ 191 ರನ್‌ಗಳಿಗೆ ಮೊದಲ ಇನ್ನಿಂಗ್ಸ್‌ನಲ್ಲಿ ಆಲೌಟ್‌ ಆಗುವ ಮೂಲಕ ಸೋಲಿನ ಹತಾಶೆ ಮೂಡಿಸಿದ್ದ ವಿರಾಟ್‌ ಕೊಹ್ಲಿ ಪಡೆ, 2ನೇ ಇನ್ನಿಂಗ್ಸ್‌ನಲ್ಲಿ ಪುಟಿದೇಳುವ ಮೂಲಕ 466 ರನ್‌ ಸ್ಫೋಟಿಸಿತ್ತು. ಇದರೊಂದಿಗೆ ಪಂದ್ಯವನ್ನು ಗೆಲ್ಲಲು 368 ರನ್‌ಗಳ ದಾಖಲೆಯ ಗುರಿಯನ್ನು ಆತಿಥೇಯ ಇಂಗ್ಲೆಂಡ್‌ ಮುಂದೆ ಇರಿಸಿತು. ಭಾರೀ ಸವಾಲಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌, 92.2 ಓವರ್‌ಗಳಲ್ಲಿ 210 ರನ್‌ಗೆ ಸರ್ವಪತನಗೊಂಡು ಭಾರತ ಮುಂದೆ ಮಂಡಿಯೂರಿತು.

ಇಂಗ್ಲೆಂಡ್ ಬಗ್ಗುಬಡಿದ ಟೀಂ ಇಂಡಿಯಾ; ಓವಲ್ ಟೆಸ್ಟ್‌ನಲ್ಲಿ ಕೊಹ್ಲಿ ಸೈನ್ಯಕ್ಕೆ 157 ರನ್ ಗೆಲುವು!

ಓವಲ್ ಟೆಸ್ಟ್‌ ಪಂದ್ಯದ ಕೊನೆಯ ದಿನ ಆತಿಥೇಯ ಇಂಗ್ಲೆಂಡ್‌ನ ಎಲ್ಲಾ 10 ವಿಕೆಟ್‌ ಕಬಳಿಸುವ ಮೂಲಕ ವಿರಾಟ್ ಕೊಹ್ಲಿ ಪಡೆ ಸ್ಮರಣೀಯ ಗೆಲುವು ದಾಖಲಿಸಿದೆ. ಓವಲ್ ಅಂಗಳದಲ್ಲಿ ಭಾರತ ಬರೋಬ್ಬರಿ 50 ವರ್ಷಗಳ ಬಳಿಕ ಗೆಲುವಿನ ನಗೆ ಬೀರಿದೆ. ಈ ಮೊದಲು 1971ರಲ್ಲಿ ಟೀಂ ಇಂಡಿಯಾ ಇದೇ ಪಿಚ್‌ನಲ್ಲಿ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿತ್ತು. ಕಳೆದ ಲೀಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್‌ ಸೋಲು ಅನುಭವಿಸಿದ್ದ ಭಾರತ ಮತ್ತೊಮ್ಮೆ ಬಲಿಷ್ಠ ಇಂಗ್ಲೆಂಡ್‌ಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರವನ್ನೇ ನೀಡಿದೆ. ಸ್ಮರಣೀಯ ಗೆಲುವು ದಾಖಲಿಸಿ ಡ್ರೆಸ್ಸಿಂಗ್‌ ರೂಂಗೆ ಬಂದ ಟೀಂ ಇಂಡಿಯಾ ಗೆಲುವಿನ ಖುಷಿಯನ್ನು ಭರ್ಜರಿಯಾಗಿಯೇ ಆಚರಿಸಿಕೊಂಡಿದೆ. ಈ ಕುರಿತಾದ ವಿಡಿಯೋ ತುಣುಕೊಂದನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಕ್ರಿಕೆಟ್‌ ಅಭಿಮಾನಿಗಳ ಹೃದಯಗೆದ್ದಿದೆ. ಓವಲ್ ಟೆಸ್ಟ್‌ ಪಂದ್ಯದ ಗೆಲುವಿನ ರೂವಾರಿಗಳಾದ ರೋಹಿತ್ ಶರ್ಮಾ, ಉಮೇಶ್ ಯಾದವ್‌ ಶಾರ್ದೂಲ್ ಠಾಕೂರ್ ಗೆಲುವಿನ ಕ್ಷಣದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಬಿಸಿಸಿಐ ಹಂಚಿಕೊಂಡ ಸಂಪೂರ್ಣ ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್‌ ಮಾಡಿ. 
 

Follow Us:
Download App:
  • android
  • ios