ವಿರಾಟ್‌ ಕೊಹ್ಲಿ ಹಾಗೂ ಶುಭ್‌ಮನ್‌ ಗಿಲ್‌ 2023ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ವಿಶ್ವಕಪ್‌ನಲ್ಲಿ ತಂಡವನ್ನು ಫೈನಲ್‌ಗೇರಿಲು ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ಶಮಿ ವಿಶ್ವಕಪ್‌ನಲ್ಲಿ ಕೇವಲ 7 ಪಂದ್ಯಗಳಲ್ಲಿ 24 ವಿಕೆಟ್‌ ಕಬಳಿಸಿದ್ದರು.

ದುಬೈ(ಜ.05): 2023ರಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿರುವ ಭಾರತದ ತಾರಾ ಕ್ರಿಕೆಟಿಗರಾದ ವಿರಾಟ್‌ ಕೊಹ್ಲಿ, ವೇಗಿ ಮೊಹಮದ್‌ ಶಮಿ, ಬ್ಯಾಟರ್‌ ಶುಭ್‌ಮನ್‌ ಗಿಲ್‌ ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ನಾಲ್ಕನೇ ಆಟಗಾರನಾಗಿ ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್ ಹೆಸರನ್ನು ಆಯ್ಕೆ ಮಾಡಲಾಗಿದೆ. 

ವಿರಾಟ್‌ ಕೊಹ್ಲಿ ಹಾಗೂ ಶುಭ್‌ಮನ್‌ ಗಿಲ್‌ 2023ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ವಿಶ್ವಕಪ್‌ನಲ್ಲಿ ತಂಡವನ್ನು ಫೈನಲ್‌ಗೇರಿಲು ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ಶಮಿ ವಿಶ್ವಕಪ್‌ನಲ್ಲಿ ಕೇವಲ 7 ಪಂದ್ಯಗಳಲ್ಲಿ 24 ವಿಕೆಟ್‌ ಕಬಳಿಸಿದ್ದರು.

ಇಂದು ಭಾರತ-ಆಸೀಸ್‌ ವನಿತೆಯರ ಮೊದಲ ಟಿ20

ನವ ಮುಂಬೈ: ಟೆಸ್ಟ್‌ ಸರಣಿ ಗೆಲುವಿನ ಹುಮ್ಮಸ್ಸಿನ ನಡುವೆ ಏಕದಿನ ಸರಣಿಯಲ್ಲಿ 0-3 ಅಂತರದಲ್ಲಿ ವೈಟ್‌ವಾಷ್‌ ಮುಖಭಂಗಕ್ಕೊಳಗಾಗಿರುವ ಭಾರತ ಮಹಿಳಾ ತಂಡ, ಶುಕ್ರವಾರದಿಂದ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿದೆ. 

ಭಾರತ ಈ ವರೆಗೂ ಆಸೀಸ್ ವಿರುದ್ಧ 31 ಟಿ20 ಪಂದ್ಯಗಳನ್ನಾಡಿದ್ದು, ಈ ಪೈಕಿ ಕೇವಲ 7ರಲ್ಲಿ ಜಯಭೇರಿ ಬಾರಿಸಿದೆ. 23 ಪಂದ್ಯಗಳಲ್ಲಿ ಸೋಲನುಭವಿಸಿದೆ. ಈ ಬಾರಿ ತವರಿನಲ್ಲಿ ಗೆಲುವಿನ ದಾಖಲೆ ಉತ್ತಮ ಗೊಳಿಸುವ ನಿರೀಕ್ಷೆಯಲ್ಲಿದೆ. ಏಕದಿನ ಸರಣಿಯಲ್ಲಿ ಕೇವಲ 17 ರನ್‌ ಗಳಿಸಿರುವ ಹರ್ಮನ್‌ ಜೊತೆಗೆ ಸ್ಮೃತಿ ಮಂಧನಾ, ಜೆಮಿಮಾ, ಶಫಾಲಿ ವರ್ಮಾ, ರಿಚಾ ಘೋಷ್‌, ಪೂಜಾ ವಸ್ತ್ರಾಕರ್‌, ಕರ್ನಾಟಕದ ಯುವ ತಾರೆ ಶ್ರೇಯಾಂಕ ಪಾಟೀಲ್‌ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ಪಿಚ್ ರೇಟಿಂಗ್‌: ಐಸಿಸಿ, ಕ್ರೀಡಾ ತಜ್ಞರ ದ್ವಿಮುಖ ನೀತಿಗೆ ರೋಹಿತ್‌ ಶರ್ಮಾ ಕೆಂಡಾಮಂಡಲ

ಪಂದ್ಯ: ರಾತ್ರಿ 7.30ಕ್ಕೆ

ಮಹಿಳಾ ಏಕದಿನ: ರಾಜ್ಯ ತಂಡಕ್ಕೆ ಮೊದಲ ಗೆಲುವು

ಭುವನೇಶ್ವರ: ರಾಷ್ಟ್ರೀಯ ಮಹಿಳಾ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ಶುಭಾರಂಭ ಮಾಡಿದೆ. ಗುರುವಾರ ವಿದರ್ಭ ವಿರುದ್ಧ ರಾಜ್ಯಕ್ಕೆ 89 ರನ್‌ ಗೆಲುವು ಲಭಿಸಿತು. ಮೊದಲು ಬ್ಯಾಟ್ ಮಾಡಿದ ರಾಜ್ಯ ತಂಡ 7 ವಿಕೆಟ್‌ಗೆ 250 ರನ್‌ ಕಲೆಹಾಕಿತು. ದಿವ್ಯಾ ಜ್ಞಾನಾನಂದ 137 ಎಸೆತಗಳಲ್ಲಿ 137 ರನ್‌ ಸಿಡಿಸಿ ರಾಜ್ಯಕ್ಕೆ ಆಪತ್ಬಾಂಧವರಾದರು. ರೋಶಿನಿ ಕಿರಣ್‌ 38, ವೃಂದಾ ದಿನೇಶ್‌ 23 ರನ್‌ ಗಳಿಸಿದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ವಿದರ್ಭ 41.4 ಓವರಲ್ಲಿ 161ಕ್ಕೆ ಆಲೌಟಾಯಿತು. ಪುಷ್ಪಾ, ಸಹನಾ ತಲಾ 3 ವಿಕೆಟ್‌ ಪಡೆದರು. ರಾಜ್ಯ ತಂಡ ಶನಿವಾರ ಪುದುಚೇರಿ ವಿರುದ್ಧ ಆಡಲಿದೆ.

ಕೇಪ್‌ಟೌನ್‌ ಟೆಸ್ಟ್‌: ಹರಿಣಗಳ ಬೇಟೆಯಾಡಿದ ಭಾರತ, ಒಂದೂವರೆ ದಿನದಲ್ಲೇ ಟೆಸ್ಟ್‌ ಗೆದ್ದು ಇತಿಹಾಸ ನಿರ್ಮಾಣ

ಜ.8ಕ್ಕೆ ಕಿವುಡ ಮಹಿಳಾ ಟಿ10 ಟೂರ್ನಿ ಆರಂಭ

ಮುಂಬೈ: ಭಾರತದ ಕಿವುಡರ ಕ್ರಿಕೆಟ್‌ ಸಂಸ್ಥೆ ಆಯೋಜಿಸುತ್ತಿರುವ ಚೊಚ್ಚಲ ಆವೃತ್ತಿಯ ಕಿವುಡರ ಟಿ10 ಮಹಿಳಾ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿ ಮುಂಬೈನಲ್ಲಿ ಜ.8ರಿಂದ 11ರ ವರೆಗೆ ನಡೆಯಲಿದೆ. ಟೂರ್ನಿಯಲ್ಲಿ ಬೆಂಗಳೂರು ಬಾದ್‌ಶಾಸ್‌, ಪಂಜಾಬ್‌ ಲಯನ್ಸ್‌, ಯುಪಿ ವಾರಿಯರ್ಸ್‌, ಮುಂಬೈ ಸ್ಟಾರ್ಸ್‌, ಡೆಲ್ಲಿ ಬುಲ್ಸ್‌ ಹಾಗೂ ಹೈದ್ರಾಬಾದ್‌ ಈಗಲ್ಸ್‌ ತಂಡಗಳು ಸೆಣಸಾಡಲಿವೆ. ಚಾಂಪಿಯನ್‌ ತಂಡ ₹1 ಕೋಟಿ ಬಹುಮಾನ ಗೆಲ್ಲಲಿದ್ದು, ರನ್ನರ್‌ ಅಪ್‌ ಆದ ತಂಡಕ್ಕೆ ₹50 ಲಕ್ಷ ಸಿಗಲಿದೆ.