52 ವರ್ಷಗಳ ಹಳೇ ದಾಖಲೆ ಸರಿಗಟ್ಟಲು ಸಜ್ಜಾದ ವಿರಾಟ್!

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯ ಫೆ.21 ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ 52 ವರ್ಷಗಳ ಹಿಂದೆ ಮನ್ಸೂರ್ ಆಲಿ ಖಾನ್ ಪಟೌಡಿ ಬರೆದ ದಾಖಲೆ ಸರಿಗಟ್ಟಲು ಸಜ್ಜಾಗಿದ್ದಾರೆ.
 

Virat kohli ready to equal Mansur Ali Khan Pataudi record in Wellington

ವೆಲ್ಲಿಂಗ್ಟನ್(ಫೆ.19): ಏಕದಿನ ಸರಣಿ ಸೋತ ಟೀಂ ಇಂಡಿಯಾ ಇದೀಗ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ರೆಡಿಯಾಗಿದೆ. ವಲ್ಲಿಂಗ್ಟನ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಅಬ್ಬರಿಸಲು ಕೊಹ್ಲಿ ಬಾಯ್ಸ್ ತಯಾರಿ ನಡೆಸಿದ್ದಾರೆ. ಇದರ ಜೊತೆಗೆ ಕೊಹ್ಲಿ ಇತಿಹಾಸ ರಚಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ಏಟಿಗೆ ಎದಿರೇಟು; ನ್ಯೂಜಿಲೆಂಡ್ ತಂಡಕ್ಕೆ ಕೊಹ್ಲಿ ಎಚ್ಚರಿಕೆ!.

ಇದುವರೆಗೆ ನ್ಯೂಜಿಲೆಂಡ್ ನೆಲದಲ್ಲಿ 23 ಟೆಸ್ಟ್ ಪಂದ್ಯ ಆಡಿರುವ ಟೀಂ ಇಂಡಿಯಾಗೆ ಸಿಕ್ಕಿದ್ದು ಕೇವಲ5 ಗೆಲುವು ಮಾತ್ರ. 8 ಪಂದ್ಯದಲ್ಲಿ ಸೋಲು ಹಾಗೂ 10 ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದೆ. ಮೊದಲ ಟೆಸ್ಟ್ ಪಂದ್ಯ ಆಡುತ್ತಿರುವ ವೆಲ್ಲಿಂಗ್ಟನ್ ಮೈದಾನದಲ್ಲಿ ಭಾರತ 7 ಟೆಸ್ಟ್ ಪಂದ್ಯದಲ್ಲಿ ಕೇವಲ 1 ಗೆಲುವು ಸಾಧಿಸಿದೆ.

ಇದನ್ನೂ ಓದಿ: ಟೀಂ ಇಂಡಿಯಾ ಎದುರಿನ ಮೊದಲ ಟೆಸ್ಟ್‌ಗೆ ನ್ಯೂಜಿಲೆಂಡ್ ತಂಡ ಹೀಗಿದೆ.

1968ರಲ್ಲಿ ಮನ್ಸೂರ್ ಆಲಿ ಖಾನ್ ಪಟೌಡಿ ನಾಯಕತ್ವದ ಟೀಂ ಇಂಡಿಯಾ ವೆಲ್ಲಿಂಗ್ಟನ್‌ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಬಳಿಕ ನಡೆದ 6 ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲಿಗೆ ಶರಣಾಗಿದೆ. ಇದೀಗ ವಿರಾಟ್ ಕೊಹ್ಲಿ ವೆಲ್ಲಿಂಗ್ಟನ್ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಪಟೌಡಿ ದಾಖಲೆ ಸರಿಗಟ್ಟಲು ಮುಂದಾಗಿದ್ದಾರೆ. 

ವೆಲ್ಲಿಂಗ್ಟನ್‌ನಲ್ಲಿ ಭಾರತ -ನ್ಯೂಜಿಲೆಂಡ್ ಟೆಸ್ಟ್ ಪಂದ್ಯದ ಫಲಿತಾಂಶ:
1968: ಭಾರತಕ್ಕೆ 8 ವಿಕೆಟ್ ಗೆಲುವು
1976: ನ್ಯೂಜಿಲೆಂಡ್ ತಂಡಕ್ಕೆ ಇನಿಂಗ್ಸ್ ಹಾಗೂ 33 ರನ್ ಗೆಲುವು 
1981: ನ್ಯೂಜಿಲೆಂಡ್ ತಂಡಕ್ಕೆ 62 ರನ್ ಗೆಲುವು 
1998: ನ್ಯೂಜಿಲೆಂಡ್ ತಂಡಕ್ಕೆ4 ವಿಕೆಟ್ ಗೆಲುವು
2002: ನ್ಯೂಜಿಲೆಂಡ್ ತಂಡಕ್ಕೆ 10 ವಿಕೆಟ್ ಗೆಲುವು
2009: ಪಂದ್ಯ ಡ್ರಾ
2014: ಪಂದ್ಯ ಡ್ರಾ
 

Latest Videos
Follow Us:
Download App:
  • android
  • ios