* ಕೌಂಟಿ ಇಲೆವನ್ ವಿರುದ್ದ ಅಭ್ಯಾಸ ಪಂದ್ಯಕ್ಕೆ ಸಜ್ಜಾದ ಟೀಂ ಇಂಡಿಯಾ* 3 ದಿನಗಳ ಅಭ್ಯಾಸ ಪಂದ್ಯವನ್ನಾಡಲಿದೆ ವಿರಾಟ್ ಕೊಹ್ಲಿ ಪಡೆ* ಮಯಾಂಕ್‌ ಅಗರ್‌ವಾಲ್‌, ಕೆ.ಎಲ್‌ ರಾಹುಲ್‌ ಮೇಲೆ ಕಣ್ಣು

ಡರ್ಹಮ್(ಜು.20)‌: ಭಾರತ ಟೆಸ್ಟ್‌ ತಂಡದಲ್ಲಿ ಆರಂಭಿಕ ಸ್ಥಾನವನ್ನು ಮರಳಿ ಪಡೆಯಲು ಕರ್ನಾಟಕದ ಮಯಾಂಕ್‌ ಅಗರ್‌ವಾಲ್‌ರ ಹೋರಾಟ ಮಂಗಳವಾರದಿಂದ ಆರಂಭಗೊಳ್ಳಲಿದೆ. ಅವರ ಆಪ್ತ ಸ್ನೇಹಿತ, ಕನ್ನಡಿಗ ಕೆ.ಎಲ್‌.ರಾಹುಲ್‌ ಟೆಸ್ಟ್‌ ಮಾದರಿಯಲ್ಲೂ ತಾವು ಉಪಯುಕ್ತ ವಿಕೆಟ್‌ ಕೀಪರ್‌ ಎನ್ನುವುದನ್ನು ಸಾಬೀತು ಮಾಡಲು ಅವಕಾಶ ಪಡೆದಿದ್ದಾರೆ.

ಮಂಗಳವಾರ(ಜು.20)ದಿಂದ ಟೀಂ ಇಂಡಿಯಾ, ಕೌಂಟಿ ಇಲೆವೆನ್‌ ವಿರುದ್ಧ 3 ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದೆ. ಇಂಗ್ಲೆಂಡ್‌ ವಿರುದ್ಧದ 5 ಪಂದ್ಯಗಳ ಟೆಸ್ಟ್‌ ಸರಣಿಗೆ ಅಧಿಕೃತವಾಗಿ ಸಿದ್ಧತೆ ಆರಂಭಿಸಲಿದೆ. ನ್ಯೂಜಿಲೆಂಡ್‌ ವಿರುದ್ಧ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಸೋತಿದ್ದ ವಿರಾಟ್‌ ಕೊಹ್ಲಿ ಪಡೆ, 2021-23ರ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಶುಭಾರಂಭ ಮಾಡುವ ಗುರಿ ಹೊಂದಿದೆ.

Scroll to load tweet…

ಇಂಗ್ಲೆಂಡ್‌ ಟೆಸ್ಟ್‌ ಸರಣಿಗೆ ಕೊಹ್ಲಿ ಪಡೆ ಕಠಿಣ ಅಭ್ಯಾಸ ಆರಂಭ

ಸಾಕಷ್ಟು ಬಿಡುವಿನ ಬಳಿಕ ಟೀಂ ಇಂಡಿಯಾ ಇದೀಗ ಕೌಂಟಿ ಇಲೆವನ್‌ ವಿರುದ್ದ ಕಣಕ್ಕಿಳಿಯುವ ಮೂಲಕ ಆಗಸ್ಟ್‌ 04ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ದದ ಸರಣಿಗೆ ಸಜ್ಜಾಗಲು ಎದುರು ನೋಡುತ್ತಿದೆ. ಶುಭ್‌ಮನ್‌ ಗಿಲ್‌ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದು, ಮಯಾಂಕ್‌ ಅಗರ್‌ವಾಲ್‌ ಆರಂಭಿಕನಾಗಿ ನೆಲೆ ಕಂಡುಕೊಳ್ಳಲು ಉತ್ತಮ ಅವಕಾಶ ಸಿಕ್ಕಂತೆ ಆಗಿದೆ. ಇನ್ನು ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್ ಪಂತ್ ಅವರಿಗೆ ಕೋವಿಡ್ ತಗುಲಿರುವುದರಿಂದ ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಳ್ಳುತ್ತಿಲ್ಲ. ಹೀಗಾಗಿ ಕೆ.ಎಲ್‌. ರಾಹುಲ್‌ ವಿಕೆಟ್‌ ಕೀಪರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನಿಸಿದೆ.

ಇನ್ನುಳಿದಂತೆ ಟೆಸ್ಟ್‌ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಮೇಲೆ ಹೆಚ್ಚಿನ ಒತ್ತಡವಿದೆ. ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಪೂಜಾರ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. ಇದಷ್ಟೇ ಅಲ್ಲದೇ ಅನುಭವಿ ವೇಗಿ ಇಶಾಂತ್ ಶರ್ಮಾ ಜತೆಗೆ ಜಸ್‌ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್‌ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.