ಸಿಡ್ನಿ(ನ.28): ಬರೋಬ್ಬರಿ 9 ತಿಂಗಳುಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯವಾಡಿದ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಮೊದಲ ಪಂದ್ಯದಲ್ಲೇ ಆಸ್ಟ್ರೇಲಿಯಾ ವಿರುದ್ಧ ಆಘಾತಕಾರಿ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಪಡೆ 66 ರನ್‌ಗಳಿಂದ ಕಾಂಗರೂಗಳಿಗೆ ಶರಣಾಗಿದೆ.

ಈ ಸೋಲಿನ ಆಘಾತದಿಂದ ಹೊರಬರುವ ಮುನ್ನವೇ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾಗೆ ಮತ್ತೊಂದು ಶಾಕ್ ಎದುರಾಗಿದ್ದು, ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ ತಪ್ಪಿಗಾಗಿ ಪಂದ್ಯದ ಸಂಭಾವನೆಯ 20% ದಂಡ ತೆತ್ತಿದೆ. ಐಸಿಸಿ ಶನಿವಾರ(ನ.28)ದಂದು ಈ ವಿಚಾರವನ್ನು ಖಚಿತಪಡಿಸಿದ್ದು, ಮ್ಯಾಚ್ ರೆಫ್ರಿ ಡೇವಿಡ್ ಬೂನ್ ಭಾರತ ತಂಡಕ್ಕೆ ಡಂಡದ ಬರೆ ಎಳೆದಿದ್ದಾರೆ. ಪಂದ್ಯದ ಅಂಪೈರ್‌ಗಳಾದ ರೂಡ್‌ ಟಕ್ಕರ್, ಸ್ಯಾಮ್ ನೊಗಜಸ್ಕಿ, ಟಿವಿ ಅಂಪೈರ್ ಪೌಲ್ ರೈಫಲ್ ಹಾಗೂ ನಾಲ್ಕನೇ ಅಂಪೈರ್ ಗೆರಾಲ್ಡ್ ಅಬೋಡ್ ಸೂಚನೆ ಮೇರೆಗೆ ರೆಫ್ರಿ ಈ ದಂಡ ವಿಧಿಸಿದ್ದಾರೆ.

KL ರಾಹುಲ್ ಎದುರೇ ಅಬ್ಬರಿಸಿ ಕೊನೆಗೆ ಪಂಜಾಬ್ ನಾಯಕನ ಕ್ಷಮೆ ಕೇಳಿದ ಮ್ಯಾಕ್ಸ್‌ವೆಲ್..!

ಆಟಗಾರರು ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡಡೇ ಐಸಿಸಿ ನೀತಿ ಸಂಹಿತೆ ಆರ್ಟಿಕಲ್ 2.22 ಉಲ್ಲಂಘಿಸಿರುವುದು ಖಚಿತವಾಗಿದ್ದು ಪಂದ್ಯದ ಸಂಭಾವನೆಯ 20% ದಂಡ ವಿಧಿಸಲಾಗಿದೆ. ವಿರಾಟ್ ಕೊಹ್ಲಿ ಈ ಪ್ರಮಾದ ಹಾಗೂ ಶಿಕ್ಷೆಯನ್ನು ಒಪ್ಪಿಕೊಂಡಿದ್ದು, ಇನ್ನು ಹೆಚ್ಚಿನ ವಿಚಾರಣೆ ಅಗತ್ಯವಿಲ್ಲ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಫಿಂಚ್ ಹಾಗೂ ಸ್ಟೀವ್ ಸ್ಮಿತ್ ಆಕರ್ಷಕ ಶತಕದ ನೆರವಿನಿಂದ 6 ವಿಕೆಟ್ ಕಳೆದುಕೊಂಡು 374 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಟೀಂ ಇಂಡಿಯಾ 308 ರನ್ ಗಳಿಸಲಷ್ಟೇ ಶಕ್ತವಾಯಿತು.