ಹಾಲಿ ಆವೃತ್ತಿಯ ಐಪಿಎಲ್ ನಲ್ಲಿ ಸಾಲು ಸಾಲು ವೈಫಲ್ಯಗಳನ್ನು ಎದುರಿಸಿರುವ ವಿರಾಟ್ ಕೊಹ್ಲಿಗೆ, ಐಪಿಎಲ್ ಅನ್ನು ಮಧ್ಯದಲ್ಲಿಯೇ ತೊರೆಯುವಂತೆ ಅವರ ನೆಚ್ಚಿನ ಕೋಚ್ ಕೂಡ ಆಗಿರುವ ಟೀಮ್ ಇಂಡಿಯಾ ಮಾಜಿ ತರಬೇತುದಾರ ರವಿಶಾಸ್ತ್ರಿ ಸಲಹೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಈ ಸಲಹೆಯನ್ನು ಗಂಭೀರವಾಗಿ ಸ್ವೀಕಾರ ಮಾಡ್ತಾರಾ ಅನ್ನೋ ಕುತೂಹಲ ಎಲ್ಲರಲ್ಲಿದೆ.

ಮುಂಬೈ (ಏ. 28): ಪ್ರತಿಯೊಬ್ಬ ಕ್ರಿಕೆಟಿಗನ (Cricketer) ಜೀವನದಲ್ಲಿ ಏರಿಳಿತಗಳು ಸಾಮಾನ್ಯ​​​. ಎಂತಹ ದಿಗ್ಗಜ ಆಟಗಾರರನ್ನು ಕಳಪೆ ಫಾರ್ಮ್ (Poor Form) ಬಿಟ್ಟಿಲ್ಲ. ಸದ್ಯ ಇಂತಹ ಕಳಪೆ ಫಾರ್ಮ್ ಸುಳಿಯಲ್ಲಿ ಸೆಂಚುರಿ ಸ್ಪೆಶಲಿಸ್ಟ್​ ಖ್ಯಾತಿಯ ವಿರಾಟ್ ಕೊಹ್ಲಿ (Virat Kohli) ಸಿಲುಕಿ ವಿಲವಿಲ ಒದ್ದಾಡ್ತಿದ್ದಾರೆ. ಎರಡು ವರ್ಷದಿಂದ ಎಷ್ಟೇ ಪ್ರಯತ್ನಿಸ್ತಿದ್ರೂ ಲಯಕ್ಕೆ ಮರಳಲು ಸಾಧ್ಯವಾಗಿಲ್ಲ. ಟೀಮ್​ ಇಂಡಿಯಾ (Team India) ಬಳಿಕ ಐಪಿಎಲ್​​​ನಲ್ಲೂ (IPL) ಆಧುನಿಕ ಕ್ರಿಕೆಟ್ ದೊರೆಯ ಪ್ಲಾಫ್​​ ಶೋ ಮುಂದುವರಿದಿದೆ.

ಕ್ಯಾಪ್ಟನ್ಸಿ ತ್ಯಜಿಸಿದ ಕೊಹ್ಲಿ ಹಿಂದಿನಕ್ಕಿಂತ ಡೇಂಜರಸ್​​ ಆಗ್ತಾರೆ, ರನ್​ ಕೊಳ್ಳೆ ಹೊಡಿತಾರೆ ಎಂದು ಎಲ್ಲರೂ ಭಾವಿಸಿದ್ರು. ಆದ್ರೆ ಆ ಭರವಸೆಗಳನ್ನ ಮಣ್ಣು ಪಾಲಾಗಿಸಿದ್ದಾರೆ. ಪ್ರಸಕ್ತ ಐಪಿಎಲ್​​​ನಲ್ಲಿ ಕೊಹ್ಲಿಯ ದುಸ್ಥಿತಿ ಆಟಕ್ಕೆ ಇಡೀ ಕ್ರಿಕೆಟ್ ಜಗತ್ತು ಅಕ್ಷರಶಃ ಕೆರಳಿದೆ. ಶೇಮ್​​​ ಆನ್ ವಿರಾಟ್ ಅಂತ ಶಪಿಸ್ತಿದೆ. ಹಾಗಾದ್ರೆ ವಿರಾಟ್ ಅಂತಹ ವರ್ಸ್ಟ್ ಪರ್ಫಾಮೆನ್ಸ್​ ನೀಡಿರಲೇಬೇಕು ಅಲ್ವಾ? ಖಂಡಿತಾ ಹಿಂದೆಂದೂ ಕಾಣದಷ್ಟು ಕರಾಬ್ ಆಟ ಆಡ್ತಿದ್ದಾರೆ.

ಕೊಹ್ಲಿ IPL ಬಿಟ್ಟು ಹೊರನಡೆಯಲಿ ಎಂದು ಶಾಸ್ತ್ರಿ ಹೇಳಿದ್ದೇಕೆ..?: ಅರಗಿಸಿಕೊಳ್ಳಲಾಗದಷ್ಟು ಕಳಪೆ ಆಟವಾಡ್ತಿರೋ ಕೊಹ್ಲಿ, ಈವರೆಗೆ ಆಡಿದ 9 ಪಂದ್ಯಗಳಿಂದ 16ರ ಎವರೇಜ್​​ನಲ್ಲಿ ಬರೀ 128 ರನ್ ಬಾರಿಸಿದ್ದಾರೆ. ಒಂದೂ ಅರ್ಧಶತಕವೂ ಬಂದಿಲ್ಲ. ಎರಡು ಬಾರಿ ಡಕೌಟ್ ಆಗಿದ್ದಾರೆ. ಹಿಂದಿನ ಪಂದ್ಯದಲ್ಲಿ ಆರಂಭಿಕನಾಗಿ ಆಡಿದ್ರು ಅದೃಷ್ಟ ಬದಲಾಗಿಲ್ಲ. 9 ರನ್​ಗೆ ವಿಕೆಟ್​ ಒಪ್ಪಿಸಿ ಮತ್ತೆ ನಿರಾಸೆ ಮೂಡಿಸಿದ್ರು. ಹೀಗೆ ಸಾಲು ಸಾಲು ಪಂದ್ಯಗಳಲ್ಲಿ ರನ್ ಬರ ಎದುರಿಸ್ತಿರೋ ಕೊಹ್ಲಿ ಶೀಘ್ರದಲ್ಲೇ ಐಪಿಎಲ್​​​​​ಅನ್ನ ತೊರೆಯುತ್ತಾರಾ ಅನ್ನೋ ಪ್ರಶ್ನೆನೂ ಎದ್ದಿದೆ. ಟೀಮ್​ ಇಂಡಿಯಾ ಮಾಜಿ ಕೋಚ್​ ರವಿಶಾಸ್ತ್ರಿಯ (Ravi Shastri) ಆ ಒಂದು ಹೇಳಿಕೆ ಅಂತಹ ಅನುಮಾನವನ್ನ ಹುಟ್ಟುಹಾಕಿದೆ.

ಕೊಹ್ಲಿ ಸತತವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಹೀಗಾಗಿ ವಿಶ್ರಾಂತಿಯ ಅಗತ್ಯವಿದೆ. ಇನ್ನೂ 5-6 ವರ್ಷಗಳ ಕಾಲ ಆಡಬೇಕು ಎಂದರೆ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರಗುಳಿಯಬೇಕಿದೆ ಎಂದು ಟೀಮ್​ ಇಂಡಿಯಾ ಮಾಜಿ ಕೋಚ್ ಹಾಗೂ ಕಾಮೆಂಟೇಟರ್​ ರವಿಶಾಸ್ತ್ರಿ ಹೇಳಿದ್ದಾರೆ.

1 ರನ್ ಗೆ 8 ಲಕ್ಷ..! ಮುಂಬೈ ಇಂಡಿಯನ್ಸ್ ಗೆ ಸಖತ್ ದುಬಾರಿಯಾದ ಇಶಾನ್ ಕಿಶನ್!

ದಕ್ಷಿಣ ಆಫ್ರಿಕಾ ಟಿ20 ಸರಣಿಯಿಂದ ಕೊಹ್ಲಿಗೆ ಕೊಕ್​​​: ಒಂದೆಡೆ ಕೊಹ್ಲಿಯ ಕಳಪೆ ಆಟ ಕಂಡು ರವಿಶಾಸ್ತ್ರಿ ಕಲರ್​ಫುಲ್ ಟೂರ್ನಿಯಿಂದ ಹೊರನಡೆಯಬೇಕು ಅಂದಿರುವಾಗ್ಲೇ, ಲೆಜೆಂಡ್​​​ ಕ್ರಿಕೆಟರ್ ಟೀಮ್​ ಇಂಡಿಯಾದಲ್ಲಿ ಸ್ಥಾನ ಕಳೆದಕೊಳ್ತಾರಾ ಅನ್ನೋ ಪ್ರಶ್ನೆ ಕಾಡ್ತಿದೆ. ಮುಂಬರಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ ಕೈಬಿಡಲು ಬಿಸಿಸಿಐ ಸಜ್ಜಾಗಿದೆ. ‘ಕೊಹ್ಲಿ ಟೀಮ್​ ಇಂಡಿಯಾದ ಶ್ರೇಷ್ಠ ಕ್ರಿಕೆಟಿಗ. ಆದರೆ ಫಾರ್ಮ್​ ಸದ್ಯಕ್ಕೆ ದೊಡ್ಡ ತಲೆನೋವಾಗಿದೆ. ಬಿಸಿಸಿಐ ಹಾಗೂ ಆಯ್ಕೆ ಸಮಿತಿಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಐಪಿಎಲ್​ನಲ್ಲಿ ಸ್ಟಾರ್ ಆಟಗಾರರಿಂದ​ ಫ್ಲಾಪ್ ಶೋ, ಯಂಗ್ ಸ್ಟರ್ಸ್ ಶೈನಿಂಗ್..!

ಅಲ್ಲಿಗೆ ಕೊಹ್ಲಿಯನ್ನ ತಂಡದಿಂದ ಕೈಬಿಡಲು ಅಯ್ಕೆಗಾರರು ಚಿಂತಿಸ್ತಿದ್ದಾರೆ. ಉಳಿದ ಐಪಿಎಲ್​​ ಪಂದ್ಯಗಳಲ್ಲಿ ವಿರಾಟ್ ಇದೇ ರೀತಿ ಕೆಟ್ಟ ಪರ್ಫಾಮೆನ್ಸ್​​ ಮುಂದುವರಿಸಿದ್ರೆ ಗೇಟ್​​ಪಾಸ್​​​​ ಗ್ಯಾರಂಟಿ. ಛಲಗಾರ ವಿರಾಟ್ ಸುಲಭವಾಗಿ ಸೋಲೊಪ್ಪಿಕೊಳ್ತಾರಾ ? ಇಲ್ಲ ಸೆಕೆಂಡ್ ಹಾಫ್​​​ನಲ್ಲಿ ರೌದ್ರಾವತಾರಾ ತಾಳಿ ಸೆಲೆಕ್ಟರ್ಸ್​ ಯೋಚನೆಯನ್ನೇ ಬದಲಿಸ್ತಾರಾ ಅನ್ನೋದನ್ನ ಕಾದುನೋಡಬೇಕು.