Virat Kohli Quits Test captaincy ಹೊಸ ನಾಯಕನಿಗೆ ದೊಡ್ಡ ತಲೆನೋವು ತಂದಿಟ್ಟಿದ್ದೀರಿ ಎಂದ ಅಶ್ವಿನ್..!

* ಟೆಸ್ಟ್ ನಾಯಕತ್ವಕ್ಕೆ ದಿಢೀರ್ ಗುಡ್ ಬೈ ಹೇಳಿದ ವಿರಾಟ್ ಕೊಹ್ಲಿ

* ಕೊಹ್ಲಿ ನಾಯಕತ್ವವನ್ನು ಗುಣಗಾನ ಮಾಡಿದ ರವಿಚಂದ್ರನ್ ಅಶ್ವಿನ್

* ಭಾರತ ತಂಡಕ್ಕೆ 40 ಟೆಸ್ಟ್ ಗೆಲುವು ತಂದುಕೊಟ್ಟಿದ್ದ ವಿರಾಟ್ ಕೊಹ್ಲಿ

Virat Kohli has left a headache for his successor Says Ravichandran Ashwin kvn

ನವದೆಹಲಿ(ಜ.17): ವಿರಾಟ್‌ ಕೊಹ್ಲಿ (Virat Kohli) ಟೆಸ್ಟ್‌ ನಾಯಕತ್ವಕ್ಕೆ ರಾಜೀನಾಮೆ ನೀಡುವ ಮೂಲಕ ಹೊಸ ನಾಯಕನಿಗೆ ದೊಡ್ಡ ತಲೆನೋವು ತಂದಿಟ್ಟಿದ್ದಾರೆ ಎಂದು ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್‌ (Ravichandran Ashwin) ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ದದ ಕೇಪ್‌ಟೌನ್ ಟೆಸ್ಟ್ (Cape Town Test) ಪಂದ್ಯವನ್ನು ಟೀಂ ಇಂಡಿಯಾ ಸೋಲುತ್ತಿದ್ದಂತೆಯೇ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ವಿರಾಟ್ ಕೊಹ್ಲಿ ಅವರ ಈ ನಿರ್ಧಾರಕ್ಕೆ ಕ್ರಿಕೆಟ್ ಜಗತ್ತು ಅಚ್ಚರಿ ವ್ಯಕ್ತಪಡಿಸಿದೆ. ಅದೇ ರೀತಿ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟ್ವೀಟ್ ಮಾಡುವ ಮೂಲಕ ವಿರಾಟ್ ಅವರ ನಾಯಕತ್ವದ ಗುಣಗಾನ ಮಾಡಿದ್ದಾರೆ

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು,ಟ್ವೀಟ್‌ ನಾಯಕತ್ವ ತೊರೆಯುವ ಮೂಲಕ ನೀವು ಹೊಸ ನಾಯಕನಿಗೆ ದೊಡ್ಡ ತಲೆನೋವು ತಂದಿಟ್ಟಿದ್ದೀರಿ. ನಿಮ್ಮಷ್ಟೇ ಪರಿಣಾಮಕಾರಿಯಾಗಿ ತಂಡವನ್ನು ಮುನ್ನಡೆಸುವುದು ಯಾರಿಗಾದರೂ ಸವಾಲೇ ಸರಿ. ಕ್ರಿಕೆಟ್‌ನಲ್ಲಿ ನಾಯಕನ ದಾಖಲೆಗಳು ಮತ್ತು ಅವರ ಗೆಲುವುಗಳ ಬಗ್ಗೆಯೂ ಎಲ್ಲರೂ ಮಾತನಾಡುತ್ತಾರೆ. ಆದರೆ ನೀವು ಉಳಿಸಿ ಹೋದ ನಾಯಕತ್ವದ ಪರಂಪರೆಯೇ ನಿಮ್ಮ ಬಗ್ಗೆ ಮಾತನಾಡಲಿದೆ. ಭಾರತೀಯ ಕ್ರಿಕೆಟನ್ನು ಉನ್ನತ ಮಟ್ಟಕ್ಕೆ ಏರಿಸಿದ ನಿಮಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ. ರೋಹಿತ್‌ ಶರ್ಮಾ(Rohit Sharma), ಇಶಾಂತ್‌ ಶರ್ಮಾ ಸೇರಿದಂತೆ ಹಲವು ಸಹ ಆಟಗಾರರು ಕೊಹ್ಲಿಯ ಗುಣಗಾನ ಮಾಡಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ವಿರಾಟ್ ಕೊಹ್ಲಿ ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಮುಕ್ತಾಯದ ಬಳಿಕ ಟಿ20 ನಾಯಕತ್ವದಿಂದ ಕೆಳಗಿಳಿದಿದ್ದರು. ಇದಾದ ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೀಂ ಇಂಡಿಯಾವನ್ನು ಆಯ್ಕೆ ಸಮಿತಿಯು ಆಯ್ಕೆ ಮಾಡುವಾಗ, ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಒಬ್ಬನೇ ನಾಯಕನಿರಲಿ ಎನ್ನುವ ಉದ್ದೇಶದಿಂದ ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿ, ಸೀಮಿತ ಓವರ್‌ಗಳ ಕ್ರಿಕೆಟ್ ತಂಡಕ್ಕೆ ರೋಹಿತ್ ಶರ್ಮಾ ಅವರಿಗೆ ನಾಯಕತ್ವ ಪಟ್ಟ ಕಟ್ಟಲಾಗಿತ್ತು. ಇದೀಗ ದಕ್ಷಿಣ ಆಫ್ರಿಕಾ ವಿರುದ್ದದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 1-2 ಅಂತರದಲ್ಲಿ ಸೋಲು ಕಾಣುತ್ತಿದ್ದಂತೆಯೇ ಟೆಸ್ಟ್ ನಾಯಕತ್ವಕ್ಕೂ ವಿರಾಟ್ ಕೊಹ್ಲಿ ವಿದಾಯ ಘೋಷಿಸಿದ್ದಾರೆ. 

Virat Kohli Test captaincy in numbers: ಟೆಸ್ಟ್ ನಾಯಕನಾಗಿ ವಿರಾಟ್ ಕೊಹ್ಲಿ ಸಾಧನೆಗಳ ಒಂದು ಝಲಕ್‌..!

2014ರಲ್ಲಿ ಧೋನಿ (MS Dhoni) ಅವರಿಂದ ಭಾರತ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡ ವಿರಾಟ್ ಕೊಹ್ಲಿ, ಕಳೆದ ಏಳು ವರ್ಷಗಳಲ್ಲಿ ಬಲಿಷ್ಠ ಭಾರತ ಕ್ರಿಕೆಟ್ ತಂಡ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. 2018-19ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು ಜಯಿಸುವ ಮೂಲಕ ಆಸೀಸ್‌ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಭಾರತ ಹಾಗೂ ಏಷ್ಯಾದ ಮೊದಲ ನಾಯಕ ಎನ್ನುವ ಹಿರಿಮೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದರು. 

ಇದಷ್ಟೇ ಅಲ್ಲದೇ ಕಳೆದ 7 ವರ್ಷಗಳಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ತವರಿನಲ್ಲಿ 11 ಟೆಸ್ಟ್ ಸರಣಿಗಳನ್ನಾಡಿದ್ದು, ಎಲ್ಲಾ 11 ಸರಣಿಗಳಲ್ಲೂ ಗೆಲುವಿನ ನಗೆ ಬೀರಿದೆ. ನಾಯಕನಾಗಿ ಅತಿಹೆಚ್ಚು ಟೆಸ್ಟ್ ಪಂದ್ಯ(68)ಗಳನ್ನಾಡಿದ ಭಾರತದ ನಾಯಕ ಎನ್ನುವ ಹಿರಿಮೆಯೂ ಕೊಹ್ಲಿ ಹೆಸರಿನಲ್ಲಿದೆ. ಇದಷ್ಟೇ ಅಲ್ಲದೇ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ 40 ಟೆಸ್ಟ್ ಗೆಲುವು ಸಾಧಿಸಿದ್ದು, ಅತಿಹೆಚ್ಚು ಟೆಸ್ಟ್ ಪಂದ್ಯಗಳನ್ನು ಜಯಿಸಿದ ವಿಶ್ವದ ನಾಯಕರ ಪಟ್ಟಿಯಲ್ಲಿ ಕೊಹ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ರಾಹುಲ್‌ಗೆ ನಾಯಕತ್ವ, ಬುಮ್ರಾ ಉಪನಾಯಕ?

ಏಕದಿನ ಹಾಗೂ ಟಿ20 ತಂಡವನ್ನು ರೋಹಿತ್‌ ಶರ್ಮಾ ಮುನ್ನಡೆಸಲಿದ್ದು, ಟೆಸ್ಟ್‌ ತಂಡದ ಪೂರ್ಣಾವಧಿ ನಾಯಕನಾಗಿ ಕನ್ನಡಿಗ ಕೆ.ಎಲ್‌.ರಾಹುಲ್‌ (KL Rahul) ನೇಮಕಗೊಳ್ಳುವ ಸಾಧ್ಯತೆ ಇದೆ. ಜಸ್‌ಪ್ರೀತ್‌ ಬುಮ್ರಾಗೆ ಉಪನಾಯಕತ್ವ ಪಟ್ಟ ಒಲಿಯಬಹುದು ಎನ್ನಲಾಗುತ್ತಿದೆ. ಮುಂಬರುವ ಶ್ರೀಲಂಕಾ ವಿರುದ್ಧದ ಸರಣಿಗೂ ಮುನ್ನ ಬಿಸಿಸಿಐ ಹೊಸ ನಾಯಕನನ್ನು ಘೋಷಿಸಲಿದೆ.
 

Latest Videos
Follow Us:
Download App:
  • android
  • ios