ಕೊರೋನಾ ವೈರಸ್ ಕಾರಣ ಸ್ಥಗಿತಗೊಂಡಿದ್ದ ಟೀಂ ಇಂಡಿಯಾ ಕ್ರಿಕೆಟ್ ಸುಮಾರು 8 ತಿಂಗಳ ಬಳಿಕ ಆರಂಭಗೊಂಡಿದೆ. ಆದರೆ ಮೊದಲ ಪಂದ್ಯದಲ್ಲೇ ಮುಗ್ಗರಿಸಿದೆ. ಇದೀಗ ಸೋಲಿನ ಬೆನ್ನಲ್ಲೇ ಅಭಿಮಾನಿಗಳಿಗೆ ಮತ್ತೊಂದು ಆಘಾತ ಎದುರಾಗಿದೆ.
ಸಿಡ್ನಿ(ನ.27): ಸರಿಸುಮಾರು 8 ತಿಂಗಳ ಬಳಿಕ ಟೀಂ ಇಂಡಿಯಾ ಮೊದಲ ಪಂದ್ಯ ಆಡುತ್ತಿದೆ. ಕೊರೋನಾ ಕಾರಣ ಸ್ಥಗಿತಗೊಂಡಿದ್ದ ಟೀಂ ಇಂಡಿಯಾ ಪಂದ್ಯಗಳು ಆರಂಭಗೊಂಡಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯ ಆಡೋ ಮೂಲಕ ಟೀಂ ಇಂಡಿಯಾ ಹೋರಾಟಗಳು ಆರಂಭಗೊಂಡಿದೆ. ಆದರೆ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 66 ರನ್ ಸೋಲು ಕಂಡಿದೆ. ಈ ಸೋಲಿನ ಆಘಾತದ ಬೆನ್ನಲ್ಲೇ ಅಭಿಮಾನಿಗಳಿಗೆ ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಆಘಾತ ಎದುರಾಗಿದೆ.
ಆಸೀಸ್ ಎದುರು ಮೊದಲ ಪಂದ್ಯದಲ್ಲೇ ಭಾರತಕ್ಕೆ ಆಘಾತಕಾರಿ ಸೋಲು..!.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅಬ್ಬರಿಸಿದ್ದಾರೆ. 76 ಎಸೆತದಲ್ಲಿ 90 ರನ್ ಸಿಡಿಸೋ ಮೂಲಕ ದಿಟ್ಟ ಹೋರಾಟ ನೀಡಿದರು. ಈ ಮೂಲಕ ಟೀಂ ಇಂಡಿಯಾದ ಹೀನಾಯ ಸೋಲನ್ನು ತಪ್ಪಿಸಿದರು. ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಕುರಿತು ಬಹಿರಂಗ ಪಡಿಸಿದ್ದಾರೆ. ಪಾಂಡ್ಯ ಶೇಕಾಡ 100 ರಷ್ಟು ಫಿಟ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಾಂಡ್ಯ ಬೌಲಿಂಗ್ ಮಾಡುವಷ್ಟು ಫಿಟ್ ಇಲ್ಲ. ಹೀಗಾಗಿ ಪಾಂಡ್ಯ ಸ್ಪೆಷಲಿಸ್ಟ್ ಬ್ಯಾಟ್ಸಮನ್ ಆಗಿ ತಂಡಕ್ಕೆ ಕೊಡುಗೆ ನೀಡುತ್ತಿದ್ದಾರೆ. ಬೌಲಿಂಗ್ ಮಾಡಲು ಹಾರ್ದಿಕ್ ಪಾಂಡ್ಯ ಸಂಪೂರ್ಣ ಫಿಟ್ ಆಗಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ. ಪಾಂಡ್ಯ ರೀತಿಯ ಆಲ್ರೌಂಡರ್ ಆಯ್ಕೆ ಮತ್ತೊಂದಿಲ್ಲ. ಆಸೀಸ್ ತಂಡದಲ್ಲಿ ಮಾರ್ಕಸ್ ಸ್ಟೊಯ್ನಿಸ್ ಹಾಗೂ ಗ್ಲೆನ್ ವ್ಯಾಕ್ಸ್‌ವೆಲ್ ಆಯ್ಕೆಯಿದೆ ಎಂದು ಕೊಹ್ಲಿ ಹೇಳಿದ್ದಾರೆ.
ಇಂಜುರಿಯಿಂದ ಚೇತರಿಸಿಕೊಂಡು ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಬಳಿಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಿಲ್ಲ. ಐಪಿಎಲ್ 2020 ಟೂರ್ನಿಯಲ್ಲಿ ಪಾಂಡ್ಯ ಬೌಲಿಂಗ್ ಮಾಡಿಲ್ಲ. ಕೇವಲ ಸ್ಫೋಟಕ ಬ್ಯಾಟ್ಸ್‌ಮನ್ ಆಗಿ ತಂಡಕ್ಕೆ ನೆರವಾಗಿದ್ದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 27, 2020, 8:02 PM IST