ಐಪಿಎಲ್ 2025 ಪ್ಲೇಆಫ್‌ಗಳ ತೀವ್ರತೆಯ ನಡುವೆ, ಆರ್‌ಸಿಬಿ ತಂಡವು ಪಿಕಲ್‌ಬಾಲ್ ಆಟದಲ್ಲಿ ವಿರಾಮ ತೆಗೆದುಕೊಂಡಿತು. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸೇರಿದಂತೆ ತಂಡದ ಸದಸ್ಯರು ಈ ಆಟದಲ್ಲಿ ಭಾಗವಹಿಸಿದರು, ಇದು ತಂಡದ ಒಗ್ಗಟ್ಟನ್ನು ಬಲಪಡಿಸಲು ಸಹಾಯ ಮಾಡಿತು.

ಐಪಿಎಲ್ 2025 ಪ್ಲೇಆಫ್ ಹಂತದ ತೀವ್ರ ಸ್ಪರ್ಧೆಯ ನಡುವೆಯೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆಟಗಾರರು ಮತ್ತು ಅವರ ಕುಟುಂಬಗಳು ವಿಶ್ರಾಂತಿ ಕ್ಷಣಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗೆ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ತಂಡದ ಸದಸ್ಯರೊಂದಿಗೆ ಪಿಕಲ್‌ಬಾಲ್ ಆಟದಲ್ಲಿ ತೊಡಗಿಸಿಕೊಂಡು ಗಮನ ಸೆಳೆದಿದ್ದಾರೆ. ಐಪಿಎಲ್‌ನಲ್ಲಿ ಈಗಾಗಲೇ ಪ್ಲೇ ಆಫ್ ಪ್ರವೇಶಿಸಿ ರಿಲ್ಯಾಕ್ಸ್ ಮೂಡ್‌ನಲ್ಲಿರುವ ಆರ್‌ಸಿಬಿ ಆಟಗಾರರು ಬಿಡುವಿನ ಸಮಯ ಎಂಜಾಯ್ ಮಾಡಲು ಪಿಕಲ್‌ಬಾಲ್ ಮೊರೆ ಹೋದರು.

ಈ ಪಿಕಲ್‌ಬಾಲ್ ಸೆಷನ್, ಬೆಂಗಳೂರು ನಗರದಲ್ಲಿ ಮಳೆಯ ಕಾರಣದಿಂದಾಗಿ ಅಭ್ಯಾಸ ಸೆಷನ್ ರದ್ದಾದ ನಂತರ ಆಯೋಜಿಸಲಾಗಿತ್ತು. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಪಿಕಲ್‌ಬಾಲ್ ಕೋರ್ಟ್‌ನಲ್ಲಿ ಹೈ-ಫೈವ್ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಅವರನ್ನು "ಕಿಂಗ್ ಮತ್ತು ಕ್ವೀನ್" ಎಂದು ಬಣ್ಣಿಸಿದ್ದಾರೆ. ವಿರುಷ್ಕಾ ದಂಪತಿ ಅಟದ ನಡುವೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಮನ ಗೆದ್ದಿದೆ.

View post on Instagram

ಈ ಪಿಕಲ್‌ಬಾಲ್ ಸೆಷನ್‌ನಲ್ಲಿ ಆರ್‌ಸಿಬಿ ತಂಡದ ಮೆಂಟರ್ ದಿನೇಶ್ ಕಾರ್ತಿಕ್ ಮತ್ತು ಅವರ ಪತ್ನಿ, ಪ್ರಖ್ಯಾತ ಸ್ಕ್ವಾಶ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಕೂಡ ಭಾಗವಹಿಸಿದ್ದರು. ಇಂತಹ ಟೀಂ ಬಾಂಡೇಜ್‌ ಇವೆಂಟ್ಸ್‌ ತಂಡದ ಒಗ್ಗಟ್ಟನ್ನು ಬಲಪಡಿಸುತ್ತವೆ.

ವಿರಾಟ್ ಕೊಹ್ಲಿ ಅವರು ಟಿ20 ಅಂತಾರಾಷ್ಟ್ರೀಯ ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ನಂತರ, ತಮ್ಮ ಸಮಯವನ್ನು ಹೊಸ ಚಟುವಟಿಕೆಗಳಿಗೆ ಮೀಸಲಿಟ್ಟಿದ್ದಾರೆ. ಅವರು ಮತ್ತು ಅನುಷ್ಕಾ ಶರ್ಮಾ ಅವರು ಇತ್ತೀಚೆಗೆ ವೃಂದಾವನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.

ಈ ಪಿಕಲ್‌ಬಾಲ್ ಸೆಷನ್, ಆರ್‌ಸಿಬಿ ತಂಡದ ಪ್ಲೇಆಫ್ ಹಂತದ ಮುನ್ನ ಒತ್ತಡವನ್ನು ಕಡಿಮೆ ಮಾಡಿದ್ದು, ತಂಡದ ಸದಸ್ಯರಿಗೆ ವಿಶ್ರಾಂತಿ ನೀಡಿದೆ. ಇದು ತಂಡದ ಒಗ್ಗಟ್ಟನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಸದ್ಯ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಹಾಗೂ ಟೆಸ್ಟ್‌ ಮಾದರಿಗೆ ವಿದಾಯ ಘೋಷಿಸಿದ್ದು, ಏಕದಿನ ಕ್ರಿಕೆಟ್ ಮಾದರಿಯಲ್ಲಿ ಮಾತ್ರ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಕುಟುಂಬದ ಜತೆಗೆ ಹೆಚ್ಚಿನ ಸಮಯವನ್ನು ಕಳೆಯುವ ಉದ್ದೇಶದಿಂದ ವಿರಾಟ್ ಕೊಹ್ಲಿ ಟೆಸ್ಟ್ ಮಾದರಿಗೆ ವಿದಾಯ ಘೋಷಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಭರ್ಜರಿ ಫಾರ್ಮ್‌ನಲ್ಲಿರೋ ವಿರಾಟ್ ಕೊಹ್ಲಿ: 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಬೆನ್ನೆಲುಬು ಆಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ, 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲೂ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದ ವಿರಾಟ್ ಕೊಹ್ಲಿ, ಈ ಬಾರಿಯ ಅದ್ಭುತ ಪ್ರದರ್ಶನ ತೋರುತ್ತಾ ಮುನ್ನುಗ್ಗುತ್ತಿದ್ದಾರೆ. ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲೂ ವಿರಾಟ್ ಕೊಹ್ಲಿ ಆರ್‌ಸಿಬಿ ಪರ ಗರಿಷ್ಠ ರನ್ ಸರದಾರರಾಗಿ ಮುನ್ನುಗ್ಗುತ್ತಿದ್ದಾರೆ. ಸದ್ಯ ವಿರಾಟ್ ಕೊಹ್ಲಿ 11 ಪಂದ್ಯಗಳ 11 ಇನ್ನಿಂಗ್ಸ್‌ಗಳಿಂದ 66.62ರ ಸರಾಸರಿಯಲ್ಲಿ 505 ರನ್ ಬಾರಿಸಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸದ್ಯ ಕೊಹ್ಲಿ 8ನೇ ಸ್ಥಾನದಲ್ಲಿದ್ದಾರೆ.

ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 12 ಪಂದ್ಯಗಳನ್ನಾಡಿ 8 ಗೆಲುವು, 3 ಸೋಲು ಹಾಗೂ ಒಂದು ರದ್ದಾದ ಪಂದ್ಯ ಸೇರಿದಂತೆ 17 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಇದೀಗ ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದಲ್ಲಿ ಅರ್‌ಸಿಬಿ ತಂಡವು ಗೆಲುವು ಸಾಧಿಸಿದರೆ, ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನ ಪಡೆಯಲಿದೆ. ಇದರ ಜತೆಗೆ ಬಹುತೇಕ ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡಲು ಅರ್ಹತೆ ಗಳಿಸಿದರೂ ಅಚ್ಚರಿಯೇನಿಲ್ಲ. ಒಟ್ಟಿನಲ್ಲಿ ಲಖನೌದಲ್ಲಿ ನಡೆಯಲಿರುವ ಇಂದಿನ ಪಂದ್ಯದ ಮೇಲೆ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ.