Asianet Suvarna News Asianet Suvarna News

Vijay Hazare Trophy: ಕರ್ನಾಟಕ ತಂಡಕ್ಕೆ ಪುದುಚೇರಿ ಸವಾಲು

* ಇಂದಿನಿಂದ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿ ಆರಂಭ

* ತಿರುವನಂತಪುರಂನಲ್ಲಿ ಕರ್ನಾಟಕ ತಂಡಕ್ಕೆ ಪುದುಚೆರಿ ಸವಾಲು

* ಟಾಸ್ ಗೆದ್ದ ಪುದುಚೆರಿ ತಂಡ ಬೌಲಿಂಗ್ ಆಯ್ಕೆ

Vijay Hazare Trophy Manish Pandey led Karnataka Cricket Team take on Puducherry in Thiruvananthapuram kvn
Author
Bengaluru, First Published Dec 8, 2021, 10:29 AM IST

ತಿರುವನಂತಪುರ(ಡಿ.08): ಸಯ್ಯದ್‌ ಮುಷ್ತಾಕ್‌ ಅಲಿ ಟಿ20 (Syed Mushtaq Ali Trophy) ಟೂರ್ನಿಯ ಫೈನಲ್‌ನಲ್ಲಿ ಮುಗ್ಗರಿಸಿದ್ದ ಕರ್ನಾಟಕ, ಬುಧವಾರದಿಂದ ಆರಂಭಗೊಳ್ಳಲಿರುವ ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ (Vijay Hazare Trophy) ಚಾಂಪಿಯನ್‌ ಆಗುವ ಗುರಿ ಹೊಂದಿದೆ. ಎಲೈಟ್‌ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ (Karnataka Cricket Team), ಮೊದಲ ಪಂದ್ಯದಲ್ಲಿ ಪುದುಚೇರಿ (Puducherry Cricket Team) ಸವಾಲನ್ನು ಎದುರಿಸಲಿದೆ. ಇದೇ ಗುಂಪಿನಲ್ಲಿ ಹಾಲಿ ಚಾಂಪಿಯನ್‌ ಮುಂಬೈ, ಬರೋಡಾ, ಬೆಂಗಾಲ್‌ ಹಾಗೂ ತಮಿಳುನಾಡು ಸಹ ಸ್ಥಾನ ಪಡೆದಿವೆ. ಕರ್ನಾಟಕ ತಂಡದ ವಿರುದ್ದ ಟಾಸ್ ಗೆದ್ದ ಪುದುಚೆರಿ ಬೌಲಿಂಗ್ ಮಾಡುವ ತೀರ್ಮಾನವನ್ನು ತೆಗೆದುಕೊಂಡಿದೆ.

ಕರ್ನಾಟಕ ತಂಡವನ್ನು ಅನುಭವಿ ಮನೀಶ್‌ ಪಾಂಡೆ (Manish Pandey) ಮುನ್ನಡೆಸಲಿದ್ದು, ಆರ್‌.ಸಮರ್ಥ್ (Ravikumar Samarth) ಉಪನಾಯಕರಾಗಿದ್ದಾರೆ. ಕರುಣ್‌ ನಾಯರ್‌ (Karun Nair), ರೋಹನ್‌ ಕದಂ, ಡಿ.ನಿಶ್ಚಲ್‌, ಅಭಿನವ್‌ ಮನೋಹರ್‌, ಬಿ.ಆರ್‌.ಶರತ್‌, ಕೆ.ವಿ.ಸಿದ್ಧಾರ್ಥ್‌ರಂತಹ ಪ್ರತಿಭಾನ್ವಿತ ಬ್ಯಾಟಿಂಗ್‌ ಪಡೆ ಹೊಂದಿರುವ ಕರ್ನಾಟಕ, ಯುವ ಬೌಲಿಂಗ್‌ ಪಡೆಯನ್ನು ಹೊಂದಿದೆ. ವೈಶಾಖ್‌ ವಿಜಯ್‌ಕುಮಾರ್‌, ವಿದ್ಯಾಧರ್‌ ಪಾಟೀಲ್‌, ಪ್ರತೀಕ್‌ ಜೈನ್‌, ವಿ.ಕೌಶಿಕ್‌, ಎಂ.ವೆಂಕಟೇಶ್‌, ಎಂ.ಬಿ.ದರ್ಶನ್‌ ವೇಗದ ಬೌಲರ್‌ಗಳಾಗಿ ತಂಡದಲ್ಲಿದ್ದು, ಕೆ.ಸಿ.ಕಾರ್ಯಪ್ಪ, ಶ್ರೇಯಸ್‌ ಗೋಪಾಲ್‌, ಜೆ.ಸುಚಿತ್‌, ರಿತೇಶ್‌ ಭಟ್ಕಳ್‌ ಸ್ಪಿನ್‌ ಆಯ್ಕೆಗಳಾಗಿದ್ದಾರೆ.

ಟೂರ್ನಿಯಲ್ಲಿ ಒಟ್ಟು 38 ತಂಡಗಳು ಆಡಲಿವೆ. 5 ಎಲೈಟ್‌ ಗುಂಪುಗಳಲ್ಲಿ ತಲಾ 6 ತಂಡಗಳಿದ್ದು, ಪ್ಲೇಟ್‌ ಗುಂಪಿನಲ್ಲಿ 8 ತಂಡಗಳು ಸ್ಥಾನ ಪಡೆದಿವೆ. ಎಲೈಟ್‌ ಗುಂಪುಗಳಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಕ್ವಾರ್ಟರ್‌ ಫೈನಲ್‌ಗೇರಲಿದ್ದು, 2ನೇ ಸ್ಥಾನ ಪಡೆಯುವ ತಂಡಗಳು ಹಾಗೂ ಪ್ಲೇಟ್‌ ಗುಂಪಿನಲ್ಲಿ ಮೊದಲ ಸ್ಥಾನ ಪಡೆಯುವ ತಂಡ ಪ್ರಿ ಕ್ವಾರ್ಟರ್‌ ಫೈನಲ್‌ಗೆ ಅರ್ಹತೆ ಪಡೆಯಲಿವೆ.

Cricket News: ಮುಂಬರುವ ದಿನಗಳಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳುವ ಸುಳಿವು ಕೊಟ್ಟ ದ್ರಾವಿಡ್

ತಂಡಗಳು ಹೀಗಿವೆ ನೋಡಿ

ಕರ್ನಾಟಕ: ರವಿಕುಮಾರ್ ಸಮರ್ಥ್, ರೋಹನ್ ಕದಂ, ಕೃಷ್ಣಮೂರ್ತಿ ಸಿದ್ಧಾರ್ಥ್‌,ಕರುಣ್ ನಾಯರ್, ಮನೀಶ್ ಪಾಂಡೆ(ನಾಯಕ), ಶ್ರೀನಿವಾಸ್ ಶರತ್, ಕೆ ಸಿ ಕರಿಯಪ್ಪ, ಜಗದೀಶ ಸುಚಿತ್, ವಿ. ಕೌಶಿಕ್‌, ವೆಂಕಟೇಶ್ ಮುರುಳೀಧರ, ವಿದ್ಯಾಧರ ಪಾಟೀಲ್

ಪುದುಚೆರಿ: ಪರಾಸ್ ದೋಗ್ರಾ, ಪವನ್ ದೇಶಪಾಂಡೆ, ಆಶಿತ್ ರಾಜೀವ್, ಗೋವಿಂದರಾಜನ್, ದಾಮೋದರನ್ ರೋಹಿತ್(ನಾಯಕ), ಸಾಗರ್ ಉದೇಸಿ, ಎಸ್. ಕಾರ್ತಿಕ್ (ವಿಕೆಟ್ ಕೀಪರ್), ಕಾರ್ತಿಕೇಯನ್, ಜಯಸುಂದರಂ, ಫಾಬಿದ್ ಅಹಮ್ಮದ್, ಸಾಗರ್ ತ್ರಿವೇದಿ, ಸುಬೋತ್ ಭಾಟಿ.

ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ

2ನೇ ಟೆಸ್ಟ್‌: ಫಾಲೋ ಆನ್‌ ಭೀತಿಯಲ್ಲಿ ಬಾಂಗ್ಲಾದೇಶ

ಢಾಕಾ: ಪಾಕಿಸ್ತಾನ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಆತಿಥೇಯ ಬಾಂಗ್ಲಾದೇಶ ಫಾಲೋ ಆನ್‌ ಭೀತಿಗೆ ಸಿಲುಕಿದೆ. ಪಂದ್ಯದ ನಾಲ್ಕನೇ ದಿನದಂತ್ಯಕ್ಕೆ ಬಾಂಗ್ಲಾ 7 ವಿಕೆಟ್‌ ನಷ್ಟಕ್ಕೆ 76 ರನ್‌ ಗಳಿಸಿದ್ದು, ಫಾಲೋ ಆನ್‌ ತಪ್ಪಿಸಲು ಇನ್ನೂ 25 ರನ್‌ ಗಳಿಸಬೇಕಿದೆ. ಶಕೀಬ್‌ ಅಲ್‌ ಹಸನ್‌(23) ಕೊನೆ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. 

ಸಾಜಿದ್‌ ಖಾನ್‌ 6 ವಿಕೆಟ್‌ ಪಡೆದಿದ್ದಾರೆ. ಬುಧವಾರ ಪಂದ್ಯದ ಅಂತಿಮ ದಿನವಾಗಿದ್ದು, ಪಾಕ್‌ ಇನ್ನಿಂಗ್ಸ್‌ ಗೆಲುವಿನ ನಿರೀಕ್ಷೆಯಲ್ಲಿದೆ. ಇದಕ್ಕೂ ಮೊದಲು 2 ವಿಕೆಟ್‌ ನಷ್ಟಕ್ಕೆ 188 ರನ್‌ಗಳಿಂದ 4ನೇ ದಿನ ಆರಂಭಿಸಿದ ಪಾಕ್‌, 4 ವಿಕೆಟ್‌ಗೆ 300 ರನ್‌ ಗಳಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ನಾಯಕ ಆಜಂ 76, ಫವಾದ್‌ ಆಲಂ 50, ರಿಜ್ವಾನ್‌ ಔಟಾಗದೆ 53 ರನ್‌ ಗಳಿಸಿದರು.
 

Follow Us:
Download App:
  • android
  • ios