ಡೆಲ್ಲಿ(ಮಾ.11): ವಿಜಯ್‌ ಹಜಾರೆ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಕರ್ನಾಟಕ ಹಾಗೂ ಮುಂಬೈ ನಡುವಿನ ಸೆಮಿಫೈನಲ್‌ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ರವಿಕುಮಾರ್ ಸಮರ್ಥ್‌ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.

ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡವು ಕೇರಳ ವಿರುದ್ದ 80 ರನ್‌ಗಳ ಗೆಲುವು ದಾಖಲಿಸಿ ಸೆಮೀಸ್‌ ಪ್ರವೇಶಿಸಿದ್ದರೆ, ಬಲಿಷ್ಠ ಮುಂಬೈ ತಂಡ ಸೌರಾಷ್ಟ್ರ ವಿರುದ್ಧ ಗೆದ್ದು ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿತ್ತು. ಇದೀಗ ಫೈನಲ್‌ ಪ್ರವೇಶಕ್ಕಾಗಿ ಉಭಯ ತಂಡಗಳು ಪೈಪೋಟಿ ನಡೆಸಲಿವೆ.

ವಿಜಯ್‌ ಹಜಾರೆ ಟ್ರೋಫಿ: ಫೈನಲ್‌ಗಾಗಿಂದು ಕರ್ನಾಟಕ-ಮುಂಬೈ ಕಾದಾಟ

ಲೀಗ್ ಹಂತದಲ್ಲಿ ಕರ್ನಾಟಕ ತಂಡವು ಮೊದಲ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ದ 9 ರನ್‌ಗಳ ಸೋಲು ಕಂಡಿತ್ತು, ಅದಾದ ಬಳಿಕ ಎಲ್ಲಾ ಪಂದ್ಯಗಳಲ್ಲೂ ಗೆಲುವು ದಾಖಲಿಸಿದೆ. ಇನ್ನು ಪೃಥ್ವಿ ಶಾ ನಾಯಕತ್ವದ ಮುಂಬೈ ತಂಡ ಆಡಿದ 6 ಪಂದ್ಯಗಳಲ್ಲೂ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದೆ. 

ಕರ್ನಾಟಕದ ಪ್ರತಿಭೆ ದೇವದತ್ ಪಡಿಕ್ಕಲ್ ಕಳೆದ 4 ಪಂದ್ಯಗಳಲ್ಲಿ 4 ಶತಕ ಬಾರಿಸಿದ್ದು, ಇಂದು ಮತ್ತೊಂದು ಶತಕ ಬಾರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ನಾಯಕ ಸಮರ್ಥ್ ಮೇಲೂ ಹೆಚ್ಚಿನ ನಿರೀಕ್ಷೆಗಳಿವೆ. 

ತಂಡಗಳು ಹೀಗಿವೆ:
ಕರ್ನಾಟಕ:

ಮುಂಬೈ