ಬೆಂಗಳೂರು(ಫೆ.26): ವಿಜಯ್‌ ಹಜಾರೆ ಟ್ರೋಫಿ ಟೂರ್ನಿಯಲ್ಲಿಂದು ಬಲಿಷ್ಠ ತಂಡಗಳಾದ ಹಾಲಿ ಚಾಂಪಿಯನ್‌ ಕರ್ನಾಟಕ ಹಾಗೂ ಕೇರಳ ತಂಡಗಳು ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ರವಿಕುಮಾರ್ ಸಮರ್ಥ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.

ಬಿಹಾರ ಹಾಗೂ ಒಡಿಶಾ ತಂಡಗಳೆದುರು ಭರ್ಜರಿ ಗೆಲುವು ದಾಖಲಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಕರ್ನಾಟಕ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಒಡಿಶಾ ವಿರುದ್ದ ಕಣಕ್ಕಿಳಿದ ಆಟಗಾರರೇ ಕೇರಳ ಎದುರು ಹೋರಾಟ ನಡೆಸಲಿದ್ದಾರೆ. ಇನ್ನು ಸಚಿನ್ ಬೇಬಿ ನೇತೃತ್ವದ ಕೇರಳ ತಂಡ ಆಡಿದ ಮೂರು ಪಂದ್ಯಗಳಲ್ಲೂ ಗೆಲುವಿನ ನಗೆ ಬೀರಿದ್ದು, ಕರ್ನಾಟಕ ತಂಡದ ಎದುರು ಅಂತಹದ್ದೇ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದೆ. ಬಿಹಾರ, ಒಡಿಶಾ ವಿರುದ್ಧ ದೊಡ್ಡ ಗೆಲುವು ದಾಖಲಿಸಿದ್ದ ಕರ್ನಾಟಕಕ್ಕೆ, ಕೇರಳ ತಂಡದಿಂದ ಭರ್ಜರಿ ಪೈಪೋಟಿ ಎದುರಾಗಲಿದೆ. ಕೇರಳ ಆಡಿರುವ 3 ಪಂದ್ಯಗಳಲ್ಲಿ ಮೂರರಲ್ಲೂ ಜಯ ಸಾಧಿಸಿದ್ದು, ‘ಸಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.

ವಿಜಯ್ ಹಜಾರೆ ಟ್ರೋಫಿ: ಕರ್ನಾಟಕಕ್ಕಿಂದು ಬಲಿಷ್ಠ ಕೇರಳ ಸವಾಲು

ಕರ್ನಾಟಕ ತಂಡ ನಾಯಕ ಸಮರ್ಥ್, ದೇವದತ್ ಪಡಿಕ್ಕಲ್‌, ಕೆ. ಸಿದ್ಧಾರ್ಥ್ ಹಾಗೂ ಮಿಥುನ್‌, ಗೋಪಾಲ್‌, ಪ್ರಸಿದ್ಧ್ ಕೃಷ್ಣರನ್ನು ನೆಚ್ಚಿಕೊಂಡಿದೆ. ಇನ್ನು ಕೇರಳ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ದು, ರಾಬಿನ್‌ ಉತ್ತಪ್ಪ, ಸಂಜು ಸ್ಯಾಮ್ಸನ್‌, ವಿಷ್ಣು ವಿನೋದ್‌, ಮೊಹಮ್ಮದ್ ಅಜರುದ್ದೀನ್‌ ಹಾಗೂ ಶ್ರೀಶಾಂತ್ ಕರ್ನಾಟಕಕ್ಕೆ ಶಾಕ್‌ ನೀಡಲು ಎದುರು ನೋಡುತ್ತಿದ್ದಾರೆ.

ತಂಡಗಳು ಹೀಗಿವೆ:

ಕೇರಳ: ರಾಬಿನ್ ಉತ್ತಪ್ಪ, ವಿಷ್ಣು ವಿನೋದ್, ಸಂಜು ಸ್ಯಾಮ್ಸನ್‌, ಸಚಿನ್‌ ಬೇಬಿ, ಮೊಹಮ್ಮದ್ ಅಜರುದ್ದೀನ್‌, ವತ್ಸಲ್‌ ಗೋವಿಂದ್, ಸುದೇಶನ್‌ ಮಿದುನ್‌, ಜಲಜಾ ಸಕ್ಸೇನಾ, ಎಂ.ಡಿ. ನಿದೇಶ್‌, ಎಸ್‌ ಶ್ರೀಶಾಂತ್, ಎನ್‌ಪಿ ಬಾಸಿಲ್‌.

ಕರ್ನಾಟಕ: ಆರ್ ಸಮರ್ಥ್, ದೇವದತ್ ಪಡಿಕ್ಕಲ್‌, ಕೆ ಸಿದ್ಧಾರ್ಥ್, ಕರುಣ್‌ ನಾಯರ್, ಅನಿರುದ್ಧ್ ಜೋಶಿ, ಶರತ್ ಬಿ,ಆರ್, ಅಭಿಮನ್ಯು ಮಿಥುನ್, ಶ್ರೇಯಸ್ ಗೋಪಾಲ್‌, ಜೆ. ಸುಚಿತ್, ವ್ಯಾಸಕ್‌ ವಿನಯ್‌ ಕುಮಾರ್, ಪ್ರಸಿದ್ಧ್ ಕೃಷ್ಣ.