ವಿಜಯ್‌ ಹಜಾರೆ ಟೂರ್ನಿಯ ಫೈನಲ್‌ ಪ್ರವೇಶಕ್ಕಾಗಿ ಹಾಲಿ ಚಾಂಪಿಯನ್ ಕರ್ನಾಟಕ ಹಾಗೂ ಮುಂಬೈ ತಂಡಗಳ ನಡುವೆ ಪೈಪೋಟಿ ನಡೆಯಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಮಾ.10): ವಿಜಯ್‌ ಹಜಾರೆ ಏಕದಿನ ಟೂರ್ನಿಯ ಸೆಮಿಫೈನಲ್‌ಗೆ ವೇದಿಕೆ ಸಿದ್ಧಗೊಂಡಿದ್ದು, ಕರ್ನಾಟಕ, ಮುಂಬೈ, ಗುಜರಾತ್‌ ಹಾಗೂ ಉತ್ತರ ಪ್ರದೇಶ ತಂಡಗಳು ಅಂತಿಮ ನಾಲ್ಕರ ಘಟ ಪ್ರವೇಶಿಸಿವೆ. 

ಇನ್ನು ಅಂತಿಮ ಸುತ್ತಿಗೇರಲು ಮಾ.11ರಂದು ನಡೆಯಲಿರುವ 2ನೇ ಸೆಮಿಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕರ್ನಾಟಕ ತಂಡ ಮುಂಬೈ ವಿರುದ್ಧ ಸೆಣಸಾಟ ನಡೆಸಲಿದೆ. ಅಂದೇ ನಡೆಯಲಿರುವ ಮತ್ತೊಂದು ಸೆಮೀಸ್‌ನಲ್ಲಿ ಗುಜರಾತ್‌ ಹಾಗೂ ಉತ್ತರ ಪ್ರದೇಶ ಮುಖಾಮುಖಿ ಆಗಲಿವೆ. ಗೆದ್ದ ತಂಡಗಳು ಮಾ.14ರಂದು ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಟ್ರೋಫಿಗಾಗಿ ಅಂತಿಮ ಸೆಣಸಾಟ ನಡೆಸಲಿವೆ.

ವಿಜಯ್‌ ಹಜಾರೆ ಟ್ರೋಫಿ: ಪೃಥ್ವಿ ಶಾ ಸಿಡಿಲಬ್ಬರದ ಶತಕ, ಸೆಮೀಸ್‌ಗೇರಿದ ಮುಂಬೈ

ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡುತ್ತಿರುವ ಕರ್ನಾಟಕ, ಹಾಲಿ ಚಾಂಪಿಯನ್‌ಗಳಿಗೆ ತಕ್ಕಂತೆ ಆಟವಾಡುತ್ತಿದ್ದು ಅಧಿಕಾರಯುತವಾಗಿ ಸೆಮಿಫೈನಲ್‌ ಪ್ರವೇಶಿಸಿದೆ. ದೇವದತ್‌ ಪಡಿಕ್ಕಲ್‌, ಸಮಥ್‌ರ್‍ ಬ್ಯಾಟಿಂಗ್‌ ವಿಭಾಗದಲ್ಲಿ ಮಿಂಚುತ್ತಿದ್ದು, ಟೂರ್ನಿಯಲ್ಲಿ ಸತತ 4 ಶತಕಗಳ ಬಾರಿಸಿರುವ ಪಡಿಕ್ಕಲ್‌ ದಾಖಲೆ ಬರೆದಿದ್ದಾರೆ. ಬೌಲಿಂಗ್‌ನಲ್ಲೂ ಕರ್ನಾಟಕದ ಆಟಗಾರರು ಮೊನಚಾದ ದಾಳಿ ನಡೆಸುತ್ತಿದ್ದು, ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿ ಆಗುತ್ತಿದ್ದಾರೆ.