Asianet Suvarna News Asianet Suvarna News

Vijay Hazare Trophy 2021 : ಕರ್ನಾಟಕ ತಂಡಕ್ಕೆ ಮುಂಬೈ ಸವಾಲು

ಗೆಲುವಿನ ಹಳಿಗೆ ಬರುವ ಪ್ರಯತ್ನದಲ್ಲಿದೆ ಕರ್ನಾಟಕ
ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದೆ ಮುಂಬೈ
ಫಾರ್ಮ್ ಗೆ ಮರಳ್ತಾರಾ ಅನುಭವ ಕರುಣ್ ನಾಯರ್

Vijay Hazare Trophy Karnataka faces defending champion Mumbai Challenge san
Author
Thiruvananthapuram, First Published Dec 10, 2021, 6:55 PM IST

ತಿರುವನಂತಪುರಂ (ಡಿ.10): ದೇಶೀಯ ಕ್ರಿಕೆಟ್ ನ ಮಹತ್ವದ ಏಕದಿನ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ(Vijay Hazare Trophy) ನಾಲ್ಕು ಬಾರಿಯ ಚಾಂಪಿಯನ್ ಕರ್ನಾಟಕ(Karnataka)ತಂಡಕ್ಕೆ ಶನಿವಾರ ಮುಂಬೈ (Mumbai) ತಂಡ ಸವಾಲು ನೀಡಲಿದೆ. ಆಡಿರುವ ಎರಡು ಪಂದ್ಯಗಳಲ್ಲಿ ಎರಡೂ ತಂಡಗಳು ಮಿಶ್ರ ಫಲಿತಾಂಶ ಕಂಡಿರುವ ಕಾರಣ ಈ ಪಂದ್ಯ ಸಹಜವಾಗಿ ಕುತೂಹಲ ಕೆರಳಿದೆ. ಅದಲ್ಲದೇ, ದೇಶೀಯ ಕ್ರಿಕೆಟ್ ನಲ್ಲಿ ಕರ್ನಾಟಕ ಹಾಗೂ ಮುಂಬೈ ತಂಡದ ಮುಖಾಮುಖಿಯ ಇತಿಹಾಸವನ್ನು ತಿಳಿದವರಿಗೆ ಈ ಪಂದ್ಯದ ಮೇಲೆ ಇನ್ನಷ್ಟು ನಿರೀಕ್ಷೆಗಳು ಗರಿಗೆದರಿವೆ. ತಿರುವನಂತಪುರದ (Thiruvananthapuram) ಮಂಗಳಾಪುರಂನ (Mangalapuram) ಕೇರಳ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಬೆಳಗ್ಗೆ 9ಕ್ಕೆ ಪಂದ್ಯ ಆರಂಭವಾಗಲಿದೆ.

ಬಿ ಗುಂಪಿನ ಮೂರನೇ ಪಂದ್ಯ ಇದಾಗಿದ್ದು, ಮುಂದಿನ ಹಂತಕ್ಕೇರುವ ನಿಟ್ಟಿನಲ್ಲಿ ಎರಡೂ ತಂಡಗಳಿಗೂ ಪ್ರಮುಖವಾಗಿದೆ. ಕರ್ನಾಟಕ ತಂಡ ತನ್ನ ಮುಂದಿನ ಪಂದ್ಯಗಳಲ್ಲಿ ಬರೋಡ (Baroda) ಹಾಗೂ ಬಂಗಾಳ (Bengal) ತಂಡವನ್ನು ಎದುರಿಸಲಿದ್ದರೆ, ಮುಂಬೈ ತಂಡಕ್ಕೆ ಬಂಗಾಳ ಹಾಗೂ ಪುದುಚೇರಿಯ (Puducherry) ಸವಾಲು ನಿಗದಿಯಾಗಿದೆ. ಸಯ್ಯದ್ ಮುಷ್ತಾಕ್ ಅಲಿ ಟಿ20 (Syed Mushtaq Ali Trophy) ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದ ಕರ್ನಾಟಕ ತಂಡ (Karnataka Cricket Team) ಹಾಲಿ ಟೂರ್ನಿಯಲ್ಲಿ ಪುದುಚೇರಿ ವಿರುದ್ದ 236 ರನ್ ಗಳ ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡಿತ್ತು. ಆದರೆ, 2ನೇ ಪಂದ್ಯದಲ್ಲಿ ತಮಿಳುನಾಡು (Tamil Nadu) ತಂಡದ ವಿರುದ್ಧ ದಯನೀಯ ಬ್ಯಾಟಿಂಗ್ ವೈಫಲ್ಯ ಕಂಡು 8 ವಿಕೆಟ್ ಗಳ ಸೋಲು ಕಂಡಿತ್ತು.

Vijay Hazare Trophy: ಪುದುಚೇರಿ ವಿರುದ್ಧ ಬೃಹತ್ ಗೆಲುವು ಸಾಧಿಸಿದ ಕರ್ನಾಟಕ
ಇನ್ನೊಂದೆಡೆ ಹಾಲಿ ಚಾಂಪಿಯನ್ ಮುಂಬೈ ತಂಡದ ಸ್ಥಿತಿಯೂ ಬಹುತೇಕ ಕರ್ನಾಟಕ ತಂಡದ ರೀತಿಯಲ್ಲೇ ಇದೆ. ಮೊದಲ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ತಮಿಳುನಾಡು ವಿರುದ್ಧ 54 ರನ್ ಗಳ ಸೋಲು ಕಂಡರೆ, 2ನೇ ಪಂದ್ಯದಲ್ಲಿ ಬರೋಡ ವಿರುದ್ಧ ವಿಜೆಡಿ ನಿಯಮದನ್ವಯ (VJD Method) 13 ರನ್ ಗಳಿಂದ ಜಯ ಸಾಧಿಸಿತ್ತು. ಕರ್ನಾಟಕ ಗೆಲುವಿನ ಟ್ರ್ಯಾಕ್ ಗೆ ಮರಳುವ ಪ್ರಯತ್ನದಲ್ಲಿದ್ದರೆ, ಮುಂಬೈ ಗೆಲುವಿನ ಲಯವನ್ನು ಮುಂದುವರಿಸಿಕೊಂಡು ಹೋಗುವ ಗುರಿಯಲ್ಲಿದೆ.

ಕರ್ನಾಟಕ ತಂಡಕ್ಕೆ ಬ್ಯಾಟಿಂಗ್ ಸಮಸ್ಯೆ
ರಾಜ್ಯ ತಂಡಕ್ಕೆ ಅಸ್ಥಿರ ಬ್ಯಾಟಿಂಗ್ ಪ್ರಮುಖ ಸಮಸ್ಯೆಯಾಗಿ ಕಾಡಿದೆ. ಪುದುಚೇರಿ ವಿರುದ್ಧ ಪಂದ್ಯದಲ್ಲಿ ಗಮನಸೆಳೆದಿದ್ದ ರವಿಕುಮಾರ್ ಸಮರ್ಥ್ (Samarth R), ಕೆವಿ ಸಿದ್ಧಾರ್ಥ್ (Siddharth) ಹಾಗೂ ಶರತ್ ಶ್ರೀನಿವಾಸ್ (Srinivas Sharath) ತಮಿಳುನಾಡು ವಿರುದ್ಧ ವೈಫಲ್ಯ ಕಂಡಿದ್ದರೆ, ರೋಹನ್ ಕದಮ್ (Rohan Kadam) ಅವರಿಂದ ತಂಡ ನಿರೀಕ್ಷೆ ಮಾಡಿದ ಬ್ಯಾಟಿಂಗ್ ಇನ್ನೂ ಬಂದಿಲ್ಲ. ಮೊದಲ ಎರಡು ಪಂದ್ಯಗಳಿಂದ ಕೇವಲ 15 ರನ್ ಬಾರಿಸಿರುವ ಅನುಭವಿ ಆಟಗಾರ ಕರುಣ್ ನಾಯರ್ (Karun Nair) ತಂಡದ ಬ್ಯಾಟಿಂಗ್ ವಿಭಾಗದ ದುರ್ಬಲ ಕೊಂಡಿಯಾಗಿ ಕಾಣುತ್ತಿದ್ದಾರೆ.

Vijay Hazare Trophy: ತಮಿಳುನಾಡು ವಿರುದ್ಧ ಕರ್ನಾಟಕಕ್ಕೆ ಸೋಲು
ಕೆಳ ಕ್ರಮಾಂಕದ ಬ್ಯಾಟಿಂಗ್ ನಲ್ಲಿ ಕರ್ನಾಟಕ ತಂಡ ಸುಚಿತ್ ರಿಂದ (J Suchith) ಉತ್ತಮ ಕಾಣಿಕೆಯ ನಿರೀಕ್ಷೆಯಲ್ಲಿದೆ. ಎರಡೂ ಪಂದ್ಯದಲ್ಲಿ ಗಮನಸೆಳೆಯುವ ಆಟವಾಡಿರುವ ನಾಯಕ ಮನೀಷ್ ಪಾಂಡೆ, ಮುಂಬೈ ವಿರುದ್ಧ ದೊಡ್ಡ ಇನ್ನಿಂಗ್ಸ್ ಆಡಿದರೆ, ಗೆಲುವು ಕಷ್ಟವಲ್ಲ. ವಿ.ಕೌಶಿಕ್, ರಾಯಚೂರಿನ ವಿದ್ಯಾಧರ್ ಪಾಟೀಲ್, ವೆಂಕಟೇಶ್ ಎಂ ಬೌಲಿಂಗ್ ವಿಭಾಗದ ಹೊಸ ಮುಖಗಳಾಗಿದ್ದು ಈವರೆಗೂ ತಮ್ಮ ಮಿತಿಯಲ್ಲಿ ಉತ್ತಮ ದಾಳಿ ನಡೆಸಿದ್ದಾರೆ. ಕಳೆದ ಎರಡು ಪಂದ್ಯಗಳಿಂದ ಬೆಂಚ್ ಕಾಯಿಸಿದ್ದ ಅನುಭವಿ ಆಲ್ರೌಂಡರ್ ಶ್ರೇಯಸ್ ಗೋಪಾಲ್ ಈ ಬಾರಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಮುಂಬೈ ಬಲಾಢ್ಯ ತಂಡ
ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಧವಳ್ ಕುಲಕರ್ಣಿ ಹಾಗೂ ತುಷಾರ್ ದೇಶಪಾಂಡೆಯಂಥ ಅನುಭವಿ ಆಟಗಾರರು ಮುಂಬೈ ತಂಡದಲ್ಲಿದ್ದು ಕರ್ನಾಟಕ ತಂಡಕ್ಕೆ ಕಠಿಣ ಸವಾಲು ಒಡ್ಡಲಿದ್ದಾರೆ. ನಾಯಕ ಶಮ್ಸ್ ಮುಲಾನಿ ಪಂದ್ಯದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ.
 

Follow Us:
Download App:
  • android
  • ios