ವಿಜಯ್‌ ಹಜಾರೆ ಟ್ರೋಫಿ ಗೆಲ್ಲಲು ಮುಂಬೈಗೆ 313 ರನ್‌ಗಳ ಕಠಿಣ ಗುರಿ ನೀಡಿದ ಉತ್ತರ ಪ್ರದೇಶ. ಪೃಥ್ವಿ ಶಾ ತಂಡವನ್ನು ಗೆಲುವಿನ ದಡ ಸೇರಿಸುತ್ತಾರಾ ಕಾದು ನೋಡಬೇಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ದೆಹಲಿ(ಮಾ.14): ಆರಂಭಿಕ ಬ್ಯಾಟ್ಸ್‌ಮನ್‌ ಮಾಧವ್‌ ಕೌಶಿಕ್‌(158*) ಬಾರಿಸಿದ ಅಜೇಯ ಶತಕ ಹಾಗೂ ಸಮರ್ಥ್‌ ಸಿಂಗ್‌(55) ಮತ್ತು ಅಕ್ಷ್‌ದೀಪ್‌ ಸಿಂಗ್‌(55) ಸಮಯೋಚಿತ ಅರ್ಧಶತಕದ ನೆರವಿನಿಂದ ಉತ್ತರ ಪ್ರದೇಶ ತಂಡವು ವಿಜಯ್ ಹಜಾರೆ ಟೂರ್ನಿಯ ಫೈನಲ್‌ ಪಂದ್ಯದಲ್ಲಿ 312 ರನ್‌ ಬಾರಿಸಿದ್ದು, ಮುಂಬೈಗೆ ಗೆಲ್ಲಲು ಕಠಿಣ ಗುರಿ ನೀಡಿದೆ. 

ಇಲ್ಲಿನ ಅರುಣ್‌ ಜೇಟ್ಲಿ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಉತ್ತರ ಪ್ರದೇಶಕ್ಕೆ ಆರಂಭಿಕರಾದ ಮಾಧವ್ ಕೌಶಿಕ್‌ ಹಾಗೂ ಸಮರ್ಥ್ ಸಿಂಗ್ ಜೋಡಿ ಮೊದಲ ವಿಕೆಟ್‌ಗೆ 122 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ಸಮರ್ಥ್‌ ಸಿಂಗ್‌ 55 ರನ್ ಬಾರಿಸಿ ಪ್ರಶಾಂತ್ ಸೋಲಂಕಿ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್‌ ಆಗಿ ಪೆವಿಲಿಯನ್‌ ಸೇರಿದರು. ಇದರ ಬೆನ್ನಲ್ಲೇ ನಾಯಕ ಕರಣ್ ಶರ್ಮಾ ಶೂನ್ಯ ಸುತ್ತಿ ಪೆವಿಲಿಯನ್‌ ಸೇರಿದರು. ಇನ್ನು ಪ್ರಿಯಂ ಗರ್ಗ್‌ ಬ್ಯಾಟಿಂಗ್‌ ಕೇವಲ 21 ರನ್‌ಗಳಿಗೆ ಸೀಮಿತವಾಯಿತು.

Scroll to load tweet…

ವಿಜಯ್ ಹಜಾರೆ ಟ್ರೋಫಿ ಫೈನಲ್: ಉತ್ತರ ಪ್ರದೇಶ ಮಣಿಸಿ ಚಾಂಪಿಯನ್ ಆಗುತ್ತಾ ಮುಂಬೈ?

ಆಕರ್ಷಕ ಶತಕ ಚಚ್ಚಿದ ಮಾಧವ್‌: ಹೌದು ಮಹತ್ವದ ಪಂದ್ಯದಲ್ಲಿ ಉತ್ತರ ಪ್ರದೇಶ ಆರಂಭಿಕ ಬ್ಯಾಟ್ಸ್‌ಮನ್‌ ಮಾಧವ್ ಕೌಶಿಕ್‌ ಅಜೇಯ ಶತಕ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಒಟ್ಟು 156 ಎಸೆತಗಳನ್ನು ಎದುರಿಸಿದ ಮಾಧವ್ 15 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ ಅಜೇಯ 158 ರನ್‌ ಬಾರಿಸಿ ಮಿಂಚಿದರು. ಮಾಧವ್‌ಗೆ ಉತ್ತಮ ಸಾಥ್‌ ನೀಡಿದ ಅಕ್ಷದೀಪ್ ನಾಥ್‌ ಕೇವಲ 40 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 55 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗುವಂತೆ ಮಾಡಿದರು.