Asianet Suvarna News Asianet Suvarna News

IPLಗೂ ಮುನ್ನ ಎದುರಾಳಿಗಳಿಗೆ ದೇವದತ್ ಪಡಿಕ್ಕಲ್ ಸ್ಟ್ರಾಂಗ್ ವಾರ್ನಿಂಗ್..!

ದೇವದತ್ ಪಡಿಕ್ಕಲ್.! ಸದ್ಯ  ಭಾರತದ ದೇಶೀಯ ಕ್ರಿಕೆಟ್ನಲ್ಲಿ 22 ವರ್ಷದ ಈ  ಎಡಗೈ ಬ್ಯಾಟರ್ ಹವಾ ಎಬ್ಬಿಸಿದ್ದಾರೆ. ಈತನ ಹೆಸರು ಕೇಳಿದ್ರೆ ಬೌಲರ್ಸ್ ಹೆದರುವಂತಾಗಿದೆ. ಅಷ್ಟರಮಟ್ಟಿಗೆ ಪಡಿಕ್ಕಲ್ ಅಬ್ಬರಿಸಿ ಬೊಬ್ಬರಿಯುತ್ತಿದ್ದಾರೆ. ಲಿಸ್ಟ್ A ಕ್ರಿಕೆಟ್ನಲ್ಲಿ ಕರ್ನಾಟಕದ ಪರ ರನ್ ಹೊಳೆಯನ್ನೇ ಹರಿಸುತ್ತಿದ್ದಾರೆ. 

Vijay Hazare Trophy Devdutt Padikkal Strong Warning ahead of IPL 2024 kvn
Author
First Published Dec 2, 2023, 2:32 PM IST

ಅಹಮದಾಬಾದ್‌(ಡಿ.02): ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ಸತತ ಐದು ಗೆಲುವು ದಾಖಲಿಸಿದೆ. ಆದ್ರೆ, ಕರ್ನಾಟಕದ ಈ ಗೆಲುವಿನಲ್ಲಿ ಈ ಯಂಗ್ ಪ್ಲೇಯರ್ ಮಿಂಚುತ್ತಿದ್ದಾನೆ. ರನ್‌ ಹೊಳೆ ಹರಿಸುತ್ತಾ ಮತ್ತೊಮ್ಮೆ ತನ್ನ ಖದರ್ ತೋರಿಸುತ್ತಿದ್ದಾನೆ. ಯಾರದು ಆ ಆಟಗಾರ ಅಂತೀರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.! 

ದೇವದತ್ ಪಡಿಕ್ಕಲ್.! ಸದ್ಯ  ಭಾರತದ ದೇಶೀಯ ಕ್ರಿಕೆಟ್ನಲ್ಲಿ 22 ವರ್ಷದ ಈ  ಎಡಗೈ ಬ್ಯಾಟರ್ ಹವಾ ಎಬ್ಬಿಸಿದ್ದಾರೆ. ಈತನ ಹೆಸರು ಕೇಳಿದ್ರೆ ಬೌಲರ್ಸ್ ಹೆದರುವಂತಾಗಿದೆ. ಅಷ್ಟರಮಟ್ಟಿಗೆ ಪಡಿಕ್ಕಲ್ ಅಬ್ಬರಿಸಿ ಬೊಬ್ಬರಿಯುತ್ತಿದ್ದಾರೆ. ಲಿಸ್ಟ್ A ಕ್ರಿಕೆಟ್ನಲ್ಲಿ ಕರ್ನಾಟಕದ ಪರ ರನ್ ಹೊಳೆಯನ್ನೇ ಹರಿಸುತ್ತಿದ್ದಾರೆ. 

ಯೆಸ್, ಸದ್ಯ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಪಡಿಕ್ಕಲ್ ನಿಜಕ್ಕೂ ಅಬ್ಬರಿಸ್ತಿದ್ದಾರೆ. ಖತರ್ನಾಕ್ ಬ್ಯಾಟಿಂಗ್ನಿಂದ ಮಿಂಚುತ್ತಿದ್ದಾರೆ. ಆ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸ್ತಿದ್ದಾರೆ. ಟೂರ್ನಿಯಲ್ಲಿ ಈವರೆಗೂ 5 ಪಂದ್ಯಗಳಲ್ಲಿ ಬ್ಯಾಟ್ ಬೀಸಿರೋ ದೇವ್, 155.00 ಸರಾಸರಿ 120.47ರ ಸ್ಟ್ರೈಕ್ರೇಟ್ನಲ್ಲಿ 465 ರನ್ ಗಳಿಸಿದ್ದಾರೆ. ಇದ್ರಲ್ಲಿ 2 ಶತಕ 3 ಅರ್ಧಶತಕ ಸೇರಿವೆ. ಅತಿಹೆಚ್ಚು ರನ್ಗಳಿಸಿದವ್ರ ಪಟ್ಟಿಯಲ್ಲಿ ನಂ.1 ಪಟ್ಟ ಅಲಂಕರಿಸಿದ್ದಾರೆ. 

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಈ ಮೂರು ಸವಾಲುಗಳನ್ನ ಮೆಟ್ಟಿ ನಿಲ್ತಾರಾ ಕೆ ಎಲ್ ರಾಹುಲ್..?

ನಿನ್ನೆ ಚಂಡೀಘಡ ವಿರುದ್ಧ ನಡೆದ ಪಂದ್ಯದಲ್ಲೂ ಪಡಿಕ್ಕಲ್ ಅಬ್ಬರಿಸಿದ್ರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದು, 103 ಎಸೆತಗಳಲ್ಲಿ 9 ಫೋರ್ ಮತ್ತು 6 ಸಿಕ್ಸ್ ಸಹಿತ 114 ರನ್ ಬಾರಿಸಿದ್ರು. ಪಡಿಕ್ಕಲ್ ಶತಕದಿಂದಾಗಿ ತಂಡ 299 ರನ್‌ಗಳ ಬಿಗ್‌ಸ್ಕೋರ್ ಕಲೆಹಾಕುವಲ್ಲಿ ಸಾಧ್ಯವಾಯ್ತು. ಪಡಿಕ್ಕಲ್ ಅಬ್ಬರ ನೋಡಿ ಇಂಡಿಯಾ A ತಂಡದಲ್ಲಿ ಸ್ಥಾನ ನೀಡಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯೋ ನಾಲ್ಕು ದಿನಗಳ ಮೊದಲ ಮ್ಯಾಚ್ ತಂಡದಲ್ಲಿ ಪಡಿಕ್ಕಲ್ ಕಾಣಿಸಿಕೊಂಡಿದ್ದಾರೆ. 

IPLಗೂ ಮುನ್ನ ಎದುರಾಳಿಗಳಿಗೆ ಸ್ಟ್ರಾಂಗ್ ವಾರ್ನಿಂಗ್..!

ಯೆಸ್,  2020ರಲ್ಲಿ IPLಗೆ ಎಂಟ್ರಿ ನೀಡಿದ ದೇವದತ್ ಪಡಿಕ್ಕಲ್, ಮೊದಲ ಸೀಸನ್ನಲ್ಲೇ ಇಂಪ್ರೆಸ್ಸಿವ್ ಪರ್ಫಾಮೆನ್ಸ್ ನೀಡಿದ್ರು. 15 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿ, 5 ಅರ್ಧಶತಕ ಸಹಿತ 473 ರನ್ ಬಾರಿಸಿದ್ರು. ಆ ಮೂಲಕ ಅತ್ಯಧಿಕ ರನ್ ಬಾರಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ 8ನೇ ಸ್ಥಾನ ಅಲಂಕರಿಸಿದ್ರು. 2021ರ ಸೀಸನ್ನಲ್ಲು 400ಕ್ಕೂ ಹೆಚ್ಚು ರನ್ಗಳಿಸಿದ್ರು.

Breaking: ವಿಶ್ವಕಪ್‌ ಸೋತ ಭಾರತಕ್ಕೆ ಆಸೀಸ್‌ ವಿರುದ್ಧ ಟಿ20 ಸರಣಿ ಜಯದ ಸಮಾಧಾನ!

ಆದ್ರೆ, RCBಯಿಂದ ರಾಜಸ್ಥಾನ ರಾಯಲ್ಸ್ ತಂಡ ಸೇರಿದ ಮೇಲೆ, ಪಡಿಕ್ಕಲ್ ಮಂಕಾದ್ರು. ಸ್ಲೋ ಬ್ಯಾಟಿಂಗ್ನಿಂದ ತಂಡಕ್ಕೆ ಹೊರೆಯಾದ್ರು. ಆದ್ರೆ, 2024ರ ಐಪಿಎಲ್ಗೂ ಮುನ್ನ ಈ ಕರ್ನಾಟಕ ಪ್ಲೇಯರ್, ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿದ್ದಾರೆ. ಟೂರ್ನಿ ಆರಂಭಕಕೂ IPLಗೂ ಮುನ್ನ ಪಡಿಕ್ಕಲ್ ದೊಡ್ಡದೊಂದು ಸಿಗ್ನಲ್ ನೀಡಿದ್ದಾರೆ. ಆ ಮೂಲಕ ಎಲ್ಲಾ ತಂಡಗಳಿಗೆ ನಾನ್ ಬರ್ತಿದ್ದೀನಿ ಅಂತ ವಾರ್ನಿಂಗ್ ಕೊಟ್ಟಿದ್ದಾರೆ.

ಅದೇನೆ ಇರಲಿ, IPLನಲ್ಲೂ ಪಡಿಕ್ಕಲ್ ಅಬ್ಬರಿಸಲಿ,  ಆ ಮೂಲಕ ತಮ್ಮ ವಿರುದ್ಧದ ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರಿಸಲಿ ಅನ್ನೋದೆ ನಮ್ಮ ಆಶಯ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 

Follow Us:
Download App:
  • android
  • ios