ಬೆಂಗಳೂರು(ಮೇ.10): ಕೊರೋನಾ ವೈರಸ್ ಹಲವರ ಬಾಳಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಅದರಲ್ಲೂ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ, ಕನ್ನಡತಿ ವೇದಾ ಕೃಷ್ಣಮೂರ್ತಿ ಹಾಗೂ ಕುಟುಂಬ ಎದುರಿಸಿದ ಸವಾಲು ಅಷ್ಟಿಷ್ಟಲ್ಲ. ಆದರೆ ವೇದಾ ತಾಯಿ ಹಾಗೂ ಸಹೋದರಿ ಕೊರೋನಾ ವಿರುದ್ಧದ ಹೋರಾಟ ಗೆಲ್ಲಲಿಲ್ಲ. ಕೇವಲ 10 ದಿನದ ಅಂತರದಲ್ಲಿ ತನ್ನ ಜೀವನದ, ತನ್ನ ಉತ್ಸಾಹದ, ತನ್ನ ಆತ್ಮವಿಶ್ವಾಸದ ಚಿಲುಮೆಯಾಗಿದ್ದ ತಾಯಿ ಹಾಗೂ ಸಹೋದರಿಯನ್ನು ಕಳೆದುಕೊಂಡ ವೇದಾ ಕೃಷ್ಣಮೂರ್ತಿಗೆ ಇದಕ್ಕಿಂತ ದೊಡ್ಡ ಪರೀಕ್ಷೆ ಇನ್ನೊಂದಿಲ್ಲ.  ಈ ನೋವಿನಿಂದ ಚೇತರಿಸಿಕೊಳ್ಳುತ್ತಿರುವ ವೇದಾ ಭಾವನಾತ್ಮಕ ಪತ್ರ ಬರೆದಿದ್ದಾರೆ. ವೇದಾ ಬರೆದ ಪತ್ರ ಸಂಪೂರ್ಣ ವಿವರ ಇಲ್ಲಿದೆ

ಖ್ಯಾತ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿಗೆ ಮಾತೃ ವಿಯೋಗ.

ಕೆಲ ದಿನಗಳಿಂದ ಮನೆಯಲ್ಲಿ ನಡೆದ ಮನಸ್ಸು ಕಲುಕುವಂತ ಘಟನೆಯಿಂದ ನನ್ನ ಎದೆ ಒಡೆದಂತಾಗಿದೆ. ನಮೆಗೆಲ್ಲರಿಗೂ ನೀವೀಬ್ಬರು ಮನೆಯ ಅಡಿಪಾಯದಂತಿದ್ರಿ..ನಾನು ಯಾವತ್ತಿಗೂ ಅಂದುಕೊಂಡಿರಲಿಲ್ಲ ನೀವು ನಮ್ಮ ಜೊತೆ ಇರುವುದಿಲ್ಲವೆಂದು ನಿಜಕ್ಕೂ ಎದೆ ಒಡೆದು ಹೋಗಿದೆ.

ಅಮ್ಮಾ, ನನ್ನನ್ನು ಬಹಳ ಧೈರ್ಯವಾಗಿ ಬೆಳೆಸಿದ್ದಿರಿ..ಬದುಕಿನ ಪ್ರತಿ ಸವಾಲುಗಳನ್ನು ಪ್ರಾಯೋಗಿಕವಾಗಿ ಎದುರಿಸುವುದನ್ನು ನೀವು ಹೇಳಿಕೊಟ್ಟಿದ್ದಿರಿ. ನೀವು ಅತಿ ಸುಂದರ, ಸದಾ ಸಂತೋಷದಿಂದಿರುವ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸುವ ತಾಯಿ ಆಗಿದ್ದಿರಿ..

 

ಅಕ್ಕಾ ನನಗೊತ್ತು ನಾನು ನಿಮ್ಮ ನೆಚ್ಚಿನ ತಂಗಿಯಾಗಿದ್ದೆ. ನನಾವು ಜಗಳವಾಡುತ್ತಿದ್ದ ನೆನಪು, ನಿಮ್ಮ ಕೊನೆಯ ಗಳಿಗೆವರೆಗೂ ನಿಮ್ಮ ಆತ್ಮಸ್ಥೈರ್ಯ, ಧೈರ್ಯ ನನಗೆ ಪ್ರೇರಣೆಯಾಗಿದೆ.

ನಿಮ್ಮಿಬ್ಬರಲ್ಲಿ ಜಗತ್ತನ್ನು ಕಂಡಿದ್ದೆ, ನನಗೆ ಬಹಳ ಗರ್ವವಿತ್ತು. ನನಗಿಬ್ಬರೂ ತಾಯಂದಿರೆಂದು ಆದರೆ ಈಗ ತಿಳಿಯಿತು ತುಂಬ ಗರ್ವ ಸರಿಯಲ್ಲವೆಂದು. ನಾನು ನಿಮ್ಮ ಜೊತೆಗೆ ಕಳೆದ ಕ್ಷಣ ಬಹಳ ಖುಷಿಯಾಗಿದ್ದೆವು ಆದರೆ ನಾ ಅಂದುಕೊಂಡಿರಲಿಲ್ಲಾ ಇವು ಕೊನೆಯ ದಿನಗಳೆಂದು.

ಕೊರೋನಾ ಅಟ್ಟಹಾಸಕ್ಕೆ ವೇದಾ ಕೃಷ್ಣಮೂರ್ತಿ ಸಹೋದರಿ ಬಲಿ..!

ನನ್ನ ಬದುಕು ನಿವಿಲ್ಲದೆ ಏರಿಳಿತವಾಗುತ್ತಿದೆ. ನನಗೊತ್ತಿಲ್ಲ ನಮ್ಮ ಕುಟುಂಬ ಅದು ಹೇಗ ಮುಂದುವರೆಯತ್ತೋ..ನಾನ ಕೊನೆಯದಾಗಿ ಹೇಳುತ್ತೇನೆ ನಿಮ್ಮಿಬ್ಬರನ್ನು ಬಹಳ ಪ್ರೀತಿಸುತ್ತೇನೆ ಹಾಗೆ ನಿಮ್ಮಿಬ್ಬರನ್ನು ತುಂಬಾ ಸ್ಮರಿಸುತ್ತೇನೆ.

ನಿಮ್ಮ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ. ನೀವೆಲ್ಲರೂ ಕೋವಿಡ್ ಕುರಿತು ಜಾಗೃತೆ ವಹಿಸಿ, ಜೊತೆಗೆ ಮುನ್ನಚ್ಚೆರಿಕೆಯ ಕ್ರಮಗಳನ್ನು ತೆಗೆದುಕೊಳ್ಳಿ ಈ ಕೊರೋನಾ ಅತಿ ಭಯಂಕರವಾಗಿದೆ. ನನ್ನ ಕುಟುಂಬ ಎಲ್ಲಾ ರೀತಿಯ ಮುನ್ನಚ್ಚೆರಿಕೆಯ ಕ್ರಮಗಳನ್ನು ತೆಗೆದುಕೊಂಡಿತ್ತು. ಆದರೆ ಕೊರೋನಾ ಅದರ ಕಾರ್ಯ ಮಾಡಿತ್ತು. ನನ್ನ ಮನಸ್ಸಿನ ಪರಿಸ್ಥಿತಿಯ ಹಾಗೆ ನಿಮ್ಮೆಲ್ಲರ ಪರಿಸ್ಥಿತಿ ಆಗದಿರಲಿ ಎಂದು ಕೇಳಿಕೊಳ್ಳುತ್ತೇನೆ. ಹುಷಾರಾಗಿ ಇರಿ..ಬಹಳ ಗಟ್ಟಿಯಾಗಿರಿ

ಇಂದು ವೇದಾ ಕೃಷ್ಣಮೂರ್ತಿ ಅಗಲಿದೆ ತಾಯಿ ಹಾಗೂ ಸಹೋದರಿಗೆ ಬರೆದ ಭಾವನಾತ್ಮಕ ಪತ್ರವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನೋವಿನಿಂದಲೇ ಪತ್ರ ಪೋಸ್ಟ್ ಮಾಡಿದ್ದಾರೆ. ಪ್ರತಿ ಬಾರಿ ಕುಟುಂಬದ ಸಂತೋಷವನ್ನು ಹಂಚಿಕೊಳ್ಳುತ್ತಿದ್ದ ವೇದಾಗೆ ಈ ಬಾರಿ ತೀವ್ರ ದುಃಖದ ವಿಚಾರವನ್ನು ಹಂಚಿಕೊಂಡಿದ್ದಾರೆ

ಏಪ್ರಿಲ್ 24ರಂದು ವೇದಾ ಕೃಷ್ಣಮೂರ್ತಿ ತಾಯಿ ಚೆಲುವಾಂಬ(63) ಕೊರೋನಾಗೆ ಬಲಿಯಾಗಿದ್ದರು. ಕಡೂರು ನಿವಾಸಿಯಾಗಿರುವ ಚೆಲುವಾಂಬ ಅವರನ್ನು ಖಾಸಗಿ ಆಸ್ಪತ್ರೆ ದಾಖಲಿಸಲಾಗಿತ್ತು. ಸತತ 4 ದಿನಗಳ ಚಿಕಿತ್ಸೆ ಪಡೆದರು ಚೆಲುವಾಂಬ ನಿಧನರಾಗಿದ್ದರು. ಅಷ್ಟರಲ್ಲೇ ಕೊರೋನಾ ವೇದಾ ಕುಟುಂಬವನ್ನೇ ಆವರಿಸಿಬಿಟ್ಟಿತ್ತು. ಮೇ.06 ರಂದು ವೇದಾ ಸಹೋಹದರಿ ವತ್ಸಲಾ (40) ಕೊರೋನಾಗೆ ಬಲಿಯಾಗಿದ್ದರು. ಈ ನೋವಿನಲ್ಲಿ ವೇದಾ ಕೃಷ್ಣಮೂರ್ತಿ ಕುಸಿದು ಹೋಗಿದ್ದರು. ಇದೀಗ ಕೊಂಚ ಚೇತರಿಸಿಕೊಂಡಿರುವ ವೇದಾ ಭಾವನಾತ್ಮಕ ಪತ್ರ ಬರೆದಿದ್ದಾರೆ.