ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಅಸಲಿಯತ್ತನ್ನು ಬಯಲು ಮಾಡಿ ತನ್ನ ಕೊಟ್ಟ ಮಾತು ಉಳಿಸಿಕೊಂಡ ಉಸ್ಮಾನ್ ಖವಾಜಾ ಬೆಂಬಲಕ್ಕೆ ಡೇವಿಡ್ ವಾರ್ನರ್ ನಿಂತಿದ್ದಾರೆ. ಇವರಿಬ್ಬರ ಸ್ನೇಹ ಹಾಗೂ ಆಸಿಸ್ ಕ್ರಿಕೆಟ್ ಮಂಡಳಿ ನಡುವಿನ ಹೈವೋಲ್ಟೇಜ್ ವಿವಾದದ ಸಂಪೂರ್ಣ ವಿವರ ಇಲ್ಲಿದೆ.
ಆಸಿಸ್ ಕ್ರಿಕೆಟ್ನಲ್ಲಿ ಈಗ ಆಘಾತಕಾರಿ ಸಂಗತಿ ಹೊರಬೀಳುತ್ತಿವೆ. ಆಸ್ಟ್ರೇಲಿಯಾದ ಮಾಜಿ ಆಟಗಾರ ಉಸ್ಮಾನ್ ಖವಾಜಾ ಮುಂಬರುವ ಪುಸ್ತಕ 'ಸಬರ್'ನಲ್ಲಿ 2018ರ ಮರಳು ಕಾಗದ ಘಟನೆಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಹೇಳಿಕೆ ನೀಡಿದ್ದಾರೆ. ಈ ವಿಷಯದಲ್ಲಿ ಇಡೀ ತಂಡದ ಜವಾಬ್ದಾರಿ ತನಿಖೆ ಮಾಡಲಾಗಿಲ್ಲ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲ ಹಲವು ಆಘಾತಕಾರಿ ವಿಷಯಗಳು ಇಲ್ಲಿ ಉಲ್ಲೇಖವಾಗಿವೆ ಎನ್ನಲಾಗಿದೆ.
ಆ ಒಂದು ಪ್ರಕರಣದಿಂದ ವರ್ಷ ದೂರ!
ಚೆಂಡು ವಿರೂಪ ಪ್ರಕರಣದಿಂದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಮತ್ತು ಕ್ಯಾಮರೂನ್ ಬ್ಯಾನ್ಕ್ರಾಫ್ಟ್ ವಿರುದ್ಧ ಕ್ರಮ ಜರುಗಿಸಲಾಯಿತು. ಇದರಿಂದ ವಾರ್ನರ್ ಒಂದು ವರ್ಷ ಕ್ರಿಕೆಟ್ನಿಂದ ದೂರ ಉಳಿಯಬೇಕಾಯಿತು. ಈ ಘಟನೆ ನಂತರ ಅವರ ಮೇಲೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದವು. ಅಲ್ಲದೇ, ಈ ಕಷ್ಟದ ಸಮಯದಲ್ಲಿ ಖವಾಜಾ ತನ್ನ ಸ್ನೇಹಿತನನ್ನು ಮರೆಯಲಿಲ್ಲ. ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ.
ಉಸ್ಮಾನ ಕೊಟ್ಟ ಮಾತೇನು?
ನವೆಂಬರ್ 8ರಂದು ಉಸ್ಮಾನ್ ತಮ್ಮ ಬಾಲ್ಯದ ಗೆಳೆಯ ಡೇವಿಡ್ ವಾರ್ನರ್ಗೆ ನಿವೃತ್ತಿ ನಂತರ ಈ ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ಭರವಸೆ ನೀಡಿರುವುದಾಗಿ ಹೇಳಿದ್ದರಂತೆ. ಅದಾದ ನಂತರ, ಈಗ ಉಸ್ಮಾನ್ ಖವಾಜಾ ಪುಸ್ತಕದ ಮೂಲಕ ಸ್ಯಾಂಡ್ಪೇಪರ್ ಪ್ರಕರಣದಲ್ಲಿ ದೊಡ್ಡ ಬಹಿರಂಗಪಡಿಸುವಿಕೆ ಮಾಡಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಎನ್ನುವ ಮಾತು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿವೆ.
ಈ ಕುರಿತು ಮೊದಲೇ ಆಸಿಸ್ ಮಂಡಳಿಗೆ ತಿಳಿದಿತ್ತಂತೆ!
ಸ್ಯಾಂಡ್ಪೇಪರ್ ಘಟನೆ ಬಗ್ಗೆ ಇಡೀ ಆಸ್ಟ್ರೇಲಿಯಾ ತಂಡಕ್ಕೆ ತಿಳಿದಿತ್ತು. ಆದರೆ ಈ ವಿಷಯವನ್ನು ಸಂಪೂರ್ಣವಾಗಿ ತನಿಖೆ ಮಾಡಲಾಗಿಲ್ಲ ಎಂದು ಖವಾಜಾ ಹೇಳಿದ್ದರು. ಈಗ ಡೇವಿಡ್ ವಾರ್ನರ್ ಅವರ ರಕ್ಷಣೆಗೆ ಬಂದಿದ್ದಾರೆ ಮತ್ತು ಉಸ್ಮಾನ್ ಖವಾಜಾ ಹೇಳಿದ್ದೆಲ್ಲವೂ ನೂರಕ್ಕೆ ನೂರು ಸತ್ಯ ಎಂದು ಹೇಳಿದ್ದಾರೆ.
ವಿವಾದಕ್ಕೆ ಕಾರಣವಾದ ಸಬರ್ ಪುಸ್ತಕ!
ಉಸ್ಮಾನ್ ಖವಾಜಾ 'ಸಬರ್- ಫೈಂಡಿಂಗ್ ಮೈ ವೇ ಇನ್ ಕ್ರಿಕೆಟ್ ಅಂಡ್ ಲೈಫ್' ಪುಸ್ತಕದ ಬಗ್ಗೆ ಭಾರಿ ವಿವಾದ ಸೃಷ್ಟಿಯಾಗಿದ್ದು, ಪುಸ್ತಕ ಮಾರಾಟ ಮಾಡಲು ಇಂತಹ ಹೇಳಿಕೆ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಇದೀಗ ಡೇವಿಡ್ ವಾರ್ನರ್ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸಿದ್ದಾರೆ. ಅಲ್ಲದೇ ಕೆಲವು ವಿಷಯಗಳು ಕ್ರಿಕೆಟ್ಗಿಂತ ದೊಡ್ಡವು. ಇದು ಹಳೆಯ ಗಾಯಗಳನ್ನು ಮತ್ತೆ ತೆರೆಯುವುದರ ಬಗ್ಗೆ ಅಲ್ಲ. ಕೆಲವು ಗಾಯಗಳು ಎಂದಿಗೂ ಸಂಪೂರ್ಣವಾಗಿ ಗುಣವಾಗುವುದಿಲ್ಲ ಎಂದು ಒಪ್ಪಿಕೊಳ್ಳುವುದರ ಬಗ್ಗೆ. ನಾನು ನನ್ನ ಸಹೋದರ ಉಸ್ಮಾನ್ ಖವಾಜಾ ಅವರೊಂದಿಗೆ ನಿಲ್ಲುತ್ತೇನೆ ಎಂದು ಡೇವಿಡ್ ವಾರ್ನರ್ ಹೇಳಿದ್ದಾರೆ.














