Urvashi-Rishabh Controversy: ಬೀದಿಗೆ ಬಂದ ರಿಷಭ್ ಪಂತ್​​-ನಟಿ ಊರ್ವಶಿ ರೌಟೇಲಾ ಜಗಳ

ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ ಪಂತ್-ಊರ್ವಶಿ ಕಿತ್ತಾಟ
ನನ್ನನ್ನ ಬಿಟ್ಟು ಬಿಡು ಅಕ್ಕಾ ಎಂದ ಪಂತ್‌ಗೆ ಮುಟ್ಟಿನೋಡಿಕೊಳ್ಳುವಂತ ಉತ್ತರಕೊಟ್ಟ ಊರ್ವಶಿ
ರಕ್ಷಾ ಬಂಧನದ ಶುಭಾಶಯಗಳು ಆರ್​ಪಿ ತಮ್ಮ ಎಂದ ಬಾಲಿವುಡ್ ನಟಿ

Urvashi Rishabh Controversy Urvashi Rautela critically hits back at Rishabh Pant kvn

ಬೆಂಗಳೂರು(ಆ.13): ಕಳೆದೆರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರದ್ದೇ ಹಾಟ್​​​ ನ್ಯೂಸ್​​. ಟೀಂ ಇಂಡಿಯಾ ಕ್ರಿಕೆಟಿಗ ರಿಷಭ್​ ಪಂತ್​​ ಮತ್ತು ಬಾಲಿವುಡ್ ನಟಿ ಊರ್ವಶಿ ರೌಟೇಲಾ ನಡುವಿನ ಕೋಲ್ಡ್​ವಾರ್​ ಮತ್ತಷ್ಟು ತಾರಕಕ್ಕೇರಿದೆ. ರೌಟೇಲಾ ಸಂದರ್ಶನವೊಂದರಲ್ಲಿ ಪಂತ್​​ ಬಗ್ಗೆ ಮಾತಾಡಿ ವಿವಾದ ಎಬ್ಬಿಸಿದ್ರು. ಇದಕ್ಕೆ ಗರಂ ಆಗಿದ್ದ ರಿಷಭ್‌​​ ಇನ್​ಸ್ಟಾದಲ್ಲಿ ಪೋಸ್ಟ್‌​ವೊಂದನ್ನ ಹಾಕಿ ರೌಟೇಲಾಗೆ ಸಖತ್​ ಟಾಂಗ್​ ಕೊಟ್ಟಿದ್ರು.

ಪಂತ್​​ ಇನ್​ಸ್ಟಾದಲ್ಲಿ ಹೀಗೆ ಟಾಂಗ್​ ಕೊಡ್ತಿದ್ದಂತೆ ನಟಿ ರೌಟೇಲಾ ಕೌಂಟರ್​​​ ಟಕ್ಕರ್ ಕೊಟ್ಟಿದ್ದಾರೆ. ಇನ್​​ಸ್ಟಾಗ್ರಾಂ ಮೂಲಕವೇ ಉತ್ತರಿಸಿರೋ ಊರ್ವಶಿ ತಮ್ಮ ಬ್ಯಾಟ್​ ಬಾಲ್​ ಅಷ್ಟೇ ಆಡಬೇಕು. ನಾನೇನು ಮುನ್ನಿ ಅಲ್ಲ. ನಿನ್ನಂತಹ ಚಿಕ್ಕ ಹುಡುಗನೊಂದಿಗೆ ಪ್ರೀತಿ ಪ್ರೇಮದಲ್ಲಿ ಬಿದ್ದು  ಹಾಳಾಗಲು. ರಕ್ಷ ಬಂಧನದ ಶುಭಾಶಯಗಳು ಆರ್​ಪಿ ತಮ್ಮ. ಒಬ್ಬಂಟಿ ಹುಡುಗಿಯ ಲಾಭ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಡಿ ಎನ್ನುವ ಮೂಲಕ ಪಂತ್​ಗೆ ಮುಟ್ಟಿನೋಡಿಕೊಳ್ಳುವಂತ ತಿರುಗೇಟು ಕೊಟ್ಟಿದ್ದಾಳೆ.

ಅಕ್ಕ ನನ್ನನ್ನು ಬಿಟ್ಟು ಬಿಡು ಎಂದಿದ್ದ ಪಂತ್​ : 

ಇನ್ನು ರೌಟೇಲಾ, ರಿಷಭ್ ಪಂತ್​​​ ವಿರುದ್ಧ ಹೀಗೆ ಸಿಡಿದೇಳಲು ಕಾರಣವಿದೆ. ರೌಟೇಲಾ ತಮ್ಮ ಹಿಂದೆ ಟೀಂ ಇಂಡಿಯಾ ವಿಕೆಟ್ ಕೀಪರ್ ಪಂತ್ ಅಲೆಯುತ್ತಿದ್ರು. ಇನ್ನಿಲ್ಲದ ಹಾಗೆ ಕಾಡಿದ್ರು ಎಂದು ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಹೇಳಿದ್ರು. ರೌಟೇಲಾ ಹೀಗೆ ಹೇಳ್ತಿದ್ದಂತೆ ಅದು ದೊಡ್ಡ ವಿವಾದ ಪಡೆದಿತ್ತು. ರಿಷಭ್ ಪಂತ್ ಕೂಡಲೇ ಇನ್​ಸ್ಟಾ ಮೂಲಕ ಇದಕ್ಕೆ ಪ್ರತಿಕ್ರಿಯಿಸಿ ರೌಟೇಲಾಗೆ ಮಂಗಳಾರತಿ ಎತ್ತಿದ್ರು. ಜನ ಪುಕ್ಕಟೆ ಪ್ರಚಾರಕ್ಕಾಗಿ ಸಂದರ್ಶನಗಳಲ್ಲಿ ಸುಳ್ಳು ಹೇಳುತ್ತಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ. ನನ್ನನ್ನ ಬಿಟ್ಟು ಬಿಡು ಅಕ್ಕಾ ಎಂದು ಪೋಸ್ಟ್​ ಹಾಕಿ, ಬಳಿಕ ಅದನ್ನ ಡಿಲೀಟ್​ ಮಾಡಿದ್ರು.

ರಿಷಭ್‌ ಪಂತ್​ರಿಂದ ಆಸ್ಟ್ರೇಲಿಯಾಗೆ ಸಾವಿರಾರು ಕೋಟಿ ಲಾಭ...?

ಪಂತ್​ ಪೋಸ್ಟ್​​ಗೆ ಪ್ರತಿಯಾಗಿ ರೌಟೇಲಾ ಉರಿದು ಬಿದ್ದಿದ್ದು, ನಿನ್ನಂತಹ ಹುಡುಗನೊಂದಿಗೆ ನಾನು ಪ್ರೀತಿಯಲ್ಲಿ ಬಿದ್ದು ಹಾಳಾಗಲು ರೆಡಿಯಿಲ್ಲ ಎನ್ನುವ ಮೂಲಕ ಸರಿಯಾಗಿ ಕೌಂಟರ್​ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಪಂತ್​​-ರೌಟೆಲಾ ನಡುವಿನ ಸೋಷಿಯಲ್​ ಮೀಡಿಯಾ ವಾರ್​ ಸದ್ಯಕ್ಕೆ ನಿಲ್ಲುವಂತೆ ಕಾಣಿಸ್ತಿಲ್ಲ. ಏಟಿಗೆ ಎದುರೇಟು ಕೊಡ್ತಿದ್ದಾರೆ. ರೌಟೇಲಾ ಟಕ್ಕರ್​​ಗೆ ಪಂತ್​​​​ ಮತ್ತೆ ಪ್ರತಿಕ್ರಿಯಿಸಿ, ವಿವಾದವನ್ನು ಮತ್ತಷ್ಟು ದೊಡ್ಡದಾಗಿಸ್ತಾರಾ ಅನ್ನೋದನ್ನ ಕಾದು ನೋಡಬೇಕು.

Latest Videos
Follow Us:
Download App:
  • android
  • ios