Asianet Suvarna News Asianet Suvarna News

ಹರ್ಷಲ್ ಪಟೇಲ್‌ ಜೊತೆ ಜಸ್ಪ್ರೀತ್ ಬುಮ್ರಾ ಸಹ ಟಿ20 ವರ್ಲ್ಡ್​ಕಪ್ ಆಡಲ್ವಾ..?

* ಗಾಯದ ಸಮಸ್ಯೆಯಿಂದಾ ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದ ಬುಮ್ರಾ, ಹರ್ಷಲ್ ಪಟೇಲ್
* ಈ ಇಬ್ಬರು ಸ್ಟಾರ್ ವೇಗಿಗಳು ಟಿ20 ವಿಶ್ವಕಪ್ ಆಡೋದು ಅನುಮಾನ
* ಬೆಂಗಳೂರಿನಲ್ಲಿರುವ ಎನ್​ಸಿಎನಲ್ಲಿ ತರಬೇತಿ ಪಡೆಯುತ್ತಿರುವ ವೇಗಿಗಳು

Uncertainty over Jasprit Bumrah and Harshal Patel availability for Upcoming ICC T20 World Cup 2022 kvn
Author
Bengaluru, First Published Aug 12, 2022, 1:54 PM IST

ಬೆಂಗಳೂರು(ಆ.12): ಭಾರತೀಯ ಕ್ರಿಕೆಟ್ ಅನ್ನು ಗಾಯ ಅನ್ನೋ ಭೂತ ಯಾಕೋ ಬಿಡುವಂತೆ ಕಾಣ್ತಿಲ್ಲ. ಒಬ್ಬಲ್ಲ ಒಬ್ಬ ಮೇನ್ ಪ್ಲೇಯರ್​ ಇಂಜುರಿಯಾಗಿ ಟೀಮ್​ನಿಂದ ಹೊರಬೀಳುತ್ತಿದ್ದಾರೆ. ರೋಹಿತ್ ಶರ್ಮಾ. ರಾಹುಲ್. ದೀಪಕ್ ಚಹರ್ ಇಂಜುರಿಯಾಗಿ ರಿಕವರಿಯಾಗಿದ್ದಾಯ್ತು. ಈಗ ಫಾಸ್ಟ್ ಬೌಲರ್​ಗಳಾದ ಜಸ್​ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಇಂಜುರಿ ಲಿಸ್ಟ್​​ಗೆ ಸೇರಿದ್ದಾರೆ. ಕೆಲವೇ ದಿನಗಳಲ್ಲಿ ರಿಕವರಿಯಾಗಿ ರಿಟರ್ನ್​ ಆಗ್ತಾರೆ ಅಂತ ಅಂದಾಜಿಸಲಾಗಿತ್ತು. ಆದ್ರೆ  ಯಾಕೋ ಇವರಿಬ್ಬರು ಟಿ20 ವಿಶ್ವಕಪ್ ಆಡೋದು ಅನುಮಾನವಾಗಿದೆ.

ಅಂದು ಸಣ್ಣ ಗಾಯ, ಇಂದು ದೊಡ್ಡದಾಗಿದೆ: 

ಜಸ್​ಪ್ರೀತ್ ಬುಮ್ರಾ ಬೆನ್ನು ನೋವಿಗೆ ತುತ್ತಾಗಿ ಏಷ್ಯಾಕಪ್​ನಿಂದ ಹೊರಬಿದ್ದಿರುವುದು ನಿಮಗೆಲ್ಲಾ ಗೊತ್ತೇ ಇದೆ. ಆದ್ರೆ ಅವರಿಗೆ ಕಾಣಿಸಿಕೊಂಡಿರುವ ನೋವು ಸದ್ಯಕ್ಕೆ ಸರಿಯಾಗುವಂತೆ ಕಾಣುತ್ತಿಲ್ಲ. ಹಾಗಾಗಿ ಬುಮ್ರಾ, ಟಿ20 ವರ್ಲ್ಡ್​ಕಪ್ ಆಡೋದು ಅನುಮಾನ ಅಂತ ಬಿಸಿಸಿಐ ಮೂಲಗಳು ತಿಳಿಸಿವೆ. 2019ರಲ್ಲೂ ಬುಮ್ರಾಗೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಐದು ತಿಂಗಳು ಅವರು ಕ್ರಿಕೆಟ್​ನಿಂದ ದೂರ ಉಳಿದಿದ್ದರು. ಇದು ಸಣ್ಣ ಪ್ರಮಾಣದ ಗಾಯ ಅಂತ ಅಂದು ಬಿಸಿಸಿಐ ಹೇಳಿತ್ತು. ಆದ್ರೆ ಈಗ ಅದೇ ದೊಡ್ಡ ಪ್ರಮಾಣದ ಗಾಯವಾಗಿದೆ. ಸದ್ಯ ಬುಮ್ರಾ ಬೆಂಗಳೂರಿನಲ್ಲಿರುವ ಎನ್​ಸಿಎನಲ್ಲಿ ತರಬೇತಿ ಪಡೆಯುತ್ತಿದ್ದು, ಸದ್ಯಕ್ಕೆ ಅವರು ರಿಕವರಿಯಾಗುವಂತೆ ಕಾಣ್ತಿಲ್ಲ.

ಹರ್ಷಲ್ ಪಟೇಲ್ ಫಿಟ್​ ಆಗೋದು ಕಷ್ಟ: 

ವೆಸ್ಟ್ ಇಂಡೀಸ್ ಸರಣಿ ವೇಳೆ ಪಕ್ಕೆಲುಬು ನೋವಿಗೆ ತುತ್ತಾಗಿದ್ದ ಹರ್ಷಲ್ ಪಟೇಲ್, ಇಡೀ ಸಿರೀಸ್ ಮಿಸ್ ಮಾಡಿಕೊಂಡಿದ್ದರು. ಏಷ್ಯಾಕಪ್​ಗೂ ಸೆಲೆಕ್ಟ್ ಆಗಿಲ್ಲ. ಟಿ20 ವರ್ಲ್ಡ್​ಕಪ್​ ಆಡೋದು ಅನುಮಾನ ಅಂತ ಹೇಳಲಾಗ್ತಿದೆ. ಅವರು ಸಹ ಬೆಂಗಳೂರಿನಲ್ಲೇ ಫಿಟ್ನೆಸ್ ತರಬೇತಿ ಪಡೆಯುತ್ತಿದ್ದಾರೆ. ಅಲ್ಲಿಗೆ ಇಬ್ಬರು ಪ್ರಮುಖ ವೇಗಿಗಳಿಲ್ಲದೆ ಭಾರತ ವಿಶ್ವಕಪ್ ಆಡಬೇಕಾದ ಅನಿವಾರ್ಯಕ್ಕೆ ಬಿದ್ದಿದೆ.

ಬುಮ್ರಾ-ಹರ್ಷ ಬದಲಿಗೆ ವಿಶ್ವಕಪ್ ಆಡೋರ್ಯಾರು..?: 

ಇಬ್ಬರು ಮೇನ್ ಬೌಲರ್ಸ್​​​​​​ಗೆ ರಿಪ್ಲೇಸ್ಮೆಂಟ್ ಹುಡುಕುತ್ತಿದೆ ಬಿಸಿಸಿಐ. ಮೊಹಮ್ಮದ್ ಶಮಿಯನ್ನ ಟಿ20 ಟೀಮ್​ನಿಂದ ಡ್ರಾಪ್ ಮಾಡಿರುವುದರಿಂದ ಈಗ ಹೊಸಬರನ್ನೇ ಆಯ್ಕೆ ಮಾಡಬೇಕು. ದೀಪಕ್ ಚಹರ್ ಮತ್ತು ಅವೇಶ್ ಖಾನ್ ಇದ್ದಾರೆ. ಆದ್ರೆ ಆ ಇಬ್ಬರು ಸೀನಿಯರ್ ಬೌಲರ್​ಗಳಷ್ಟು ಪರಿಣಾಮಕಾರಿಯಲ್ಲ. ಇದೇ ಬಿಸಿಸಿಐಗೆ ಚಿಂತೆಗೀಡು ಮಾಡಿದೆ.

ಬೆಂಚ್ ಸ್ಟ್ರೆಂಥ್ ಹೆಚ್ಚಿದ್ರೆ ದ್ರಾವಿಡ್​ಗೆ ಲಾಭ, ಸೀನಿಯರ್ ಪ್ಲೇಯರ್ಸ್​ಗೆ ಶುರುವಾಯ್ತು ಪೀಕಲಾಟ..!

ಇನ್ನು ಬ್ಯಾಟರ್ಸ್​ ಮತ್ತು ಸ್ಪಿನ್ನರ್ಸ್​​ಗೆ ಬ್ಯಾಕ್ ಅಪ್ ಆಗಿ ಸಾಕಷ್ಟು ಪ್ಲೇಯರ್ಸ್ ಇದ್ದಾರೆ. ಆದ್ರೆ ಫಾಸ್ಟ್ ಬೌಲರ್ಸ್​​ಗೆ ಬ್ಯಾಕ್ ಅಪ್​ ಆಗಿ ಹೆಚ್ಚು ಮಂದಿ ಇಲ್ಲ. ಇದೇ ಕೋಚ್ ದ್ರಾವಿಡ್​ಗೆ ತಲೆ ನೋವಾಗಿರೋದು. ದೀಪಕ್​-ಅವೇಶ್ ಜೊತೆ ಶಾರ್ದೂಲ್ ಠಾಕೂರ್ - ಉಮ್ರಾನ್ ಮಲಿಕ್ ಸಹ ಇದ್ದಾರೆ. ಯಾರನ್ನೇ ಸೆಲೆಕ್ಟ್ ಮಾಡಿದ್ರೂ ಅನಾನುಭವಿಗಳೇ. ಭುವನೇಶ್ವರ್ ಕುಮಾರ್ ಬಿಟ್ರೆ ಉಳಿದವರೆಲ್ಲಾ ಹೊಸಬರೇ. ಈ ಹೊಸ ಬೌಲರ್​ಗಳನ್ನ ಕಟ್ಟಿಕೊಂಡು ದ್ರಾವಿಡ್-ರೋಹಿತ್​ ಟಿ20 ವಿಶ್ವಕಪ್ ಗೆಲ್ತಾರಾ ಅನ್ನೋ ಪ್ರಶ್ನೆಯೂ ಹುಟ್ಟಿಕೊಂಡಿದೆ.

Follow Us:
Download App:
  • android
  • ios