ವಿಶ್ವಕಪ್‌ನಲ್ಲಿ 5 ಬಾರಿ ಚಾಂಪಿಯನ್‌ ಭಾರತ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜ.20ಕ್ಕೆ ಬಾಂಗ್ಲಾದೇಶ, ಜ.25ಕ್ಕೆ ಐರ್ಲೆಂಡ್‌ ಹಾಗೂ ಜ.28ಕ್ಕೆ ಅಮೆರಿಕ ವಿರುದ್ಧ ಸೆಣಸಲಿದೆ. ಫೆ.11ಕ್ಕೆ ಫೈನಲ್‌ ಪಂದ್ಯ ನಡೆಯಲಿದೆ.

ನವದೆಹಲಿ(ಡಿ.13): 2024ರ ಜನವರಿ 19ರಿಂದ ದ.ಆಫ್ರಿಕಾದಲ್ಲಿ ಆರಂಭಗೊಳ್ಳಲಿರುವ ಐಸಿಸಿ ಅಂಡರ್‌-19 ಏಕದಿನ ವಿಶ್ವಕಪ್‌ಗೆ 15 ಸದಸ್ಯರ ಭಾರತ ತಂಡ ಪ್ರಕಟಗೊಂಡಿದ್ದು, ಕರ್ನಾಟಕದ ಯುವ ವೇಗಿ ಧನುಷ್‌ ಗೌಡ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಪಂಜಾಬ್‌ನ ಉದಯ್‌ ಶಹರನ್‌ ನಾಯಕತ್ವ ವಹಿಸಲಿದ್ದು, ಮಧ್ಯಪ್ರದೇಶದ ಸೌಮಿ ಕುಮಾರ್‌ ಪಾಂಡೆ ಉಪನಾಯಕನಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇದೇ ತಂಡ ಡಿ.29ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್‌, ದ.ಆಫ್ರಿಕಾ ವಿರುದ್ಧದ ತ್ರಿಕೋನ ಸರಣಿಯಲ್ಲೂ ಕಣಕ್ಕಿಳಿಯಲಿದೆ ಎಂದು ಬಿಸಿಸಿಐ ತಿಳಿಸಿದೆ.

ವಿಶ್ವಕಪ್‌ನಲ್ಲಿ 5 ಬಾರಿ ಚಾಂಪಿಯನ್‌ ಭಾರತ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜ.20ಕ್ಕೆ ಬಾಂಗ್ಲಾದೇಶ, ಜ.25ಕ್ಕೆ ಐರ್ಲೆಂಡ್‌ ಹಾಗೂ ಜ.28ಕ್ಕೆ ಅಮೆರಿಕ ವಿರುದ್ಧ ಸೆಣಸಲಿದೆ. ಫೆ.11ಕ್ಕೆ ಫೈನಲ್‌ ಪಂದ್ಯ ನಡೆಯಲಿದೆ.

Ind vs SA: ಹರಿಣಗಳ ಹೊಡೆತಕ್ಕೆ ಬೆಚ್ಚಿದ ಟೀಂ ಇಂಡಿಯಾ..!

ತಂಡ: ಉದಯ್‌(ನಾಯಕ), ಸೌಮಿ, ಅರ್ಶಿನ್‌ ಕುಲಕರ್ಣಿ, ಆದರ್ಶ್‌ ಸಿಂಗ್‌, ರುದ್ರ ಮಯೂರ್‌, ಸಚಿನ್‌ ದಾಸ್‌, ಪ್ರಿಯಾನ್ಶು ಮೋಲಿಯಾ, ಮುಶೀರ್ ಖಾನ್‌, ಮುರುಗನ್‌ ಅಭಿಷೇಕ್‌, ಅವನೀಶ್‌ ರಾವ್‌, ಇನ್ನೇಶ್‌ ಮಹಾಜನ್‌, ಧನುಶ್‌, ಆರಾಧ್ಯ ಶುಕ್ಲಾ, ರಾಜ್‌ ಲಿಂಬಾನಿ, ನಮನ್‌ ತಿವಾರಿ.

ವಿಜಯ್‌ ಹಜಾರೆ: ಇಂದು ತ.ನಾಡು-ಹರ್ಯಾಣ ಸೆಮಿ

ರಾಜ್‌ಕೋಟ್‌: 2023ರ ವಿಜಯ್‌ ಹಜಾರೆ ಏಕದಿನ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಬುಧವಾರ ಹರ್ಯಾಣ ಹಾಗೂ ದಾಖಲೆಯ 5 ಬಾರಿ ಚಾಂಪಿಯನ್‌ ತಮಿಳುನಾಡು ತಂಡಗಳು ಮುಖಾಮುಖಿಯಾಗಲಿವೆ. ‘ಸಿ’ ಗುಂಪಿನಲ್ಲಿದ್ದ ಹರ್ಯಾಣ ಆಡಿರುವ 7 ಪಂದ್ಯಗಳಲ್ಲೂ ಗೆದ್ದು, ಬಳಿಕ ಕ್ವಾರ್ಟರ್‌ನಲ್ಲಿ ಬಂಗಾಳ ವಿರುದ್ಧ ಜಯಗಳಿಸಿದೆ. 

2024ರ IPLನಲ್ಲಿ ಪಂತ್ ಕಮ್‌ಬ್ಯಾಕ್..? ಇಂಪ್ಯಾಕ್ಟ್ ಪ್ಲೇಯರ್ ರೂಪದಲ್ಲಿ ಡೆಲ್ಲಿ ಡ್ಯಾಶರ್ ಕಣಕ್ಕೆ..?

ತಂಡ ಇದೇ ಮೊದಲ ಬಾರಿ ಫೈನಲ್‌ ಪ್ರವೇಶಿಸಲು ಎದುರು ನೋಡುತ್ತಿದೆ. ಅತ್ತ ತಮಿಳುನಾಡು ‘ಇ’ ಗುಂಪಿನಲ್ಲಿ ಆಡಿದ 6 ಪಂದ್ಯಗಳಲ್ಲಿ 5ರಲ್ಲಿ ಜಯ ಸಾಧಿಸಿದ್ದು, ಕ್ವಾರ್ಟರ್‌ನಲ್ಲಿ ಮುಂಬೈ ತಂಡವನ್ನು ಸೋಲಿಸಿ ಅಂತಿಮ 4ರ ಘಟ್ಟ ಪ್ರವೇಶಿಸಿದೆ.

ಪಂದ್ಯ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಜಿಯೋ ಸಿನಿಮಾ

2024ರ ಐಪಿಎಲ್‌ನಲ್ಲಿ ಪಂತ್‌ ಆಡುವ ಸಾಧ್ಯತೆ

ನವದೆಹಲಿ: ಕಳೆದ ವರ್ಷ ಡಿಸೆಂಬರ್‌ನಲ್ಲಿ ಭೀಕರ ಕಾರು ಅಪಘಾತಕ್ಕೆ ತುತ್ತಾಗಿದ್ದ ಭಾರತದ ತಾರಾ ಕ್ರಿಕೆಟಿಗ ರಿಷಭ್‌ ಪಂತ್‌ 2024ರ ಫೆಬ್ರವರಿ ವೇಳೆಗೆ ಸಂಪೂರ್ಣ ಗುಣಮುಖರಾಗುವ ನಿರೀಕ್ಷೆಯಿದ್ದು, ಐಪಿಎಲ್‌ನಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 

ಒಂದು ವೇಳೆ ಪಂತ್‌ ಐಪಿಎಲ್‌ ಆಡಿದರೂ, ವಿಕೆಟ್‌ ಕೀಪಿಂಗ್‌ ಮಾಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಅವರನ್ನು ತಜ್ಞ ಬ್ಯಾಟರ್‌ ಹಾಗೂ ನಾಯಕನಾಗಿ ಕಣಕ್ಕಿಳಿಸುವ ಬಗ್ಗೆ ಫ್ರಾಂಚೈಸಿ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಈ ನಡುವೆ ಅವರು ಡಿ.19ಕ್ಕೆ ನಡೆಯಲಿರುವ ಹರಾಜಿನಲ್ಲಿ ಡೆಲ್ಲಿ ಫ್ರಾಂಚೈಸಿ ಜೊತೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.