19 ವರ್ಷದೊಳಗಿನ ಮಹಿಳಾ ಟಿ20 ವಿಶ್ವಕಪ್ ಸೆಮೀಸ್‌ನಲ್ಲಿ ಭಾರತ ಇಂಗ್ಲೆಂಡ್‌ನ್ನು 9 ವಿಕೆಟ್‌ಗಳಿಂದ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇಂಗ್ಲೆಂಡ್ 113 ರನ್ ಗಳಿಸಿದರೆ, ಭಾರತ ಕೇವಲ ಒಂದು ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿ ಜಯ ಸಾಧಿಸಿತು. ಕಮಲಿನಿ ಅಜೇಯ 56 ರನ್ ಸಿಡಿಸಿ ಮಿಂಚಿದರು. ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಭಾರತ ಸೆಣಸಲಿದೆ.
ಕೌಲಾಲಂಪುರ: ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಫೈನಲ್‌ಗೆ ಹಾಲಿ ಚಾಂಪಿಯನ್ ಭಾರತ ಲಗ್ಗೆಯಿಟ್ಟಿದೆ. ಶುಕ್ರವಾರ ನಡೆದ 2ನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 9 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು. ಭಾನುವಾರ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿರುವ ಭಾರತ, ಸತತ 2ನೇ ವಿಶ್ವಕಪ್ ಟ್ರೋಫಿ ಜಯಿಸುವ ಗುರಿ ಹೊಂದಿದೆ.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರಲ್ಲಿ 8 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿತು. ಇಂಗ್ಲೆಂಡ್ ಬ್ಯಾಟರ್‌ಗಳು ಭಾರತೀಯ ಸ್ಪಿನ್ನರ್‌ಗಳ ಎದುರು ಸ್ವೀಪ್ ಹಾಗೂ ಪ್ಯಾಡಲ್ ಸ್ವೀಪ್‌ಗಳನ್ನು ಮಾಡಲು ಹಿಂದೇಟು ಹಾಕಿದರು. ಇದರ ಪರಿಣಾಮ ಐವರು ಬೌಲ್ಡ್ ಆಗಿ ವಿಕೆಟ್ ಕಳೆದುಕೊಳ್ಳಬೇಕಾಯಿತು. ಆರಂಭಿಕ ಆಟಗಾರ್ತಿ ದವಿನಾ ಪೆರ್ರಿನ್ 45, ನಾಯಕಿ ಬಿ ನೊರ್ಗ್‌ರೊವ್ 30 ರನ್ ಗಳಿಸಿದರು. ಭಾರತ ಪರ ಸ್ಪಿನ್ನರ್‌ಗಳಾದ ಪಾರುಣಿಕಾ ಸಿಸೋಡಿಯಾ ಹಾಗೂ ವೈಷ್ಣವಿ ತಲಾ 3, ಆಯುಷಿ ಶುಕ್ಲಾ 2 ವಿಕೆಟ್ ಕಿತ್ತರು.
ರೈಲ್ವೇ ಟಿಕೆಟ್ ಕಲೆಕ್ಟರ್‌ಗೆ ವಿಕೆಟ್ ಒಪ್ಪಿಸಿ ವಿರಾಟ್ ಕೊಹ್ಲಿ ನಿರಾಸೆ!
ಸುಲಭ ಗುರಿ ಬೆನ್ನತ್ತಿದ ಭಾರತಕ್ಕೆ ತ್ರಿಶಾ ಹಾಗೂ ಜಿ. ಕಮಲಿನಿ ಮೊದಲ ವಿಕೆಟ್‌ಗೆ 60 ರನ್ ಜೊತೆಯಾಟ ನೀಡಿದರು. ತ್ರಿಶಾ 35 ರನ್ ಗಳಿಸಿ ಔಟಾದರೂ, ಕಮಲಿನಿ ಅರ್ಧಶತಕ ಸಿಡಿಸಿ ಇನ್ನೂ 5 ಓವರ್ ಬಾಕಿ ಇರುವಂತೆಯೇ ತಂಡವನ್ನು ಜಯದ ದಡ ಸೇರಿಸಿದರು. 50 ಎಸೆತದಲ್ಲಿ 56 ರನ್ ಗಳಿಸಿ ಕಮಲಿನಿ ಔಟಾಗದೆ ಉಳಿದರು.
ಸ್ಟೋರ್:
ಇಂಗ್ಲೆಂಡ್ 20 ಓವರಲ್ಲಿ 113/8 (ದವಿನಾ 45, ಆ್ಯಬಿ 30, ಪಾರುಣಿಕಾ 3-21, ವೈಷ್ಣವಿ 3-23, ಆಯುಷಿ 2-21), ಭಾರತ 15 ಓವರಲ್ಲಿ 117/1 (ಕಮಲಿನಿ 56*, ತ್ರಿಶಾ 35, ಬ್ರೆಟ್ 1-30)
ಆಂಗ್ಲರನ್ನು ಬಗ್ಗುಬಡಿದ ಟೀಂ ಇಂಡಿಯಾ: ತವರಿನಲ್ಲಿ ಭಾರತಕ್ಕೆ ಮತ್ತೊಂದು ಟಿ20 ಸರಣಿ!
ದ.ಆಫ್ರಿಕಾಕ್ಕೆ 5 ವಿಕೆಟ್ ಜಯ
ಮೊದಲ ಸೆಮೀಸಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ 5 ವಿಕೆಟ್ ಜಯ ಸಾಧಿಸಿತು. ಆಸ್ಟ್ರೇಲಿಯಾ 8 ವಿಕೆಟ್‌ಗೆ 105 ರನ್ ಗಳಿಸಿದರೆ, ದ.ಆಫ್ರಿಕಾ 18.1 ಓವರಲ್ಲಿ 5 ವಿಕೆಟ್‌ಗೆ 106 ರನ್ ಗಳಿಸಿ, ಮೊದಲ ಬಾರಿಗೆ ಫೈನಲ್‌ಗೇರಿತು.
