Asianet Suvarna News Asianet Suvarna News

ಮತ್ತೆರಡು ಹೊಸ IPL ತಂಡಗಳ ಸೇರ್ಪಡೆಗೆ ದಿನಾಂಕ ಫಿಕ್ಸ್‌..!

* 2022ರ ಐಪಿಎಲ್ ಟೂರ್ನಿಯಲ್ಲಿ 10 ತಂಡಗಳು ಕಣಕ್ಕೆ

* ಹೊಸ ಎರಡು ತಂಡಗಳ ಹೆಸರನ್ನು ಅಕ್ಟೋಬರ್ 25ರಂದು ಘೋಷಣೆ

* ಐಪಿಎಲ್ ತಂಡಗಳನ್ನು ಖರೀದಿಸಲು ಹಲವು ಫ್ರಾಂಚೈಸಿಗಳು ಆಸಕ್ತಿ

Two new IPL teams will be announced on October 25 Says BCCI kvn
Author
New Delhi, First Published Sep 29, 2021, 1:18 PM IST
  • Facebook
  • Twitter
  • Whatsapp

ನವದೆಹಲಿ(ಸೆ.29): ಮುಂಬರುವ 2022ನೇ ಸಾಲಿನ ಇಂಡಿಯನ್‌ ಪ್ರೀಮಿಯರ್ ಲೀಗ್‌(ಐಪಿಎಲ್‌) ಟೂರ್ನಿಯಲ್ಲಿ 10 ತಂಡಗಳು ಕಣಕ್ಕಿಳಿಯುವುದು ಬಹುತೇಕ ಖಚಿತ ಎನಿಸಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಐಪಿಎಲ್‌ (IPL) ಸೇರಲಿರುವ ಎರಡು ಹೊಸ ತಂಡಗಳ ಹೆಸರನ್ನು ಅಕ್ಟೋಬರ್ 25ರಂದು ಘೋಷಿಸಲಿದೆ

ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಬರುವ ಅಕ್ಟೋಬರ್ 25ರಂದು ಎರಡು ಹೊಸ ತಂಡಗಳ ಹೆಸರನ್ನು ಘೋಷಿಸಿದ ಬಳಿಕ ತಕ್ಷಣವೇ 2023-2027ರವರೆಗಿನ ಐಪಿಎಲ್ ಮಾಧ್ಯಮ ಪ್ರಸಾರದ ಹಕ್ಕಿನ ಟೆಂಡರ್ ಕರೆಯಲಾಗುವುದು ಎಂದು ಬಿಸಿಸಿಐ  ತಿಳಿಸಿದೆ.

ಈ ಮೊದಲು ಮುಂಬರುವ ಐಪಿಎಲ್‌ ಟೂರ್ನಿಯಲ್ಲಿ ಕೇವಲ ಒಂದು ತಂಡ ಸೇರ್ಪಡೆಯಾಗಲಿದೆ ಎಂದು ವರದಿಯಾಗಿತ್ತು. ಇದಾದ ಬಳಿಕ ಎರಡು ಹೊಸ ತಂಡಗಳ ಸೇರ್ಪಡೆಗೆ ಬಿಸಿಸಿಐ (BCCI) ಒಲವು ತೋರಿತ್ತು ಎಂದು ವರದಿಯಾಗಿದೆ. ಹೀಗಾಗಿ 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಹೊಸದಾಗಿ ಎಷ್ಟು ತಂಡಗಳು ಸೇರ್ಪಡೆಯಾಗಲಿವೆ ಎನ್ನುವುದರ ಕುರಿತಂತೆ ಯಾವುದೇ ಸ್ಪಷ್ಟ ಮಾಹಿತಿ ಹೊರಬಿದ್ದಿರಲಿಲ್ಲ. ಆದರೆ ಈಗ ಸ್ವತಃ ಬಿಸಿಸಿಐ ಈ ಕುರಿತಂತೆ ಸ್ಪಷ್ಟ ಮಾಹಿತಿ ಹೊರಹಾಕಿದ್ದು ಇನ್ನೆರಡು ತಂಡಗಳು ಐಪಿಎಲ್‌ನಲ್ಲಿ ಸೇರ್ಪಡೆಯಾಗುವುದು ಖಚಿತವೆನಿಸಿದೆ.

IPL 2021 ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ..! ಏಕಕಾಲದಲ್ಲಿ ನಡೆಯಲಿವೆ 2 ಪಂದ್ಯ.!

ಬಿಸಿಸಿಐ ಹೊಸ ತಂಡಗಳು ಖರೀದಿಸಲು ಆಸಕ್ತಿಯಿದ್ದವರು 10 ಲಕ್ಷ ರುಪಾಯಿ ಹಣ ಪಾವತಿ ಮಾಡಿ ಅರ್ಜಿ ಪಡೆಯಲು ಸೂಚಿಸಿತ್ತು. ಇದಕ್ಕೆ ಈ ಮೊದಲು ಅಕ್ಟೋಬರ್ 05ರ ವರೆಗೆ ಡೆಡ್‌ಲೈನ್ ನೀಡಿತ್ತು. ಇದೀಗ ಆ ಗಡುವನ್ನು ಅಕ್ಟೋಬರ್ 10ಕ್ಕೆ ವಿಸ್ತರಿಸಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ನಡೆದ ಮರುದಿನ ಅಂದರೆ ಅಕ್ಟೋಬರ್ 25ರಂದು ಐಪಿಎಲ್‌ನಲ್ಲಿ ಎರಡು ಹೊಸ ತಂಡಗಳ ಹೆಸರು ಅಧಿಕೃತವಾಗಲಿದೆ. ಈಗಾಗಲೇ 8 ತಂಡಗಳು ಐಪಿಎಲ್‌ನಲ್ಲಿ ಕಾದಾಡುತ್ತಿವೆ.

ಈಗಾಗಲೇ ಮುಂಬರುವ ಐಪಿಎಲ್‌ ಟೂರ್ನಿಗೆ ತಂಡಗಳನ್ನು ಖರೀದಿಸಲು ಹಲವು ಉದ್ಯಮಿಗಳು ಆಸಕ್ತಿ ತೋರಿದ್ದಾರೆ. ಈ ಪೈಕಿ ಅದಾನಿ ಗ್ರೂಪ್‌ ಹಾಗೂ ಸಂಜೀವ್ ಗೋಯೆಂಕಾ ಗ್ರೂಪ್‌ ಈಗಾಗಲೇ ಐಪಿಎಲ್‌ ತಂಡ ಖರೀದಿಸಲು ಹೆಚ್ಚು ಒಲವು ತೋರಿದೆ ಎಂದು ವರದಿಯಾಗಿದೆ. ಹೊಸ ತಂಡಗಳಿಗೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಹಾಗೂ ಲಖನೌದ ಏಕಾನಾ ಸ್ಟೇಡಿಯಂ ತವರಿನ ಕ್ರೀಡಾಂಗಣಗಳೆನಿಸಿಕೊಳ್ಳಲಿವೆ ಎಂದು ವರದಿಯಾಗಿದೆ.

Follow Us:
Download App:
  • android
  • ios