ಪಾಕಿಸ್ತಾನ ಮಾಜಿ ನಾಯಕ ಸಲೀಂ ಮಲೀಕ್ ಮೇಲೆ ವಾಸೀಂ ಅಕ್ರಂ ಗಂಭೀರ ಆರೋಪಯುವ ಆಟಗಾರರನ್ನು ಸೇವಕರಂತೆ ಬಳಸಿಕೊಳ್ಳುತ್ತಿದ್ದರು ಎಂದ ಮಾಜಿ ವೇಗಿಕೇವಲ ಪ್ರಚಾರಕ್ಕಾಗಿ ಅಕ್ರಂ ಹೀಗೆಲ್ಲಾ ಬರೆದಿದ್ದಾರೆ ಎಂದ ಸಲೀಂ ಮಲಿಕ್

ಕರಾಚಿ(ನ.29): ನನ್ನ ಕ್ರಿಕೆಟ್‌ನ ಆರಂಭಿಕ ದಿನಗಳಲ್ಲಿ ಸಲೀಂ ಮಲಿಕ್‌ ನನ್ನನ್ನು ಸೇವಕನಂತೆ ನಡೆಸಿಕೊಂಡಿದ್ದರು ಎಂದು ಪಾಕಿಸ್ತಾನದ ಮಾಜಿ ವೇಗಿ ವಾಸೀಂ ಅಕ್ರಂ ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ. 1992ರಿಂದ 1995ರ ಅವಧಿಯಲ್ಲಿ ಅಕ್ರಂ, ಮಲಿಕ್‌ರ ನಾಯಕತ್ವದಲ್ಲಿ ಆಡಿದ್ದರು. ‘ ಮಲಿಕ್‌ ನನ್ನಿಂದ ಮಸಾಜ್‌ ಮಾಡಿಸಿಕೊಳ್ಳುತ್ತಿದ್ದರು, ಅವರ ಬಟ್ಟೆ, ಶೂಗಳನ್ನು ಸ್ವಚ್ಛಗೊಳಿಸುವಂತೆ ಒತ್ತಾಯಿಸುತ್ತಿದ್ದರು’ ಎಂದು ಅಕ್ರಂ ಬರೆದಿದ್ದಾರೆ. 

ವಾಸೀಂ ಅಕ್ರಂ 1984ರಲ್ಲಿ ಪಾಕಿಸ್ತಾನ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದೀಗ 'Sultan: A Memoir' ಎನ್ನುವ ತಮ್ಮ ಆತ್ಮಕಥೆಯಲ್ಲಿ ಕೆಲವೊಂದು ಅಚ್ಚರಿಯ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಸಲೀಂ ಮಲಿಕ್, ತಮಗಿಂತ ಕಿರಿಯ ಆಟಗಾರರನ್ನು ತನ್ನ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದರು. ಅವರು ಯಾವಾಗಲೂ ಋಣಾತ್ಮಕ ಮನೋಭಾವ ಹೊಂದಿದ್ದರು ಹಾಗೂ ಸ್ವಾರ್ಥಿಯಾಗಿದ್ದರು ಎಂದು ತಮ್ಮ ಆತ್ಮಕಥೆಯಲ್ಲಿ ಉಲ್ಲೇಖಿಸಿದ್ದಾರೆ. 

Ind vs NZ: ಎರಡನೇ ಪಂದ್ಯದಿಂದ ಸಂಜು ಸ್ಯಾಮ್ಸನ್‌ ಕೈಬಿಟ್ಟಿದ್ದೇಕೆ? ಕ್ಯಾಪ್ಟನ್ ಶಿಖರ್ ಧವನ್ ಹೇಳಿದ್ದೇನು?

ವಾಸೀಂ ಅಕ್ರಂರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಮಲಿಕ್‌, ‘ಕೇವಲ ಪ್ರಚಾರಕ್ಕಾಗಿ ಅಕ್ರಂ ಹೀಗೆಲ್ಲಾ ಬರೆದಿದ್ದಾರೆ. ಅವರನ್ನು ಪ್ರಶ್ನಿಸೋಣವೆಂದು ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ. ಯಾವಾಗಲಾದರೂ ಸಿಕ್ಕಾಗ ಯಾಕೆ ಹೀಗೆಲ್ಲಾ ಬರೆದಿದ್ದೀರಾ ಎಂದು ಕೇಳುತ್ತೇನೆ’ ಎಂದಿದ್ದಾರೆ.

2023ರ ವಿಶ್ವಕಪ್‌ಗೆ ನೇರ ಪ್ರವೇಶ ಪಡೆದ ಆಫ್ಘನ್‌

ದುಬೈ: 2023ರ ಏಕದಿನ ವಿಶ್ವಕಪ್‌ಗೆ ಅಷ್ಘಾನಿಸ್ತಾನ ನೇರ ಪ್ರವೇಶ ಪಡೆದಿದೆ. ಶ್ರೀಲಂಕಾ ವಿರುದ್ಧ ಭಾನುವಾರ ನಡೆಯಬೇಕಿದ್ದ 2ನೇ ಏಕದಿನ ಪಂದ್ಯ ಮಳೆಯಿಂದ ರದ್ದಾದ ಕಾರಣ, ಆಫ್ಘನ್‌ಗೆ 5 ಅಂಕಗಳು ದೊರೆಯಿತು. ಸೂಪರ್‌ ಲೀಗ್‌ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಪಡೆಯುವ ಮೂಲಕ ಆಫ್ಘನ್‌ ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯಿತು. ಲಂಕಾ ಇನ್ನೂ 10ನೇ ಸ್ಥಾನದಲ್ಲಿದ್ದು, ಅರ್ಹತಾ ಟೂರ್ನಿಯಲ್ಲಿ ಆಡಬೇಕಾದ ಸ್ಥಿತಿ ಎದುರಾಗಬಹುದು.

ಗರಿಷ್ಠ ಪ್ರೇಕ್ಷಕರು: ಐಪಿಎಲ್‌ ಫೈನಲ್‌ ಗಿನ್ನಿಸ್‌ ದಾಖಲೆ!

ನವದೆಹಲಿ: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2022ರ ಐಪಿಎಲ್‌ ಫೈನಲ್‌ ಪಂದ್ಯ ಗಿನ್ನಿಸ್‌ ವಿಶ್ವ ದಾಖಲೆಗೆ ಸೇರ್ಪಡೆಗೊಂಡಿದೆ. ಅತಿಹೆಚ್ಚು ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಕೂತು ವೀಕ್ಷಿಸಿದ ಟಿ20 ಪಂದ್ಯ ಎನ್ನುವ ದಾಖಲೆಗೆ ಗುಜರಾತ್‌ ಟೈಟಾನ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್‌ ನಡುವಿನ ಫೈನಲ್‌ ಪಾತ್ರವಾಗಿತ್ತು. ಮೇ 29ರಂದು ನಡೆದಿದ್ದ ಆ ಪಂದ್ಯವನ್ನು 101566 ಮಂದಿ ಕ್ರೀಡಾಂಗಣದಲ್ಲಿ ವೀಕ್ಷಿಸಿದ್ದರು.

ಬಿಸಿಸಿಐ ಆಯ್ಕೆ ಸಮಿತಿ ಸೇರಲು 80 ಮಂದಿ ಅರ್ಜಿ

ನವದೆಹಲಿ: ಟಿ20 ವಿಶ್ವಕಪ್‌ನ ವೈಫಲ್ಯದ ಬಳಿಕ ಆಯ್ಕೆ ಸಮಿತಿಯನ್ನು ವಜಾಗೊಳಿಸಿದ ಬಿಸಿಸಿಐ ಐವರು ಸದಸ್ಯರ ನೂತನ ಸಮಿತಿ ರಚಿಸಲು ಸಿದ್ಧತೆ ನಡೆಸುತ್ತಿದ್ದು, ಇದಕ್ಕಾಗಿ ಸೂಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ನ.28 ಅಂತಿಮ ದಿನವಾಗಿದ್ದು, 80 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಕೊನೆ ದಿನ ಇನ್ನಷ್ಟುಮಂದಿಯಿಂದ ಅರ್ಜಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಡಿಸೆಂಬರ್‌ನಲ್ಲಿ ಹೊಸ ಸಮಿತಿ ರಚನೆಯಾಗುವ ನಿರೀಕ್ಷೆ ಇದೆ.