ಗುಜರಾತ್ ಮಾಲಿಕತ್ವ ಬದಲು: ಟೈಟಾನ್ಸ್ ಫ್ರಾಂಚೈಸಿ ಟೊರೆಂಟ್ ತೆಕ್ಕೆಗೆ!
ಐಪಿಎಲ್‌ನ ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಈ ಋತುವಿನಲ್ಲಿ ಹೊಸ ಮಾಲೀಕತ್ವ ಪಡೆಯುವ ಸಾಧ್ಯತೆಯಿದೆ. ಟೊರೆಂಟ್ ಗ್ರೂಫ್ ಫ್ರಾಂಚೈಸಿಯ ಶೇ.67ರಷ್ಟು ಪಾಲುದಾರಿಕೆ ಖರೀದಿಸಲು ಮುಂದಾಗಿದೆ. ಒಪ್ಪಂದ ಪೂರ್ಣಗೊಂಡಿದ್ದು, ಐಪಿಎಲ್ ಆಡಳಿತ ಮಂಡಳಿಯ ಅನುಮೋದನೆಗಾಗಿ ಕಾಯುತ್ತಿದೆ.

ನವದೆಹಲಿ: ಐಪಿಎಲ್ ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಈ ಋತುವಿನಲ್ಲಿ ಹೊಸ ಮಾಲಿಕತ್ವ ಪಡೆಯುವ ಸಾಧ್ಯತೆಯಿದೆ. ಔಷಧ ಕ್ಷೇತ್ರದ ಪ್ರಮುಖ ಕಂಪನಿಯಾಗಿರುವ ಟೊರೆಂಟ್ ಗ್ರೂಫ್ ಗುಜರಾತ್ ಫ್ರಾಂಚೈಸಿಯ ಶೇ.67ರಷ್ಟು ಪಾಲುದಾರಿಕೆ ಖರೀದಿಸಲು ಮುಂದಾಗಿದೆ.
2021ರಲ್ಲಿ ಸಿವಿಸಿ ಕ್ಯಾಪಿಟಲ್ಸ್ 5,626 ಕೋಟಿ ರು. ನೀಡಿ ಗುಜರಾತ್ ಟೈಟಾನ್ಸ್ ತಂಡವನ್ನು ಖರೀದಿಸಿತ್ತು. ಈ ಗುಂಪಿನ ಏಕೈಕ ಮಾಲೀಕರ ಲಾಕ್ -ಇನ್ ಅವಧಿ ಫೆಬ್ರವರಿ 2025ರಲ್ಲಿ ಕೊನೆಗೊಳ್ಳಲಿದೆ. ಆ ಬಳಿಕ ತಂಡವನ್ನು ಮಾರಾಟ ಮಾಡಬಹುದಾಗಿದೆ. ಇದೀಗ ಅಹಮದಾಬಾದ್ ಮೂಲದ ಟೊರೆಂಟ್ ಸಂಸ್ಥೆಯು ಸಿವಿಎಸ್ ನಿಂದ ಶೇ.67ರಷ್ಟು ಪಾಲನ್ನು ಖರೀದಿಸಲಿದೆ.
ಈಗಾಗಲೇ ಒಪ್ಪಂದ ಪೂರ್ಣಗೊಂಡಿದ್ದು, ಐಪಿಎಲ್ ಆಡಳಿತ ಮಂಡಳಿ ಯಿಂದ ಅಂತಿಮ ಅನುಮೋದನೆಗಾಗಿ ಕಾಯುತ್ತಿದೆ. ಮಾರ್ಚ್ 21ರಿಂದ ಆರಂಭವಾಗಲಿರುವ ಐಪಿಎಲ್‌ಗೂ ಮುನ್ನ ಗುಜರಾತ್ ತಂಡ ಟೊರೆಂಟ್ ಸಂಸ್ಥೆಯ ನಿಯಂತ್ರಣಕ್ಕೆ ಒಳಪಡಲಿದೆ.
ಇಂಗ್ಲೆಂಡ್ ಎದುರು ಭಾರತಕ್ಕೆ ಏಕದಿನ ಸರಣಿ ಕ್ಲೀನ್‌ಸ್ವೀಪ್ ಗುರಿ!
2022ರಲ್ಲಿ ಮೊದಲ ಬಾರಿಗೆ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ಮೊದಲ ಪ್ರಯತ್ನದಲ್ಲೇ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು 2023ರ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ತಂಡವು ಫೈನಲ್ ಪ್ರವೇಶಿಸಿ ರನ್ನರ್‌ಅಪ್ ಸ್ಥಾನ ಪಡೆದುಕೊಂಡಿತ್ತು.
ಮ್ಯಾಚ್ ಫಿಕ್ಸಿಂಗಲ್ಲಿ ಬ್ಯಾನ್ ಆದ ಮೊದಲ ಮಹಿಳಾ ಕ್ರಿಕೆಟರ್ ಶೋಹಲಿ ಅಖರ್!
ದುಬೈ: 2023ರ ಮಹಿಳಾ ಟಿ20 ವಿಶ್ವಕಪ್‌ನ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಶೋಹೆಲಿ ಅಖರ್ 5 ವರ್ಷ ನಿಷೇಧಕ್ಕೊಳಗಾಗಿದ್ದಾರೆ. 36 ವರ್ಷದ ಶೋಹಲಿ ಬಾಂಗ್ಲಾ ಪರ 2 ಏಕದಿನ, 13 ಟಿ20 ಪಂದ್ಯಗಳನ್ನಾಡಿದ್ದು, ಮಹಿಳಾ ಕ್ರಿಕೆಟ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿ ನಿಷೇಧಕ್ಕೊಳಗಾದ ಮೊದಲ ಆಟಗಾರ್ತಿ ಎಂಬ ಅಪಖ್ಯಾತಿಗೆ ಗುರಿಯಾಗಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಆಡೋರ್ಯಾರು? ಅಚ್ಚರಿ ಭವಿಷ್ಯ ನುಡಿದ ರವಿಶಾಸ್ತ್ರಿ, ರಿಕಿ ಪಾಂಟಿಂಗ್!
ಶೋಹಲಿ 2023ರ ವಿಶ್ವಕಪ್‌ನಲ್ಲಿ ಆಡಿರಲಿಲ್ಲ. ಆದರೆ ಫೇಸ್ಟುಕ್ ಮೂಲಕ ತಂಡದ ಸಹ ಆಟಗಾರ್ತಿಯನ್ನು ಸಂಪರ್ಕಿಸಿ, ಫಿಕ್ಸಿಂಗ್ ಮಾಡಲು ಒತ್ತಾಯ ಮಾಡಿದ್ದರು. ಆದರೆ ಇದನ್ನು ನಿರಾಕರಿಸಿದ್ದ ಆಟಗಾರ್ತಿ, ಐಸಿಸಿ ಭ್ರಷ್ಟಾಚಾರ ನಿಗ್ರಹ ಸಮಿತಿಗೆ ದೂರು ನೀಡಿದ್ದರು.