Asianet Suvarna News Asianet Suvarna News

ಇವರೇ ನೋಡಿ ಅತಿಹೆಚ್ಚು ಟ್ಯಾಕ್ಸ್‌ ಕಟ್ಟುವ ಭಾರತದ ಕ್ರಿಕೆಟಿಗ..! ಆದ್ರೆ ಇವರು ಕೊಹ್ಲಿ, ಸಚಿನ್,ಯುವಿ ಅಲ್ಲವೇ ಅಲ್ಲ..!

ಭಾರತದ ಯಶಸ್ವಿ ನಾಯಕ ಟ್ಯಾಕ್ಸ್‌ ಕಟ್ಟುವುದರಲ್ಲೂ ನಂ.1
ಕ್ಯಾಪ್ಟನ್ ಕೂಲ್ ಧೋನಿ ಜಾರ್ಖಂಡ್‌ನ ಅತಿಹೆಚ್ಚು ಟ್ಯಾಕ್ಸ್‌ ಕಟ್ಟುವ ವ್ಯಕ್ತಿ
ಚೆನ್ನೈ ತಂಡದಿಂದ ವಾರ್ಷಿಕ 12 ಕೋಟಿ ರುಪಾಯಿ ಸಂಭಾವನೆ ಪಡೆಯುವ ಧೋನಿ

This Indian cricketer is the highest tax paying sportsman with Rs 12 crore salary kvn
Author
First Published Jul 18, 2023, 1:42 PM IST

ಬೆಂಗಳೂರು(ಜು.18): ಭಾರತ ಕ್ರಿಕೆಟ್‌ ತಂಡದ ಆಟಗಾರರಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಕಳೆದ ಹಣಕಾಸು ವರ್ಷದಲ್ಲಿ ಜಾರ್ಖಂಡ್‌ನ ಅತಿಹೆಚ್ಚು ತೆರಿಗೆ ಕಟ್ಟುವ ವ್ಯಕ್ತಿ ಎನಿಸಿಕೊಂಡಿದ್ದಾರೆ. ಕಳೆದ ಮಾರ್ಚ್‌ 31ರ ಅಂತ್ಯದ ವೇಳೆಗೆ ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ ಎಸ್ ಧೋನಿ, 38 ಕೋಟಿ ರುಪಾಯಿಗಳನ್ನು ಅಡ್ವಾನ್ಸ್‌ ತೆರಿಗೆ ರೂಪದಲ್ಲಿ ಕಟ್ಟಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಖಚಿತಪಡಿಸಿದೆ.

42 ವರ್ಷದ ಕ್ರಿಕೆಟಿಗ ಎಂ ಎಸ್ ಧೋನಿ ಕಳೆದ 2020ರ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಮುನ್ನಡೆಸುತ್ತಾ ಬಂದಿದ್ದಾರೆ. ಕೂಲ್ ಕ್ಯಾಪ್ಟನ್ ಎಂ ಎಸ್ ಧೋನಿ, ಚೆನ್ನೈ ಸೂಪರ್ ಕಿಂಗ್ಸ್‌ ತಂಡದಿಂದ ವಾರ್ಷಿಕ 12 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಾ ಬಂದಿದ್ದಾರೆ.

ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಹೊರತಾಗಿಯೂ ಟ್ಯಾಕ್ಸ್ ಕಟ್ಟುವ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದಲೂ ಜಾರ್ಖಂಡ್‌ ರಾಜ್ಯದ ಅತ್ಯಂತ ಹೆಚ್ಚು ತೆರಿಗೆ ಕಟ್ಟುವ ವ್ಯಕ್ತಿ ಎನಿಸಿಕೊಳ್ಳುತ್ತಲೇ ಬಂದಿದ್ದಾರೆ.

RCB ಮ್ಯಾನೇಜ್‌ಮೆಂಟ್‌ ನಂಬಿಸಿ ಮೋಸ ಮಾಡಿತು..! ಬೆಂಗಳೂರು ಫ್ರಾಂಚೈಸಿ ವಿರುದ್ದ ನೊಂದು ನುಡಿದ ಚಹಲ್..!

ಇನ್ನು ಅಡ್ವಾನ್ಸ್‌ ಟ್ಯಾಕ್ಸ್‌ ಕಟ್ಟುವ ವಿಚಾರದಲ್ಲಿ ಗಮನಾರ್ಹವಾಗಿರುವ ಎಂ ಎಸ್ ಧೋನಿ, ಕಳೆದ ಅಂದರೆ 2020-21ರ ಹಣಕಾಸು ವರ್ಷದಲ್ಲೂ ಜಾರ್ಖಂಡ್‌ ಪರ ಗರಿಷ್ಠ ಟ್ಯಾಕ್ಸ್ ಕಟ್ಟಿದ ವ್ಯಕ್ತಿ ಎನಿಸಿಕೊಂಡಿದ್ದಾರೆ. ಧೋನಿ, 2020-21ರ ಹಣಕಾಸು ವರ್ಷದಲ್ಲಿ ಸರಿ ಸುಮಾರು 30 ಕೋಟಿ ರುಪಾಯಿ ಮುಂಗಡ ತೆರಿಗೆ ಕಟ್ಟಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಎಂ ಎಸ್ ಧೋನಿ ಮಾಲಿಕತ್ವದಲ್ಲಿ ದೇಶಾದ್ಯಂತ ಸುಮಾರು 200ಕ್ಕೂ ಅಧಿಕ ಜಿಮ್‌ಗಳಿವೆ. ಈ ಎಲ್ಲಾ ಜಿಮ್‌ಗಳು SportsFit World Pvt. Ltd ಬ್ಯಾನರ್‌ನಡಿ ಕೆಲಸ ನಿರ್ವಹಿಸುತ್ತಿವೆ. ಇನ್ನು ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿನ ಚೆನ್ನೈಯಿನ್‌ ಫುಟ್ಬಾಲ್ ಕ್ಲಬ್‌ನ ಮಾಲೀಕರಾಗಿದ್ದಾರೆ. ಇನ್ನು ಧೋನಿ ಹಲವು ಪ್ರಮುಖ ಕಂಪನಿಗಳ ಬ್ರ್ಯಾಂಡ್‌ ಅಂಬಾಸಿಡರ್ ಆಗಿದ್ದಾರೆ.

ಭಾರತೀಯರ ಮೇಲೆಯೇ ಸುಳ್ಳು ಸುಳ್ಳು ಆರೋಪ ಹೊರಿಸಿದ ಪಾಕ್ ಸುಳ್ಳುಬುರುಕ ಅಫ್ರಿದಿ!

ಇನ್ನು 2019ರಲ್ಲಿ ಸ್ಥಾಪನೆಯಾಗಿರುವ ಧೋನಿ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಆಗಿ ಎಂ ಎಸ್ ಧೋನಿ ಪತ್ನಿ ಸಾಕ್ಷಿ ಸಿಂಗ್ ಧೋನಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಿನಿಮಾ ಪ್ರೊಡೆಕ್ಷನ್ ಸಂಸ್ಥೆಯು ಇದೀಗ ತಮಿಳಿನಲ್ಲಿ LGM(ಲೆಟ್ಸ್‌ ಗೆಟ್ ಮ್ಯಾರೀಡ್) ಎನ್ನುವ ಸಿನಿಮಾವನ್ನು ನಿರ್ಮಿಸುತ್ತಿದೆ. ಈಗಾಗಲೇ ಧೋನಿ ಈ ಸಿನಿಮಾದ ಟ್ರೇಲರ್‌ ಲಾಂಚ್ ಮಾಡಿದ್ದಾರೆ.

Follow Us:
Download App:
  • android
  • ios