Asianet Suvarna News Asianet Suvarna News

ಐತಿಹಾಸಿಕ ನಿರ್ಧಾರ ತೆಗೆದುಕೊಂಡ ICC: ಇಂದಿನ ಪಂದ್ಯದಲ್ಲೇ ಹೊಸ ರೂಲ್ಸ್ ಅಳವಡಿಕೆ

ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ನೋ ಬಾಲ್ ತೀರ್ಪನ್ನು ಮೂರನೇ ಅಂಪೈರ್ ನೀಡಲಿದ್ದಾರೆ. ಈ ಹೊಸ ತೀರ್ಮಾನ ಹೇಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ... 

Third Umpires to take call for front foot no balls in India vs West Indies 1st T20I
Author
Hyderabad, First Published Dec 6, 2019, 12:52 PM IST

ದುಬೈ[ಡಿ.06]: ಭಾರತ ಹಾಗೂ ವೆಸ್ಟ್‌ಇಂಡೀಸ್‌ ನಡು​ವಿನ ಟಿ20 ಹಾಗೂ ಏಕ​ದಿನ ಸರ​ಣಿ​ಯಲ್ಲಿ ಬೌಲರ್‌ಗಳು ನೋಬಾಲ್‌ ಎಸೆ​ದರೆ ಅದನ್ನು ಮೈದಾ​ನ​ದ​ಲ್ಲಿ​ರುವ ಅಂಪೈರ್‌ ಬದ​ಲಿಗೆ ಮೂರನೇ ಅಂಪೈರ್‌ ನಿರ್ಧ​ರಿ​ಸ​ಲಿ​ದ್ದಾರೆ ಎಂದು ಗುರು​ವಾರ ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಸಮಿತಿ (ಐ​ಸಿ​ಸಿ) ಘೋಷಿ​ಸಿತು. 

ಇಂಡೋ-ವಿಂಡೀಸ್‌ ಮೊದಲ ಟಿ20ಗೆ ಕ್ಷಣಗಣನೆ ಆರಂಭ

ನೋಬಾಲ್‌ ನಿರ್ಧ​ರಿ​ಸಲು ತಂತ್ರ​ಜ್ಞಾ​ನದ ಸಹಾಯ ಪಡೆ​ಯ​ಲಿದ್ದು, 3ನೇ ಅಂಪೈರ್‌ ಪ್ರತಿ ಎಸೆತವನ್ನು ಗಮ​ನಿ​ಸ​ಲಿ​ದ್ದಾರೆ. ಇದೇ ಮೊದಲು 2016ರಲ್ಲಿ ಈ ಪ್ರಯೋಗ ನಡೆದಿತ್ತು. ಆದರೆ ಭಾರತ ಆಡುವ ಪಂದ್ಯ​ದಲ್ಲಿ ಇಂತಹ ಪ್ರಯೋಗ ಇದೇ ಮೊದಲು. ಇದೇ ವರ್ಷ ಆಗಸ್ಟ್‌ನಲ್ಲಿ ನೋಬಾಲ್‌ ನಿರ್ಧಾರಿಸುವ ಜವಾ​ಬ್ದಾರಿ 3ನೇ ಅಂಪೈರ್‌ನದ್ದು ಎಂದು ಐಸಿಸಿ ಘೋಷಿ​ಸಿತ್ತು. ಆ ಪ್ರಯೋಗವನ್ನು ಸರ​ಣಿ​ಯಲ್ಲಿ ನಡೆ​ಸ​ಲಿದೆ. ಮುಂಬ​ರುವ ದಿನ​ಗ​ಳಲ್ಲಿ ಕೆಲ ಆಯ್ದ ಸರ​ಣಿ​ಗ​ಳಲ್ಲಿ ಈ ಪ್ರಯೋಗ ನಡೆಸಿ, ತಂತ್ರ​ಜ್ಞಾನ ಸಹಾ​ಯದ ಸಾಧ​ಕ-ಬಾಧಕಗಳನ್ನು ಪರಿ​ಶೀ​ಲಿ​ಸ​ಲಾ​ಗು​ತ್ತದೆ ಎಂದು ಐಸಿಸಿ ತಿಳಿ​ಸಿದೆ.

ನೋಬಾಲ್‌ ಘೋಷಣೆ ಹೇಗೆ?
3ನೇ ಅಂಪೈರ್‌ ಪ್ರತಿ ಎಸೆತವನ್ನು ಟೀವಿ ಪರ​ದೆಯಲ್ಲಿ ವೀಕ್ಷಿ​ಸ​ಲಿ​ದ್ದಾರೆ. ನೋಬಾಲ್‌ ಎಂದು ನಿರ್ಧ​ರಿ​ಸಿದ ಬಳಿಕ ಆ ತೀರ್ಪನ್ನು ಮೈದಾ​ನ​ದ​ಲ್ಲಿ​ರುವ ಅಂಪೈರ್‌ಗೆ ತಿಳಿ​ಸ​ಲಿ​ದ್ದಾರೆ. ಒಂದೊಮ್ಮೆ ನೋಬಾಲ್‌ನಲ್ಲಿ ವಿಕೆಟ್‌ ಪತ​ನ​ಗೊಂಡಿ​ದ್ದರೆ, ಬ್ಯಾಟ್ಸ್‌ಮನ್‌ನನ್ನು ಕ್ರೀಸ್‌ಗೆ ಮರ​ಳು​ವಂತೆ ಸೂಚಿ​ಸ​ಲಾ​ಗು​ತ್ತದೆ. 3ನೇ ಅಂಪೈರ್‌ನ ಸೂಚನೆ ಇಲ್ಲದೆ ಮೈದಾ​ನ​ದ​ಲ್ಲಿ​ರುವ ಅಂಪೈರ್‌ಗಳು ನೋಬಾಲ್‌ ಘೋಷಿ​ಸು​ವು​ದಿಲ್ಲ.
 

Follow Us:
Download App:
  • android
  • ios