ದೀರ್ಘ ಸಮಯದ ಬಳಿಕ ಇತ್ತೀಚೆಗಷ್ಟೇ ಭಾರತ ತಂಡಕ್ಕೆ ಮರಳಿದ್ದ ಶ್ರೇಯಸ್‌ ಅಯ್ಯರ್‌ ಮತ್ತೆ ಬೆನ್ನುನೋವಿಗೆ ತುತ್ತಾಗಿದ್ದು, ವಿಶ್ವಕಪ್‌ಗೂ ಮುನ್ನ ಫಿಟ್‌ ಆಗುತ್ತಾರೊ ಇಲ್ಲವೊ ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ಮತ್ತೊಂದೆಡೆ ಅಕ್ಷರ್‌ ಪಟೇಲ್‌ ಕೂಡಾ ಗಾಯಗೊಂಡಿದ್ದು, ಗಾಯ ಪ್ರಮಾಣ ಇನ್ನಷ್ಟೇ ಗೊತ್ತಾಗಬೇಕಿದೆ.

ನವದೆಹಲಿ(ಸೆ.17): ಈ ಬಾರಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ಸೇರಿದಂತೆ ಹಲವು ತಂಡಗಳು ತಾರಾ ಆಟಗಾರರ ಸೇವೆಯಿಂದ ವಂಚಿತರಾಗುವ ಸಾಧ್ಯತೆಯಿದೆ. ಕೆಲ ತಂಡಗಳ ಪ್ರಮುಖ ಆಟಗಾರರು ಗಾಯಗೊಂಡಿದ್ದು, ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಅನುಮಾನ ಮೂಡಿಸಿದೆ.

ದೀರ್ಘ ಸಮಯದ ಬಳಿಕ ಇತ್ತೀಚೆಗಷ್ಟೇ ಭಾರತ ತಂಡಕ್ಕೆ ಮರಳಿದ್ದ ಶ್ರೇಯಸ್‌ ಅಯ್ಯರ್‌ ಮತ್ತೆ ಬೆನ್ನುನೋವಿಗೆ ತುತ್ತಾಗಿದ್ದು, ವಿಶ್ವಕಪ್‌ಗೂ ಮುನ್ನ ಫಿಟ್‌ ಆಗುತ್ತಾರೊ ಇಲ್ಲವೊ ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ಮತ್ತೊಂದೆಡೆ ಅಕ್ಷರ್‌ ಪಟೇಲ್‌ ಕೂಡಾ ಗಾಯಗೊಂಡಿದ್ದು, ಗಾಯ ಪ್ರಮಾಣ ಇನ್ನಷ್ಟೇ ಗೊತ್ತಾಗಬೇಕಿದೆ.

Asia Cup 2023: ಏಷ್ಯಾ ಕಿರೀಟಕ್ಕೆ ಭಾರತ vs ಲಂಕಾ ಫೈಟ್..!

ಇನ್ನು, ನ್ಯೂಜಿಲೆಂಡ್‌ನ ಅನುಭವಿ ವೇಗಿ ಟಿಮ್ ಸೌಥಿಯ ಕೈ ಬೆರಳು ಮುರಿತಕ್ಕೊಳಗಾಗಿದ್ದು, ಡ್ಯಾರೆಲ್‌ ಮಿಚೆಲ್‌, ಫಿನ್‌ ಆ್ಯಲೆನ್‌ ಕೂಡಾ ಗಾಯದಿಂದ ಬಳಲುತ್ತಿದ್ದಾರೆ. ಉಳಿದಂತೆ ಆಸ್ಟ್ರೇಲಿಯಾದ ಬ್ಯಾಟರ್‌ ಟ್ರ್ಯಾವಿಸ್‌ ಹೆಡ್‌, ಆಲ್ರೌಂಡರ್‌ಗಳಾದ ಕ್ಯಾಮರೂನ್‌ ಗ್ರೀನ್‌ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌, ದಕ್ಷಿಣ ಆಫ್ರಿಕಾದ ವೇಗಿ ಏನ್ರಿಚ್‌ ನೋಕಿಯ, ಪಾಕಿಸ್ತಾನದ ವೇಗಿ ನಸೀಂ ಶಾ, ಶ್ರೀಲಂಕಾದ ಸ್ಪಿನ್ನರ್‌ ಮಹೀಶ್‌ ತೀಕ್ಷಣ, ವೇಗಿ ದುಷ್ಮಾಂತ ಚಮೀರ ಕೂಡಾ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಇವರೆಲ್ಲರೂ ಸದ್ಯ ತಂಡದಿಂದ ಹೊರಗುಳಿದಿದ್ದು, ವಿಶ್ವಕಪ್‌ಗೆ ಲಭ್ಯವಿರುವ ಬಗ್ಗೆ ಖಚಿತತೆಯಿಲ್ಲ.

ಧರ್ಮಶಾಲಾ ಕ್ರೀಡಾಂಗಣದಲ್ಲಿ ಫಂಗಸ್‌: ವಿಶ್ವಕಪ್‌ ಪಂದ್ಯ ಶಿಫ್ಟ್‌?

ಧರ್ಮಶಾಲಾ: ಐಸಿಸಿ ಏಕದಿನ ವಿಶ್ವಕಪ್‌ಗೆ ಇನ್ನು ಕೇವಲ 3 ವಾರಗಳಷ್ಟೇ ಬಾಕಿ ಇದ್ದರೂ ಧರ್ಮಶಾಲಾ ಕ್ರೀಡಾಂಗಣದ ಔಟ್‌ಫೀಲ್ಡ್‌ನಲ್ಲಿ ಫಂಗಸ್‌ ಕಾಣಿಸಿಕೊಂಡಿದ್ದು, ಐಸಿಸಿ ತಂಡದ ಅಸಾಮಾಧನಕ್ಕೆ ಕಾರಣವಾಗಿದೆ. ಪಂದ್ಯಗಳ ಆತಿಥ್ಯಕ್ಕೆ ಇನ್ನೂ ಕ್ರೀಡಾಂಗಣ ಸಂಪೂರ್ಣ ಸಿದ್ಧಗೊಳದ ಕಾರಣ, ಪಂದ್ಯಗಳು ಸ್ಥಳಾಂತರಗೊಳ್ಳುವ ಭೀತಿಯೂ ಇದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಕೆಲ ದಿನಗಳ ಹಿಂದಷ್ಟೇ ಐಸಿಸಿ ಅಧಿಕಾರಿಗಳು ಕ್ರೀಡಾಂಗಣಕ್ಕೆ ಆಗಮಿಸಿ ಪರಿಶೀಲಿಸಿದ್ದು, ಸಿದ್ಧತೆ ಬಗ್ಗೆ ಸಂಪೂರ್ಣ ತೃಪ್ತರಾಗಿಲ್ಲ. ಔಟ್‌ಫೀಲ್ಡ್‌ನಲ್ಲಿ ಫಂಗಸ್‌ ಬೆಳೆದಿರುವ ಕಾರಣ ಮೈದಾನ ನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಮುಂದಿನ ವಾರ ಬಿಸಿಸಿಐ ಅಧಿಕಾರಿಗಳು ಕ್ರೀಡಾಂಗಣಕ್ಕೆ ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಈ ನಡುವೆ ಟೂರ್ನಿಗೂ ಮುನ್ನ ಕ್ರೀಡಾಂಗಣ ಸಂಪೂರ್ಣ ಸಿದ್ಧಗೊಳಿಸುವ ಬಗ್ಗೆ ಎಚ್‌ಪಿಸಿಎ ಭರವಸೆ ನೀಡಿದೆ. ಧರ್ಮಶಾಲಾದಲ್ಲಿ ಅಕ್ಟೋಬರ್ 7ರಂದು ಬಾಂಗ್ಲಾದೇಶ-ಅಫ್ಘಾನಿಸ್ತಾನ ನಡುವೆ ಮೊದಲ ಪಂದ್ಯ ನಿಗದಿಯಾಗಿದೆ.

ಏಷ್ಯಾಕಪ್ ಫೈನಲ್‌ಗೇರದ ಪಾಕ್‌ ತಂಡದಲ್ಲಿ ಕಿತ್ತಾಟ..! ಡ್ರೆಸ್ಸಿಂಗ್ ರೂಂನಲ್ಲಿ ಬಾಬರ್-ಅಫ್ರಿದಿ ನಡುವೆ ಮಾತಿನ ಚಕಮಕಿ

ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ಆರಂಭವಾಗಲಿದ್ದು, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಇನ್ನು ಭಾರತ ಕ್ರಿಕೆಟ್ ತಂಡವು ಅಕ್ಟೋಬರ್ 08ರಂದು ಚೆನ್ನೈನ ಚೆಪಾಕ್ ಮೈದಾನದಲ್ಲಿ 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವು ನವೆಂಬರ್ 19ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವೇಳಾಪಟ್ಟಿ ಹೀಗಿದೆ ನೋಡಿ: