Asianet Suvarna News Asianet Suvarna News

ಉಗ್ರರ ಪೋಷಿಸಿದ ಪಾಕಿಸ್ತಾನದ ಪರಿಸ್ಥಿತಿ; ಕ್ರಿಕೆಟ್ ಮೈದಾನದಲ್ಲಿ ಮೆಣಸು, ಕುಂಬಳಕಾಯಿ ಬೆಳೆ!

  • ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನದ ನೈಜ ಪರಿಸ್ಥಿತಿ ಅನಾವರಣ
  • ಉಗ್ರ ದಾಳಿಯಿಂದ ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಬಂದ್
  • ಕ್ರಿಕೆಟ್ ಮೈದಾನದಲ್ಲಿ ಮೆಣಸು, ಕುಂಬಳಕಾಯಿ ಬೆಳೆ 
Terror impact Pakistan cricket stadium turned into farmland to cultivate chilies pumpkins ckm
Author
Bengaluru, First Published Aug 19, 2021, 8:07 PM IST

ಲಾಹೋರ್(ಆ.19):  ಭಯೋತ್ಪಾದನೆ ಎಂಬ ಶಬ್ದ ಕೇಳಿದೊಡನೆ ಭಾರತೀಯರ ಗಮನ ಪಾಕಿಸ್ತಾನದತ್ತ ತಿರುಗುವುದು ಸಹಜ. ಕಾರಣ ಅಷ್ಟರಮಟ್ಟಿಗೆ ಪಾಕಿಸ್ತಾನ ಉಗ್ರರನ್ನು ಪೋಷಿಸಿ ಭಾರತದತ್ತ ಛೂ ಬಿಟ್ಟಿದೆ. ಇದೇ ಭಯೋತ್ಪಾದನೆಯಿಂದ ಪಾಕಿಸ್ತಾನಕ್ಕೆ ಸಾಕಷ್ಟು ಹಿನ್ನಡೆಯಾಗಿದೆ. ಆದರೂ ತನ್ನ ಹುಟ್ಟುಗುಣ ಬಿಟ್ಟಿಲ್ಲ. ಉಗ್ರರ ಪೋಷಿಸುತ್ತಿರುವ ಪಾಕಿಸ್ತಾನದ ಅಸಲಿ ಕತೆ ಇದೀಗ ಮತ್ತೊಮ್ಮೆ ಜಗತ್ತಿನ ಎದುರು ಬೆತ್ತಲಾಗಿದೆ. ಭಯೋತ್ಪಾದನೆಯಿಂದ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಟಕ್ಕೆ ಫುಲ್ ಸ್ಟಾಪ್ ಬಿದ್ದಿದೆ. ಇದರಿಂದ ಕ್ರಿಕೆಟ್ ಮೈದಾನ ಇದೀಗ ತರಕಾರಿ ಬೆಳೆ ಬಳೆಯಲಾಗುತ್ತಿದೆ.

ಪುಲ್ವಾಮ ದಾಳಿ: ಭಾರತದ ಬಿರುಗಾಳಿಗೆ ಆರಿಹೋಯ್ತು ಪಾಕಿಸ್ತಾನ ಕ್ರಿಕೆಟ್ ದೀಪ!

ಇದು ಸತ್ಯ, ಪಾಕಿಸ್ತಾನ ಮಾಧ್ಯಮಗಳು ಈ ಅಸಲಿ ಕತೆಯನ್ನು ಬಹಿರಂಗಪಡಿಸಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಖನೇವಾಲ್‌ನಲ್ಲಿರುವ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇದೀಗ ತರಕಾರಿ ಬೆಳೆಯಲಾಗುತ್ತಿದೆ. ಖನೇವಾಲ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ ನಿರ್ವಹಣೆಗೆ ಹಣವಿಲ್ಲದೆ, ಸ್ಥಳೀಯ ಕೃಷಿಕರಿಗೆ ಲೀಸ್‌ಗೆ ನೀಡಿದೆ. 

ಕ್ರಿಕೆಟ್ ಮೈದಾನ, ಅಭ್ಯಾಸ ಮೈದಾನ ಸೇರಿದಂತೆ ಕ್ರೀಡಾಂಗಣದ ಸುತ್ತ ಮುತ್ತಲೂ ಮೆಣಸು, ಕುಂಬಳಕಾಯಿ ಸೇರಿದಂತೆ ಹಲವು ಬೆಳೆ ಬೆಳೆದಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿನ ಭ್ರಷ್ಟಾಚಾರವೂ ಮೈದಾನದ ಈ ಪರಿಸ್ಥಿತೆಗೆ ಕಾರಣ ಎಂದು ಪಾಕಿಸ್ತಾನ ಮಾಧ್ಯಮ ಹೇಳಿವೆ.

 

ಪಾಕಿಸ್ತಾನದಲ್ಲಿನ ಬಹುತೇಕ ಕ್ರಿಕೆಟ್ ಮೈದಾನದ ಪರಿಸ್ಥಿತಿ ಇದೆ ಆಗಿದೆ. ಲಾಹೋರ್, ಕರಾಚಿ, ಮುಲ್ತಾನ್ ಹಾಗೂ ಫೈಸ್ಲಾಬಾದ್‌ನಲ್ಲಿರುವ ಒಟ್ಟು ನಾಲ್ಕು ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಮಾತ್ರ ಕ್ರಿಕೆಟ್ ಪಂದ್ಯಗಳು ನಡೆಯುತ್ತಿದೆ. ಪಾಕಿಸ್ತಾನ ಸೂಪರ್ ಲೀಗ್ ಸೇರಿದಂತೆ ಇತ್ತೀಚೆಗೆ ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿದೆ. ಈ ಮೈದಾನ ಹೊರತು ಪಡಿಸಿದರೆ ಇನ್ನುಳಿದ ಬಹುತೇಕ ಮೈದಾನಗಳು ಪಾಳು ಬಿದ್ದಿದೆ.

ಭಯೋತ್ಪಾದನೆ ಇದಕ್ಕೆ ಮೂಲ ಕಾರಣ:
ಪಾಕಿಸ್ತಾನ ಮೈದಾನದಲ್ಲಿ ತರಕಾರಿ ಬೆಳೆಯುವ ಪರಿಸ್ಥಿತಿಗೆ ಮುಖ್ಯ ಕಾರಣ ಅಲ್ಲಿನ ಭಯೋತ್ಪಾದನೆ. ಉಗ್ರರನ್ನು ಪೋಷಿಸುವ ಪಾಕಿಸ್ತಾನಕ್ಕೆ ಸರಿಯಾದ ಹೊಡೆತ ಸಿಕ್ಕಿರುವುದು 2009ರಲ್ಲಿ. ಪಾಕಿಸ್ತಾನ ಪ್ರವಾಸದಲ್ಲಿದ್ದ ಶ್ರೀಲಂಕಾ ತಂಡದ ಮೇಲೆ ಉಗ್ರರು ದಾಳಿ ನಡೆಸಿತ್ತು. ಲಾಹೋರ್‌ನಲ್ಲಿನ ಗದ್ದಾಫಿ ಕ್ರೀಡಾಂಣಗದಲ್ಲಿ ಮಾರ್ಚ್ 3 ರಂದು ಶ್ರೀಲಂಕಾ-ಪಾಕಿಸ್ತಾನ ಪಂದ್ಯ ಆಯೋಜಿಸಲಾಗಿತ್ತು. ಈ ಪಂದ್ಯಕ್ಕಾಗಿ ಗದ್ದಾಫಿ ಕ್ರೀಡಾಂಗಣಕ್ಕೆ ಆಗಮಿಸಿದ ಶ್ರೀಲಂಕಾ ತಂಡದ ಮೇಲೆ ಉಗ್ರರು ದಾಳಿ ನಡೆಸಿದ್ದರು.

2ನೇ ಟೆಸ್ಟ್ ಪಂದ್ಯ 3ನೇ ದಿನದಾಟಕ್ಕಾಗಿ ಕ್ರೀಡಾಂಗಣಕ್ಕೆ ಆಗಮಿಸುತ್ತಿದ್ದ ಲಂಕಾ ಕ್ರಿಕೆಟಿಗರ ಮೇಲೆ 12 ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 6 ಶ್ರೀಲಂಕಾ ಕ್ರಿಕೆಟಿಗರು ಗಾಯಗೊಂಡಿದ್ದಾರೆ. 6 ಪಾಕಿಸ್ತಾನಿ ಪೊಲೀಸರು ಹಾಗೂ ಇಬ್ಬರು ನಾಗರೀಕರು ಸಾವನ್ನಪ್ಪಿದ್ದಾರೆ. ಈ ಘಟನೆ ಬಳಿಕ ಪಾಕಿಸ್ತಾನದಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಬಂದ್ ಆಯಿತು. ಇದರೊಂದಿಗೆ ದೇಸಿ ಕ್ರಿಕೆಟ್‌ಗೂ ಹೊಡೆತ ಬಿದ್ದಿತ್ತು.

ಪುಲ್ವಾಮಾ ದಾಳಿ: ಪಾಕಿಸ್ತಾನ ಕ್ರಿಕೆಟ್‌ಗೆ ಕೋಟಿ ಕೋಟಿ ನಷ್ಟ!

ಇದಾದ ಬಳಿಕ 2015ರಲ್ಲಿ ಜಿಂಬಾಬ್ವೆ ತಂಡ ಪಾಕಿಸ್ತಾನ ಪ್ರವಾಸ ಮಾಡಿತ್ತು. ಬಳಿಕ 10 ವರ್ಷದ ಬಳಿಕ 2019ರಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನ ಪ್ರವಾಸ ಮಾಡಿದೆ. ಈ ಟೂರ್ನಿಗಳನ್ನು ಹೊರತು ಪಡಿಸಿದರೆ ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗಳು ನಡೆದಿಲ್ಲ. ಇದರಿಂದ ಪಾಕಿಸ್ತಾನ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಈ ಬೆಳವಣಿಗೆಗಳಿಂದ ಅಂತಾರಾಷ್ಟ್ರೀಯ ಮೈದಾನವಾಗಬೇಕಿದ್ದ ಖನೇವಾಲ್‌ನಲ್ಲಿನ ಕ್ರಿಕೆಟ್ ಮೈದಾನ ಇದೀಗ ತರಕಾರಿ ಬೆಳೆಯುವ ಗದ್ದೆಯಾಗಿದೆ. 

Follow Us:
Download App:
  • android
  • ios