ಸಿಡ್ನಿ(ಡಿ.06): ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು 1-2 ಅಂತರದಲ್ಲಿ ಸೋತ ಟೀಂ ಇಂಡಿಯಾ , ಟಿ20 ಸರಣಿಯಲ್ಲಿ ಶುಭಾರಂಭ ಮಾಡಿದೆ. ಮೊದಲ ಚುಟುಕು ಪಂದ್ಯದಲ್ಲಿ 11 ರನ್‌ಗಳ ಗೆಲುವು ದಾಖಲಿಸಿದ ಟೀಂ ಇಂಡಿಯಾ, ಇದೀಗ 2ನೇ ಪಂದ್ಯ ಗೆದ್ದು ಸರಣಿ ಕೈವಶ ಮಾಡೋ ಉತ್ಸಾಹದಲ್ಲಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.ಎರಡೂ ತಂಡದಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ.

ಮೊದಲ ಟಿ20 ಪಂದ್ಯದಲ್ಲಿ ಅಲ್ರೌಂಡರ್ ರವೀಂದ್ರ ಜಡೇಜಾ ಇಂಜುರಿಗೆ ತುತ್ತಾಗಿದ್ದರು. ಇಷ್ಟೇ ಅಲ್ಲ ಟೂರ್ನಿಯಿಂದಲೇ ಹೊರಬಿದ್ದಿದ್ದರು. ಹೀಗಾಗಿ ಜಡೇಜಾ ಬದಲು ಯಜುವೇಂದ್ರ ಚಹಾಲ್  ಕಣಕ್ಕಿಳಿದಿದ್ದಾರೆ. ಇನ್ನು ಮೊಹಮ್ಮದ್ ಶಮಿ ಬದಲು ಶಾರ್ದೂಲ್ ಠಾಕೂರ್ ಕಣಕ್ಕಿಳಿದ್ದಾರೆ.ಇನ್ನು ಹಾರ್ದಿಕ್ ಪಾಂಡ್ಯಗೂ ರೆಸ್ಟ್ ನೀಡಿರುವ ಟೀಂ ಇಂಡಿಯಾ ಶ್ರೇಯಸ್ ಅಯ್ಯರ್‌ಗೆ ಸ್ಥಾನ ನೀಡಿದೆ.

ಅತ್ತ ನಾಯಕ ಆ್ಯರೋನ್ ಫಿಂಚ್ ಇಂಜುರಿಗೆ ತುತ್ತಾಗಿದ್ದಾರೆ. ಹೀಗಾಗಿ ಮ್ಯಾಥ್ಯೂ ವೇಡ್ ಆಸೀಸ್ ತಂಡ ಮುನ್ನಡೆಸುತ್ತಿದ್ದಾರೆ. ಆ್ಯರೋನ್ ಫಿಂಚ್, ಮಿಚೆಲ್ ಸ್ಟಾರ್ಕ್ ಹಾಗೂ ಜೋಶ್ ಹೇಜಲ್‌ವುಡ್ ತಂಡದಿಂದ ಹೊರಬಿದ್ದಿದ್ದಾರೆ. ಇವರ ಬದಲು ಡೇನಿಯಲ್ ಸ್ಯಾಮ್, ಮಾರ್ಕಸ್ ಸ್ಟೊಯ್ನಿಸ್ ಹಾಗೂ ಆ್ಯಂಡ್ರೂ ಟೈ ತಂಡ ಸೇರಿಕೊಂಡಿದ್ದಾರೆ.