2022ರಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ರಿಷಭ್‌ ಪಂತ್ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಹಿಂದಿಕ್ಕಿರುವ ವಿಕೆಟ್ ಕೀಪರ್ ಬ್ಯಾಟರ್ಹೆಚ್ಚು ಟೀಕೆ ಮತ್ತು ಹೆಚ್ಚು ಪ್ರಶಂಸೆಗೆ ಒಳಗಾದ ಆಟಗಾರ

ಬೆಂಗಳೂರು(ಜು.20): ರಿಷಭ್​​ ಪಂತ್​ರನ್ನ ಟೆಸ್ಟ್​​​​​ನಲ್ಲಷ್ಟೇ ಆಡಿಸಬೇಕು. ಏಕದಿನ ಮತ್ತು ಟಿ20 ಫಾಮ್ಯಾಟ್​​ನಲ್ಲಿ ಅವರು ತಂಡಕ್ಕೆ ಭಾರ. ಆಟದಲ್ಲಿ ಸಿರೀಸ್​ನೆಸ್​​​ ಇಲ್ಲದವನನ್ನು ಟೀಂ​ ಇಂಡಿಯಾದಿಂದ ಶೀಘ್ರವೇ ಕೈಬಿಡಬೇಕು ಅಂತೆಲ್ಲಾ ವಿರೋಧಿಗಳು ರಿಷಭ್ ಪಂತ್​ ಮೇಲೆ ಮುಗಿಬಿದ್ದಿದ್ರು. ಆದ್ರೆ ಇಂಗ್ಲೆಂಡ್​ ವಿರುದ್ಧ ಫೈನಲ್​​ ಒನ್ಡೇಯಲ್ಲಿ ರಿಷಭ್​ ಸೆಂಚುರಿ ಸಿಡಿಸಿ ಏಕದಿನ ಸರಣಿ ಗೆಲ್ಲಿಸಿಕೊಟ್ರು. ಆ ಬಳಿಕ ಇವರ ಬಗೆಗಿದ್ದ ಒಪಿನಿಯನ್​ ಫುಲ್​ ಬದಲಾಗಿದೆ. ರಿಷಭ್ ಪಂತ್​ರನ್ನ ಮ್ಯಾಚ್ ವಿನ್ನರ್​​​, ಡೇರಿಂಗ್​​​​ ಬ್ಯಾಟರ್​​ ತಂಡಕ್ಕೆ ಅಗತ್ಯ ಎಂತೆಲ್ಲಾ ಗುಣಗಾನ ಮಾಡಲಾಗ್ತಿದೆ.

ನಿಜಕ್ಕೂ ಲೆಫ್ಟಿಮ್ಯಾನ್​​ ಹೆಚ್ಚು ಟೀಕೆ ಮತ್ತು ಹೆಚ್ಚು ಪ್ರಶಂಸೆಗೆ ಒಳಗಾದ ಆಟಗಾರ ಅಂದ್ರೂ ತಪ್ಪಲ್ಲ. ಯಾಕಂದ್ರೆ ಪಂತ್‌ ಟೀಕೆಗಳಷ್ಟೇ ಶಹಬ್ಬಾಸ್​​​ ಕೂಡ ಗಿಟ್ಟಿಸಿಕೊಂಡಿದ್ದಾರೆ. ಒಂದೇ ಮಾತಲ್ಲಿ ಹೇಳಬೇಕಂದ್ರೆ 2022ರಲ್ಲಿ ಪಂತ್​ ಮೇನಿಯಾ. ಈ ವರ್ಷ ಹಿಟ್​​ಮ್ಯಾನ್​​​ ರೋಹಿತ್ ಶರ್ಮಾ​ ಹಾಗೂ ಕಿಂಗ್​ ಕೊಹ್ಲಿಯಂತ ದಿಗ್ಗಜರೇ ರಿಷಭ್‌ ಪಂತ್​​​ ಘರ್ಜನೆ ಮುಂದೆ ಸೈಲೆಂಟಾಗಿದ್ದಾರೆ.

ಈ ವರ್ಷ ಹೆಚ್ಚು ರನ್​​, ಹೆಚ್ಚು ಬಾಲ್​ ಎದುರಿಸಿದ್ದು ಪಂತ್: 

ಹೌದು, ಅಚ್ಚರಿ ಅನ್ನಿಸಿದ್ರೂ ಸತ್ಯ. ಈ ವರ್ಷ ಟೀಂ ಇಂಡಿಯಾ ಪರ ಮೂರು ಫಾಮ್ಯಾಟ್​ನಲ್ಲಿ ಅಧಿಕ ರನ್​ ಬಾರಿಸಿದ್ದು ರಿಷಭ್ ಪಂತ್​​. ಈ ವರ್ಷ ಪಂತ್ ಒಟ್ಟು 988 ರನ್​​ ಬಾರಿಸಿದ್ದಾರೆ. ಈ ರೇಸ್​​ನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್​ ಶರ್ಮಾರನ್ನೇ ಹಿಂದಿಕ್ಕಿದ್ದಾರೆ. ಅಷ್ಟೇ ಅಲ್ಲದೇ ಈ ವರ್ಷ ಹೆಚ್ಚು ಬಾಲ್ ಫೇಸ್​ ಮಾಡಿದ ಖ್ಯಾತಿ ಕೂಡ ಇವರ ಹೆಸರಿಗಿದೆ.

ಗುರು ಕಾಣಿಕೆ..! ಮಾಜಿ ಕೋಚ್ ರವಿಶಾಸ್ತ್ರಿಗೆ ಶಾಂಫೇನ್ ಗಿಫ್ಟ್ ಕೊಟ್ಟ ರಿಷಭ್ ಪಂತ್..! ವಿಡಿಯೋ ವೈರಲ್

ಅಧಿಕ ಶತಕ, ಬೌಂಡ್ರಿ-ಸಿಕ್ಸ್​ ಸಿಡಿಸಿದ್ದು ಲೆಫ್ಟಿಮ್ಯಾನ್​: 

ಇನ್ನು ಬರೀ ಅತಿ ಹೆಚ್ಚು ರನ್​ ಅಷ್ಟೇ ಅಲ್ಲ, ಈ ವರ್ಷ ಅಧಿಕ ಶತಕ ಬಾರಿಸಿದ ಖ್ಯಾತಿ ಕೂಡ ಪಂತ್​ರದ್ದು. ಇವರು ಒಟ್ಟು 2 ಸೆಂಚುರಿ ಬಾರಿಸಿದ್ದಾರೆ. ಎರಡೂ ಕೂಡ ಇತ್ತೀಚೆಗೆ ಮುಗಿದ ಇಂಗ್ಲೆಂಡ್​​ ಪ್ರವಾಸದಲ್ಲೇ ಮೂಡಿ ಬಂದಿವೆ. ಇನ್ನು 2022ರಲ್ಲಿ ಪಂತ್​ ದಾಖಲೆಯ 64 ಬೌಂಡ್ರಿ ಹಾಗೂ 12 ಸಿಕ್ಸ್​​ ಬಾರಿಸಿದ್ದಾರೆ. 

ಅತಿ ಹೆಚ್ಚು ಡಕ್​​​ ಮತ್ತು ಡಿಸ್ಮಿಸಲ್ಸ್​​​​​: 

ಈ ವರ್ಷ ಆರಂಭಗೊಂಡು 7 ತಿಂಗಳಲ್ಲಿ ರಿಷಭ್​ ಪಂತ್ ಒಟ್ಟು ಮೂರು ಬಾರಿ ಶೂನ್ಯ ಸುತ್ತಿದ್ದಾರೆ. ಇವರನ್ನ ಬಿಟ್ರೆ ಯಾರೊಬ್ಬರು ಕೂಡ ಇಷ್ಟೊಂದು ಸಲ ಡಕೌಟ್ ಆಗಿಲ್ಲ. ಇನ್ನು 25 ಬಾರಿ ಡಿಸ್ಮಿಸಲ್ಸ್​ ಆದ ಅಪಖ್ಯಾತಿಗೂ ಇವರ ಭಾಜನರಾಗಿದ್ದಾರೆ. ಇದಿಷ್ಟೇ ಅಲ್ಲದೇ ಅತಿ ಹೆಚ್ಚು ಕ್ಯಾಚ್​ ಮತ್ತು ಸ್ಟಂಪಿಂಗ್ಸ್​ ದಾಖಲೆ ಕೂಡ ಇವರ ಪಂತ್ ಹೆಸರಿನಲ್ಲಿದೆ. ಸೋ ಫೈನಲಿ ನಿಮಗೀಗ ಅರ್ಥ ಆಗಿರ್ಬೇಕು ಅಲ್ವಾ? ಆರಂಭದಲ್ಲೇ ನಾವು ಏಕೆ ಪಂತ್​​ ಹೆಚ್ಚು ಟೀಕೆ ಮತ್ತು ಹೆಚ್ಚು ಪ್ರಶಂಸೆಗೆ ಒಳಗಾದ ಆಟಗಾರ ಎಂದು ಹೇಳಿದ್ವಿ ಅಂತ.