ನವದೆಹಲಿ(ಜ.29): ಭಾರತ ಕ್ರಿಕೆಟ್ ತಂಡದ ಯುವ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್ ಪಂತ್ ಹೊಸ ಮನೆ ಖರೀದಿಸಲು ಹುಡುಕಾಟ ಆರಂಭಿಸಿದ್ದಾರೆ. ಈ ಕುರಿತಂತೆ ಒಂತ್ ಮಾಡಿದ ಒಂದು ಟ್ವೀಟ್‌ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಆಸ್ಟ್ರೇಲಿಯಾದಿಂದ ವಾಪಾಸಾದ ಬಳಿಕ ಮನೆಯವರು ಹೊಸ ಮನೆ ಖರೀದಿಸೋಣ ಎಂದು ಬೆನ್ನುಬಿದ್ದಿದ್ದಾರೆ. ಹೇಳಿ, ಗುರುಗ್ರಾಮದಲ್ಲಿ ಖರೀದಿಸಿದರೆ ಒಳ್ಳೇದಾ? ಅಥವಾ ಬೇರೆ ಯಾವುದಾದರೂ ಆಯ್ಕೆಯಿದ್ದರೆ ತಿಳಿಸಿ ಎಂದು ಟ್ವೀಟ್ ಮಾಡಿದ್ದಾರೆ. 

ಇಂಗ್ಲೆಂಡ್‌ ಸರಣಿಗೂ ಮುನ್ನ ಧೋನಿ ಮನೆಗೆ ಪಂತ್ ಭೇಟಿ‌!

ರಿಷಭ್‌ ಪಂತ್‌ ಮಾಡಿದ ಈ ಟ್ವೀಟ್‌ಗೆ 10 ಸಾವಿರಕ್ಕೂ ಅಧಿಕ ಪ್ರತಿಕ್ರಿಯೆಗಳು ಬಂದಿವೆ. ಈ ಪೈಕಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಇರ್ಫಾನ್‌ ಪಠಾಣ್, ಕ್ರಿಕೆಟ್‌ ಮೈದಾನವನ್ನೇ ಖರೀದಿ ಮಾಡು ಎಂದು ಸಲಹೆ ನೀಡಿದ್ದಾರೆ. ಇನ್ನು ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಪಂತ್ ಟ್ವೀಟ್‌ಗೆ ಲೈಕ್ ಒತ್ತಿದ್ದಾರೆ.