ಲಂಡನ್(ಜ.29)‌: ಈ ವರ್ಷ ಜುಲೈನಲ್ಲಿ ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳಲಿರುವ ಭಾರತ ತಂಡ, ಅಲ್ಲಿನ ಸ್ಥಳೀಯ ಕೌಂಟಿ ತಂಡದ ಬದಲಾಗಿ ಭಾರತ ‘ಎ’ ತಂಡದ ವಿರುದ್ಧವೇ 4 ದಿನಗಳ 2 ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಈ ಬೆಳವಣಿಗೆ ಭಾರತೀಯ ಕ್ರಿಕೆಟ್‌ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ 5 ಟೆಸ್ಟ್‌ ಪಂದ್ಯಗಳನ್ನು ಆಡಲಿದ್ದು, ಮಹತ್ವದ ಸರಣಿಯ ಮೊದಲ ಪಂದ್ಯ ಆ.4ರಿಂದ ಆರಂಭಗೊಳ್ಳಲಿದೆ. ಮೊದಲ ಅಭ್ಯಾಸ ಪಂದ್ಯ ಜು.21ರಿಂದ ನಾರ್ಥಾಂಪ್ಟನ್‌ಶೈರ್‌ನ ಕೌಂಟಿ ಮೈದಾನದಲ್ಲಿ ನಡೆಯಲಿದ್ದು, 2ನೇ ಪಂದ್ಯ ಜು.28ರಿಂದ ಲೀಚೆಸ್ಟರ್‌ಶೈರ್‌ನಲ್ಲಿ ನಡೆಯಲಿದೆ.

ಟೆಸ್ಟ್ ಸರಣಿಯಾಡಲು ಚೆನ್ನೈ ತಲುಪಿದ ಭಾರತ, ಇಂಗ್ಲೆಂಡ್‌ ತಂಡಗಳು

ಕಾರಣ ಏನು?: 2019ರ ಆ್ಯಷಸ್‌ ಸರಣಿಗೂ ಮೊದಲು ಆಸ್ಪ್ರೇಲಿಯಾ ತಂಡ ಸಹ ತನ್ನದೇ ಆಟಗಾರರ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಿತ್ತು. ಅದೇ ತಂತ್ರವನ್ನು ಭಾರತ ಸಹ ಬಳಸಲಿದೆ. ಕೌಂಟಿ ತಂಡಗಳು ತನ್ನ ಆಟಗಾರರು ದೇಸಿ ಟೂರ್ನಿಗಳಿಗೆ ಫಿಟ್ನೆಸ್‌ ಕಾಯ್ದುಕೊಳ್ಳಬೇಕು ಎನ್ನುವ ಉದ್ದೇಶದಿಂದ ದುರ್ಬಲ ತಂಡವನ್ನು ಅಭ್ಯಾಸ ಪಂದ್ಯಗಳಲ್ಲಿ ಆಡಿಸಲಿವೆ. ಹೀಗಾಗಿ ಈ ಹಿಂದೆ ಆಸೀಸ್‌, ಈಗ ಭಾರತ ಕೌಂಟಿ ತಂಡದ ವಿರುದ್ಧ ಅಭ್ಯಾಸ ಪಂದ್ಯಕ್ಕೆ ನಿರಾಕರಿಸಿದೆ.