ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಂಗ್ಲರ ನಾಡಿನಲ್ಲಿ ಬೀಡುಬಟ್ಟಿದೆ ಟೀಂ ಇಂಡಿಯಾ ಸರಣಿ ಆಯೋಜನೆಗೆ ಬಹುದೊಡ್ಡ ಅಡ್ಡಿ, ಪಂತ್ ಬೆನ್ನಲ್ಲೇ ಭಾರತ ತಂಡದ ಸ್ಟಾಫ್‌ಗೆ ಕೊರೋನಾ ಆಗಸ್ಟ್ 4 ರಿಂದ ಟೆಸ್ಟ್ ಸರಣಿ ಆರಂಭ, ಇದರ ನಡುವೆ ಒಬ್ಬೊಬ್ಬರಿಗೆ ಕೊರೋನಾ ಸೋಂಕು

ಲಂಡನ್(ಜು.15): ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಆಯೋಜನೆಗೆ ಹಲವು ಅಡೆ ತಡೆ ಎದುರಾಗುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ ಫೈನಲ್ ಬಳಿಕ ಇಂಗ್ಲೆಂಡ್‌ನಲ್ಲೇ ಉಳಿದುಕೊಂಡಿರುವ ಟೀಂ ಇಂಡಿಯಾ ಕ್ರಿಕೆಟಿಗರು ಮಹತ್ವದ ಸರಣಿಗೆ ತಯಾರಿ ಆರಂಭಿಸಿದ್ದರು. ಆದರೆ ಅಭ್ಯಾಸ ಪಂದ್ಯ ಆರಂಭಕ್ಕೆ 5 ದಿನ ಬಾಕಿ ಇರುವಾಗಲೇ ಟೀಂ ಇಂಡಿಯಾ ಪಾಳದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದೆ.

ಇಂಗ್ಲೆಂಡ್ ಪ್ರವಾಸದಲ್ಲಿದ್ದ ಟೀಂ ಇಂಡಿಯಾದ ಈ ಆಟಗಾರನಿಗೆ ಕೋವಿಡ್ ಪಾಸಿಟಿವ್..!

ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್‌ಗೆ ಕೊರೋನಾ ಪಾಸಿಟೀವ್ ದೃಢಪಟ್ಟಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಸಹಾಯಕ ಸಿಬ್ಬಂದಿ, ಥ್ರೋಡೌನ್ ಸ್ಪೆಷಲಿಸ್ಟ್ ದಯಾನಂದ್ ಗರಣಿಗೆ ಕೊರೋನಾ ದೃಢಪಟ್ಟಿದೆ. ಇವರ ಸಂಪರ್ಕಕ್ಕೆ ಬಂದ ಮತ್ತಿಬ್ಬರು ಐಸೋಲೇಶನ್‌ಗೆ ಒಳಗಾಗಿದ್ದಾರೆ.

ರಿಷಬ್ ಪಂತ್, ದಯಾನಂದ್ ಹಾಗೂ ಮತ್ತಿಬ್ಬರು ಟೀಂ ಇಂಡಿಯಾ ಜೊತೆ ಅಭ್ಯಾಸ ಪಂದ್ಯಕ್ಕೆ ದುರಾಮ್‌ಗೆ ತೆರಳುತ್ತಿಲ್ಲ. ಕೊರೋನಾ ನೆಗಟೀವ್ ರಿಪೋರ್ಟ್ ಇದ್ದ ಸದಸ್ಯರು ಮಾತ್ರ ಜುಲೈ 20 ರಿಂದ ಆರಂಭಗೊಳ್ಳಲಿರುವ ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇಂಡೋ-ಇಂಗ್ಲೆಂಡ್ ಸರಣಿಯಿಂದಲೇ 2ನೇ ಟೆಸ್ಟ್‌ ಚಾಂಪಿಯನ್‌ಶಿಪ್‌ ಆರಂಭ

ಆಗಸ್ಟ್ 4 ರಿಂದ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಸೆಪ್ಟೆಂಬರ್ 10 ರಿಂದ 14ರ ವರೆಗಿನ ಅಂತಿಮ ಟೆಸ್ಟ್ ಪಂದ್ಯದೊಂದಿಗೆ ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸ ಅಂತ್ಯಗೊಳ್ಳಲಿದೆ.