ಚೆನ್ನೈ(ಡಿ.15): ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶುಭಾರಂಭ ಮಾಡೋ ವಿಶ್ವಾಸದಲ್ಲಿದ್ದ ಟೀಂ ಇಂಡಿಯಾಗೆ ಸಂಕಷ್ಟ ಎದುರಾಗಿದೆ. ವಿಂಡೀಸ್ ಬ್ಯಾಟ್ಸ್‌ಮನ್ ಶಿಮ್ರೊನ್ ಹೆಟ್ಮೆಯರ್ ಭರ್ಜರಿ  ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ವಿಂಡೀಸ್ ಗೆಲುವಿನತ್ತ ದಾಪುಗಾಲಿಟ್ಟಿದ್ದರೆ, ಭಾರತ ಸೋಲಿನ ಸುಳಿಗೆ ಸುಲುಕಿದೆ.

ಇದನ್ನೂ ಓದಿ: ಭಾರತ vs ವೆಸ್ಟ್ ಇಂಡೀಸ್: ವಿಶೇಷ ಅತಿಥಿ ಆಗಮನ, ಪಂದ್ಯ ಕೆಲಕಾಲ ಸ್ಥಗಿತ!

ಭಾರತ ನೀಡಿದ 289 ರನ್ ಟಾರ್ಗೆಟ್ ವೆಸ್ಟ್ ಇಂಡೀಸ್ ತಂಡಕ್ಕೆ ಯಾವ ಹಂತದಲ್ಲೂ ಒತ್ತಡ ನೀಡಲಿಲ್ಲ. ಸುನಿಲ್ ಆ್ಯಂಬ್ರಿಸ್ ಆರಂಭದಲ್ಲೇ ವಿಕೆಟ್ ಕೈಚೆಲ್ಲಿದರೂ ವಿಂಡೀಸ್ ಆತಂಕ ಪಡಲಿಲ್ಲ. ಕಾರಣ ಶಿಮ್ರೋನ್ ಹೆಟ್ಮೆಯರ್ ಹಾಗೂ ಶೈ ಹೋಪ್ ಜೊತೆಯಾಟ ಭಾರತದ ಲೆಕ್ಕಾಚಾರ ಉಲ್ಟಾ ಮಾಡಿತು. 

ಇದನ್ನೂ ಓದಿ: ಮೊದಲ ಏಕದಿನ: ವೆಸ್ಟ್ ಇಂಡೀಸ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಭಾರತ!.

ಸ್ಫೋಚಕ ಬ್ಯಾಟಿಂಗ್ ಪ್ರದರ್ಶನದ ಮೂಲಕ  ಹೆಟ್ಮೆಯರ್ ಕೇವಲ 85 ಎಸೆತದಲ್ಲಿ ಸೆಂಚುರಿ ಪೂರೈಸಿದರು.  ಈ ಮೂಲಕ ವೆಸ್ಟ್ ಇಂಡೀಸ್ ಪರ ಅತೀ ಕಡಿಮೆ ಇನಿಂಗ್ಸ್‌ನಲ್ಲಿ 5 ಶತಕ ಪೂರೈಸಿದ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು. ಹೆಟ್ಮೆಯರ್ 38 ಇನಿಂಗ್ಸ್‌ಗಳಲ್ಲಿ 5 ಏಕದಿನ ಶತಕ ಪೂರೈಸಿದರು. ಶೈ ಹೋಪ್ 46 ಇನಿಂಗ್ಸ್‌ಗಳಲ್ಲಿ 5 ಸೆಂಚುರಿ ಸಿಡಿಸಿ 2ನೇ ಸ್ಥಾನದಲ್ಲಿದ್ದಾರೆ.

ಹೆಟ್ಮೆಯರ್ ಶತಕದಿಂದ ಭಾರತ ಸೋಲಿನತ್ತ ವಾಲಿದೆ. ಶೈ ಹೋಪ್ ಅರ್ಧಶತಕ ಸಿಡಿಸಿ ಆಸರೆಯಾಗಿದ್ದಾರೆ. ಹೀಗಾಗಿ ಭಾರತದ ಗೆಲವಿಗೆ ಮ್ಯಾಜಿಕ್ ನಡೆಯಬೇಕಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 8 ವಿಕೆಟ್ ನಷ್ಟಕ್ಕೆ 288 ರನ್ ಸಿಡಿಸಿತು. ಶ್ರೇಯಸ್ ಅಯ್ಯರ್ 70 ಹಾಗೂ ರಿಷಬ್ ಪಂತ್ 71 ರನ್ ಕಾಣಿಕೆ ನೀಡಿದರು.