ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯ ಕೆಲ ಕಾಲ ಸ್ಥಗಿತಗೊಂಡಿತ್ತು. ಕಾರಣ ವಿಶೇಷ ಅತಿಥಿಯೊಬ್ಬರು ಮೈದಾನಕ್ಕೆ ದಿಢೀರ್ ಎಂಟ್ರಿ ಕೊಟ್ಟಿದ್ದರು. ಹೀಗಾಗಿ ಅನಿವಾರ್ಯವಾಗಿ ಪಂದ್ಯವನ್ನು ಕೆಲ ಕಾಲ ಸ್ಥಗಿತಗೊಳಿಸಲಾಯಿತು. ವಿಶೇಷ ಅತಿಥಿಯ ವಿವರ ಇಲ್ಲಿದೆ.   

ಚೆನ್ನೈ(ಡಿ.15): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಸರಣಿಯಲ್ಲಿ ವಿಶೇಷ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆರಿಬೀಯನ್ ಆಟಗಾರರ ಸಂಭ್ರಮಾಚರಣೆ, ಟೀಂ ಇಂಡಿಯಾ ಕ್ರಿಕೆಟಿಗರ ತಿರುಗೇಟು ಸೇರಿದಂತೆ ಹಲವು ಘಟನೆಗಳು ಅಭಿಮಾನಿಗಳಿಗೆ ಮನರಂಜನೆ ನೀಡಿದೆ. ಚೆನ್ನೈನ ಮೊದಲ ಏಕದಿನ ಪಂದ್ಯದಲ್ಲಿ ಇದೇ ರೀತಿಯ ಸ್ವಾರಸ್ಯಕರ ಘಟನೆ ನಡೆದಿದೆ. ಆದರೆ ಈ ಘಟನೆಯಿಂದ ಪಂದ್ಯ ಕೆಲ ಕಾಲ ಸ್ಥಗಿತಗೊಂಡಿತ್ತು.

ಇದನ್ನೂ ಓದಿ: ಮೊದಲ ಏಕದಿನ: ವೆಸ್ಟ್ ಇಂಡೀಸ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಭಾರತ!

ಟೀಂ ಇಂಡಿಯಾ ಬ್ಯಾಟಿಂಗ್ ವೇಳೆ ಮೈದಾನಕ್ಕೆ ನಾಯಿಯೊಂದು ದಿಡೀರ್ ಎಂಟ್ರಿ ಕೊಟ್ಟಿತ್ತು. ವಿಂಡೀಸ್ ಆಟಗಾರರು ನಾಯಿಯನ್ನು ಓಡಿಸುವ ಪ್ರಯತ್ನ ಮಾಡಿದರು ನಾಯಿ, ಇಡೀ ಮೈದಾನ ಸುತ್ತಿ ಓಡಿತು. ನಾಯಿಯ ಆಗಮನದಿಂದ ಪಂದ್ಯ ಕೆಲ ಕ್ಷಣ ಸ್ಥಗಿತಗೊಂಡಿತು. ಮೈದಾನಕ್ಕೆ ಒಂದು ಸುತ್ತು ಹೊಡೆದ ನಾಯಿ ಕೊನೆಗೂ ಮೈದಾನ ಬಿಟ್ಟು ತೆರಳಿತು. 

Scroll to load tweet…

ಇದನ್ನೂ ಓದಿ: INDvWI ಏಕದಿನ: ಟಾಸ್ ಗೆದ್ದ ವೆಸ್ಟ್ ಇಂಡೀಸ್ ಫೀಲ್ಡಿಂಗ್ !

ನಾಯಿ ಆಗಮನ ವಿಡಿಯೋ ಇದೀಗ ವೈರಲ್ ಆಗಿದೆ. ವಿಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ರಿಷಬ್ ಪಂತ್ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ 288 ರನ್ ಸಿಡಿಸಿತು. ಅಯ್ಯರ್ 70 ಹಾಗೂ ಪಂತ್ 71 ರನ್ ಕಾಣಿಕೆ ನೀಡಿದರು.

Scroll to load tweet…
Scroll to load tweet…