ನವ​ದೆ​ಹ​ಲಿ(ಮೇ.09)​: ಖಾಲಿ ಕ್ರೀಡಾಂಗಣಗಳಲ್ಲಿ ಕ್ರಿಕೆಟ್‌ ನಡೆ​ಸುವ ಚಿಂತನೆಯನ್ನು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಬೆಂಬಲಿಸಿ​ದ್ದಾರೆ. ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಕ್ರಿಕೆಟ್‌ ಚಟು​ವ​ಟಿಕೆ ಸ್ಥಗಿತಗೊಂಡಿದ್ದು, ಪರಿ​ಸ್ಥಿತಿ ಸುಧಾ​ರಿ​ಸಿದ ಬಳಿಕ ಪಂದ್ಯ​ಗ​ಳನ್ನು ನಡೆ​ಸುವ ಬಗ್ಗೆ ಚರ್ಚೆ ನಡೆ​ಯು​ತ್ತಿದೆ. 

‘ ಅಭಿ​ಮಾ​ನಿ​ಗ​ಳಿ​ಲ್ಲದೆ ಅಡು​ವುದು ಕಷ್ಟ. ಕ್ರಿಕೆಟ್‌ ತನ್ನ ಜಾದೂ ಕಳೆ​ದು​ಕೊ​ಳ್ಳ​ಲಿದೆ. ಆದರೆ ಸದ್ಯದ ಪರಿ​ಸ್ಥಿತಿಯಲ್ಲಿ ಅದೇ ಸೂಕ್ತ’ ಎಂದು ಕೊಹ್ಲಿ ಹೇಳಿ​ದ್ದಾರೆ.  ಟಿ20 ವಿಶ್ವ​ಕಪ್‌ ಆಯೋ​ಜನೆಗೆ ಹಸಿರು ನಿಶಾನೆ ದೊರೆ​ಯ​ಬೇ​ಕಿ​ರುವ ಹಿನ್ನೆಲೆಯಲ್ಲಿ ಮುಂದಿನ ಕೆಲ ತಿಂಗ​ಳಲ್ಲಿ ಕ್ರಿಕೆಟ್‌ ಪಂದ್ಯ​ಗ​ಳನ್ನು ಆರಂಭಿ​ಸ​ಬೇ​ಕಾದ ಅನಿ​ವಾ​ರ್ಯ​ತೆ ಎಲ್ಲಾ ತಂಡ​ಗ​ಳಿಗೂ ಇದೆ. ಹೀಗಾಗಿ, ಖಾಲಿ ಕ್ರೀಡಾಂಗಣಗ​ಳಲ್ಲಿ ಪಂದ್ಯ ನಡೆ​ಸ​ಲು ಬಹು​ತೇಕ ಎಲ್ಲಾ ರಾಷ್ಟ್ರಗಳ ಕ್ರಿಕೆ​ಟಿ​ಗರು ಒಲವು ತೋರಿ​ದ್ದಾರೆ.

ಧೋನಿ, ಕೊಹ್ಲಿಗಿಂತ ಸೌರವ್ ಗಂಗೂಲಿ ನಾಯಕತ್ವವೇ ಬೆಸ್ಟ್; ನೆಹ್ರಾ ಹೇಳಿದ್ರು ಕಾರಣ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊರೋನಾ ಸಂಕಷ್ಟಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ. ಇದರ ಜೊತೆಗೆ ಅಭಿಮಾನಿಗಳಲ್ಲಿ ಕೊರೋನಾ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲೇ ಮನೆಯಲ್ಲೇ ಇರಿ ಎಂದು ಜನರಲ್ಲಿ ಕೈಮುಗಿದು ಕೇಳಿಕೊಂಡಿದ್ದಾರೆ. 

ಜಗತ್ತಿನಾದ್ಯಂತ ಕೊರೋನಾದಿಂದಾಗಿ ಜನಜೀವನ ಮಾತ್ರವಲ್ಲದೇ ಕ್ರೀಡಾ ಚಟುವಟಿಕೆಗಳು ಸ್ತಬ್ಧವಾಗಿವೆ. ಈ ವರ್ಷದ ಜುಲೈನಲ್ಲಿ ನಡೆಯಬೇಕಿದ್ದ ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಈಗಾಗಲೇ ಒಂದು ವರ್ಷ ಮುಂದೂಡಲ್ಪಟ್ಟಿದೆ. ಇನ್ನು ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯಾದ ಇಂಡಿಯನ್ ಪ್ರೀಮಿಯರ್ ಲೀಗ್ ಕೂಡಾ ಒಂದು ವರ್ಷಕ್ಕೆ ಮುಂದೂಡಲ್ಪಟ್ಟಿದೆ.