ನ್ಯೂಜಿಲೆಂಡ್ ಪ್ರವಾಸಕ್ಕಿಂದು ಟೀಂ ಇಂಡಿಯಾ ಆಯ್ಕೆ
ಜನವರಿ ತಿಂಗಳಾಂತ್ಯದಲ್ಲಿ ಟೀಂ ಇಂಡಿಯಾ, ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು ಇಂದು ಭಾರತ ತಂಡದ ಆಯ್ಕೆ ನಡೆಯಲಿದೆ. ಯಾರಿಗೆಲ್ಲಾ ತಂಡದಲ್ಲಿ ಅವಕಾಶ ಸ್ಥಾನ ಸಿಗಬಹುದು ಎನ್ನುವ ಕುತೂಹಲ ಜೋರಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಮುಂಬೈ(ಜ.12): ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದಿಂದ ಗುಣಮುಖರಾಗಿದ್ದು, ಭಾರತ ತಂಡಕ್ಕೆ ವಾಪಸಾಗಲು ಕಾತರಿಸುತ್ತಿದ್ದಾರೆ. ಭಾನುವಾರ ಇಲ್ಲಿ ಸಭೆ ಸೇರಲಿರುವ ಬಿಸಿಸಿಐ ಆಯ್ಕೆ ಸಮಿತಿ, ನ್ಯೂಜಿಲೆಂಡ್ ವಿರುದ್ಧದ ಟಿ20, ಏಕದಿನ ಹಾಗೂ ಟೆಸ್ಟ್ ಸರಣಿಗಳಿಗೆ ತಂಡವನ್ನು ಆಯ್ಕೆ ಮಾಡಲಿದೆ. ಪಾಂಡ್ಯಗೆ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದ್ದು, ಇನ್ಯಾವುದೇ ಅಚ್ಚರಿಯ ಆಯ್ಕೆ ನಡೆಸುವುದಿಲ್ಲ ಎನ್ನಲಾಗಿದೆ.
ಟಿ20 ವಿಶ್ವಕಪ್ ತಂಡದಲ್ಲಿ ಧೋನಿ ಯಾಕಿರಬೇಕು? ಇಲ್ಲಿದೆ 3 ಕಾರಣ!
ಜ.24ರಿಂದ 5 ಪಂದ್ಯಗಳ ಟಿ20 ಸರಣಿ ಆರಂಭಗೊಳ್ಳಲಿದ್ದು, ಆ ಬಳಿಕ 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳು ನಡೆಯಲಿವೆ. ಒಟ್ಟು 8 ಸೀಮಿತ ಓವರ್ ಪಂದ್ಯಗಳನ್ನು ಆಡಲಿರುವ ಕಾರಣ, 15 ಸದಸ್ಯರ ಬದಲಿಗೆ 16 ಇಲ್ಲವೇ 17 ಸದಸ್ಯರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
ಪುಣೆಯಲ್ಲೂ ಲಂಕಾ ದಹನ; 2020ರ ಮೊದಲ ಸರಣಿ ಭಾರತದ ಕೈವಶ!
ಪಾಂಡ್ಯ, ಭಾರತ ‘ಎ’ ತಂಡದೊಂದಿಗೆ ಈಗಾಗಲೇ ನ್ಯೂಜಿಲೆಂಡ್‌ಗೆ ತೆರಳಿದ್ದು, ಮೊದಲ ಕೆಲ ಪಂದ್ಯಗಳಲ್ಲಿ ತಮ್ಮ ಫಿಟ್ನೆಸ್ ಸಾಬೀತು ಪಡಿಸಬೇಕಿದೆ. ಭಾರತ ಹಿರಿಯರ ತಂಡದ ಸರಣಿ ಜತೆಜತೆಯಲ್ಲೇ ಭಾರತ ‘ಎ’ ತಂಡದ ಸರಣಿ ಸಹ ನಡೆಯಲಿದ್ದು, ಅಗತ್ಯವೆನಿಸಿದರೆ ‘ಎ’ ತಂಡದ ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಅವಕಾಶ ವಿರಾಟ್ ಕೊಹ್ಲಿಗೆ ಇರಲಿದೆ. ಕೆ.ಎಲ್.ರಾಹುಲ್ ಏಕದಿನ, ಟಿ20ಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದು, ಟೆಸ್ಟ್ ತಂಡಕ್ಕೆ 3ನೇ ಆರಂಭಿಕನಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.