ಮುಂಬೈ(ನ.24):  ಐಪಿಎಲ್ ಟೂರ್ನಿ ಮುಗಿಸಿ ಆಸ್ಟ್ರೇಲಿಯಾಕ್ಕೆ ಹಾರಿದ ಟೀಂ ಇಂಡಿಯಾ ಕ್ರಿಕೆಟಿಗರು ಕ್ವಾರಂಟೈನ್ ಮುಗಿಸಿ ಟೂರ್ನಿಗೆ ಸಜ್ಜಾಗಿದ್ದಾರೆ. ನವೆಂಬರ್ 27ರಂದು ಇಂಡೋ-ಆಸೀಸ್ ಮೊದಲ ಏಕದಿನ ಪಂದ್ಯ ಆಡಲಿದೆ. ಆಸೀಸ ಟೂರ್ನಿ ಆರಂಭಕ್ಕೂ ಮುನ್ನವೇ ಬಿಸಿಸಿಐ ಭಾರತ-ಇಂಗ್ಲೆಂಡ್ ನಡುವಿನ ಟೂರ್ನಿ ಖಚಿತಪಡಿಸಿದೆ.

ಕೆಲವೇ ಗಂಟೆಗಳಲ್ಲಿ ಇಂಡೋ-ಆಸೀಸ್‌ ಪಂದ್ಯಗಳ ಟಿಕೆಟ್‌ ಸೋಲ್ಡೌಟ್‌..!

ಆಸ್ಟ್ರೇಲಿಯಾ ಪ್ರವಾಸ ಮುಗಿಸಿದ ಬಳಿಕ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಸರಣಿ ಆಡಲಿದೆ.   3 ಏಕದಿನ, 5 ಟಿ20 ಹಾಗೂ 4 ಟೆಸ್ಟ್ ಪಂದ್ಯಗಳ ಸರಣಿ ಆಡುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ. ಆಸೀಸ್ ಪ್ರವಾಸ ಮುಗಿಸಿ ಮರಳಲಿರುವ ಟೀಂ ಇಂಡಿಯಾ, ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿ ಆಡಲಿದೆ.

4 ಟೆಸ್ಟ್ ಪಂದ್ಯಗಳ ಪೈಕಿ ಒಂದು ಪಂದ್ಯವನ್ನು ಅತೀ ದೊಡ್ಡ ಮೊಟೆರಾ ಕ್ರೀಡಾಂಗಣದಲ್ಲಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಇಷ್ಟೇ ಅಲ್ಲ ಈ ಪಂದ್ಯ ಡೇ ಅಂಡ್ ನೈಟ್ ಪಂದ್ಯ ಆಯೋಜಿಸಲು ಬಿಸಿಸಿಐ ತಯಾರಿ ಮಾಡಿಕೊಂಡಿದೆ. ಇಷ್ಟೇ ಅಲ್ಲ ಅಭಿಮಾನಿಗಳಿಗೆ ಅವಕಾಶ ನೀಡವು ಕುರಿತು ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಲಿದೆ.

ಇಂಗ್ಲೆಂಡ್ ವೇಲ್ಸ್ ಮಂಡಳಿ ಈ ಹಿಂದೆ ಆಗಸ್ಟ್ ತಿಂಗಳಲ್ಲಿ ಭಾರತ ವಿರುದ್ಧ ಸರಣಿ ಆಯೋಜಿಸಿತ್ತು. ಆದರೆ ಕೊರೋನಾ ವೈರಸ್ ಕಾರಣ ಈ ಸರಣಿ ಆಯೋಜನೆ ಸಾಧ್ಯವಾಗಿಲ್ಲ. ಹೀಗಾಗಿ ಇದೀಗ ಬಿಸಿಸಿಐ ತವರಿನಲ್ಲಿ ಸರಣಿ ಆಯೋಜಿಸಿದೆ. ಈಗಾಗಲೇ ಐಪಿಎಲ್ ಟೂರ್ನಿ ಆಯೋಜಿಸಿ ಯಶಸ್ವಿಯಾಗಿರುವ ಬಿಸಿಸಿಐ ಇದೀಗ ತವರಿನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಸರಣಿ ಆಯೋಜಿಸಲು ಸಿದ್ಥತೆ ನಡೆಸುತ್ತಿದೆ.