ಗಪ್ಟಿಲ್, ಟೇಲರ್ ಹೋರಾಟ, ಭಾರತಕ್ಕೆ 274 ರನ್ ಟಾರ್ಗೆಟ್
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 2ನೇ ಏಕದಿನ ಪಂದ್ಯ ತೀವ್ರ ಕೂತಹಲ ಕೆರಳಿಸಿದೆ. ಆರಂಭದಲ್ಲಿ ಅಬ್ಬರಿಸಿದ ಕಿವೀಸ್ ಬ್ಯಾಟ್ಸ್‌ಮನ್‌ಗಳ ಬಳಿಕ ದಿಢೀರ್ ಕುಸಿತ ಕಂಡಿದ್ದರು. ಆದರೆ ರಾಸ್ ಟೇಲರ್ ಹೋರಾಟದಿಂದ ನ್ಯೂಜಿಲೆಂಡ್ ಸ್ಪರ್ಧಾತ್ಮಕ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದೆ. ನ್ಯೂಜಿಲೆಂಡ್ ಬ್ಯಾಟಿಂಗ್ ಹಾಗೂ ಭಾರತದ ಬೌಲಿಂಗ್ ಹೈಲೈಟ್ಸ್ ಇಲ್ಲಿದೆ.
ಆಕ್ಲೆಂಡ್(ಫೆ.08): ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಮಾರ್ಟಿನ್ ಗಪ್ಟಿಲ್ ಹಾಗೂ ರಾಸ್ ಟೇಲರ್ ಬ್ಯಾಟಿಂಗ್ ನೆರವಾಗಿದೆ. ಆರಂಭದಲ್ಲಿ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಮಾರ್ಟಿನ್ ಗಪ್ಟಿಲ್ ಹಾಗೂ ಹೆನ್ರಿ ನಿಕೋಲಸ್ ಉತ್ತಮ ಆರಂಭದ ಬಳಿಕ ಕುಸಿತ ಕಂಡಿದ್ದ ಕಿವೀಸ್ ತಂಡಕ್ಕೆ ರಾಸ್ ಟೇಲರ್ ಅರ್ಧಶತಕ ಚೇತರಿಕೆ ನೀಡಿದ್ದರು. ಟೇಲರ್ ಅಬ್ಬರಿಂದ ನ್ಯೂಜಿಲೆಂಡ್ 8 ವಿಕೆಟ್ ನಷ್ಟಕ್ಕೆ 273 ರನ್ ಸಿಡಿಸಿದೆ.
ಇದನ್ನೂ ಓದಿ: INDvNZ 2ನೇ ಏಕದಿನ: ದಾಖಲೆ ಬರೆದ ಮಾರ್ಟಿನ್ ಗಪ್ಟಿಲ್!
ಟಾಸ್ ಸೋತು ಬ್ಯಾಟಿಂಗ್ ಇಳಿದ ನ್ಯೂಜಿಲೆಂಡ್ ತಂಡಕ್ಕೆ ಗಪ್ಟಿಲ್ ಹಾಗೂ ನಿಕೋಲಸ್ ದಾಖಲೆ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 93 ರನ್ ಜೊತೆಯಾಟ ನೀಡಿತು. ನಿಕೋಲಸ್ 41 ರನ್ ಸಿಡಿಸಿ ಯಜುವೇಂದ್ರ ಚಹಾಲ್‌ಗೆ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ:ಕೆಎಲ್ ರಾಹುಲ್- ಅಥಿಯಾ ಡೇಟಿಂಗ್; ಮೊದಲ ಬಾರಿಗೆ ಸುನಿಲ್ ಶೆಟ್ಟಿ ಖಡಕ್ ಪ್ರತಿಕ್ರಿಯೆ!
ಟಾಮ್ ಬ್ಲಂಡೆಲ್ ಜೊತೆ ಇನಿಂಗ್ಸ್ ಮುಂದುವರಿಸಿದ ಗಪ್ಟಿಲ್ ನ್ಯೂಜಿಲೆಂಡ್ ತಂಡಕ್ಕೆ ಆಸರೆಯಾದರು. ಬ್ಲೆಂಡೆಲ್ 22 ರನ್ ಸಿಡಿಸಿ ಔಟಾದರು. 79 ರನ್ ಸಿಡಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಗಪ್ಟಿಲ್ ರನೌಟ್‌ಗೆ ಬಲಿಯಾದರು. ಟಾಮ್ ಲಾಥಮ್ 14 ಎಸೆತ ಎದುರಿಸಿ 7 ರನ್ ಸಿಡಿಸಿ ನಿರ್ಗಮಿಸಿದರು.
ಲಾಥಮ್ ವಿಕೆಟ್ ಪತನದ ಬೆನ್ನಲ್ಲೇ ನ್ಯೂಜಿಲೆಂಡ್ ದಿಢೀರ್ ಕುಸಿತ ಕಂಡಿತು. ಜೇಮ್ಸ್ ನೀಶಮ್ ಹಾಗೂ ಕೊಲಿನ್ ಡೇ ಗ್ರ್ಯಾಂಡ್‌ಹೊಮ್ಮೆ ಆಸರೆಯಾಗಲಿಲ್ಲ. ಮಾರ್ಕ್ ಚಾಂಪನ್ 1 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ರಾಸ್ ಟೇಲರ್ ಏಕಾಂಗಿ ಹೋರಾಟ ಆರಂಭಿಸಿದರು.ಟೇಲರ್ ಹಾಫ್ ಸೆಂಚುರಿ ಸಿಡಿಸಿ ತಂಡಕ್ಕೆ ನೆರವಾದರು.
ಟೇಲರ್‌ಗೆ ಕೈಲ್ ಜ್ಯಾಮಿಸನ್ ಉತ್ತಮ ಸಾಥ್ ನೀಡಿದರು. ರಾಸ್ ಟೇಸರ್ ಅಜೇಯ 73 ರನ್ ಹಾಗೂ ಕೈಲ್ ಜ್ಯಾಮಿಸನ್ ಅಜೇಯ 25ರನ್ ಸಿಡಿಸಿದರು. ಈ ಮೂಲಕ ನ್ಯೂಜಿಲೆಂಡ್ 8 ವಿಕೆಟ್ ನಷ್ಟಕ್ಕೆ273 ರನ್ ಸಿಡಿಸಿತು.