ಮುಂಬೈ(ಜ.13): ಶ್ರೀಲಂಕಾ ವಿರುದ್ಧದ ಟಿ20 ಸರಣಿ ಗೆದ್ದುಕೊಂಡ ಟೀಂ ಇಂಡಿಯಾ ಇದೀಗ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಸಜ್ಜಾಗಿದೆ. ಲಂಕಾ ವಿರುದ್ಧದ ಸರಣಿ ಭಾರತಕ್ಕೆ ಯಾವುದೇ ರೀತಿಯ ಸವಾಲು ಎದುರಾಗಲಿಲ್ಲ. ಆದರೆ ಆಸ್ಟ್ರೇಲಿಯಾ ಸರಣಿ ಅಂದುಕೊಂಡಷ್ಟು ಸುಲಭವಲ್ಲ. ಆಸೀಸ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಸರಣಿ ರೋಚಕ ಘಟ್ಟ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ: ನ್ಯೂಜಿಲೆಂಡ್ ಪ್ರವಾಸಕ್ಕೆ ಬಲಿಷ್ಠ ಭಾರತ ತಂಡ ಪ್ರಕಟ!.

ಜ.14ರಂದು  ಮುಂಬೈನ ವಾಂಖೆಡೆಯಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಮಹತ್ವದ ಬದಲಾವಣೆ ಮಾಡುವು ಸಾಧ್ಯತೆ ಇದೆ. ಇಂಜುರಿಯಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ಕೇದಾರ್ ಜಾಧವ್ ಬದಲು ಕನ್ನಡಿಗ ಮನೀಶ್ ಪಾಂಡೆಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್ ತಂಡದಲ್ಲಿ ಧೋನಿ ಯಾಕಿರಬೇಕು? ಇಲ್ಲಿದೆ 3 ಕಾರಣ!

6ನೇ ಸ್ಥಾನಕ್ಕಾಗಿ ಕೇದಾರ್ ಜಾಧವ್ ಹಾಗೂ ಮನೀಶ್ ಪಾಂಡೆ ನಡುವೆ ಪೈಪೋಟಿ ಇದೆ. ಕೇದಾರ್ ಪಾರ್ಟ್ ಟೈಮ್ ಬೌಲರ್ ಅನ್ನೋ ಕಾರಣಕ್ಕೆ ತಂಡದಲ್ಲಿ ಸ್ಥಾನ ಗಿಟ್ಟಿಸುತ್ತಿದ್ದರು. ಸದ್ಯ ಕೇದಾರ್ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಕಳಪೆಯಾಗಿದ್ದಾರೆ. ಇತ್ತ ಮನೀಶ್ ಪಾಂಡೆ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದು, ಫೀಲ್ಡಿಂಗ್‌ನಲ್ಲಿ ಬೆಸ್ಟ್ ಅನ್ನೋ ಬಿರುದು ಪಡೆದಿದ್ದಾರೆ. ಹೀಗಾಗಿ ಪಾಂಡೆಗೆ ಅವಕಾಶ ನೀಡವು ಸಾಧ್ಯತೆಗಳಿವೆ.

ಸಂಭವನೀಯ ಭಾರತ ತಂಡ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಮನೀಶ್ ಪಾಂಡೆ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ