Asianet Suvarna News Asianet Suvarna News

ಹೊಸ ಸಂಪ್ರದಾಯಕ್ಕೆ ಟೀಂ ಇಂಡಿಯಾ ಬ್ರೇಕ್: ಪ್ಲೇಯಿಂಗ್ 11ನಲ್ಲಿ ಯಾರಿಗೆಲ್ಲಾ ಸಿಗಲಿದೆ ಸ್ಥಾನ?

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ವೇದಿಕೆ ರೆಡಿಯಾಗಿದೆ. ಆದರೆ ಟೀಂ ಇಂಡಿಯಾದಲ್ಲಿ ಇಂಜುರಿ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಹೊಸ ಸಂಪ್ರದಾಯಕ್ಕೆ ಟೀಂ ಇಂಡಿಯಾ ಬ್ರೇಕ್ ಹಾಕಿದೆ. ಹೀಗಾಗಿ ಯಾರೆಲ್ಲಾ ಪ್ಲೇಯಿಂಗ್‌ 11ನಲ್ಲಿ ಸ್ಥಾನ ಪಡೆಯಲಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.

Team India playing 11 selection postpone for 4th test due to injury ckm
Author
Bengaluru, First Published Jan 14, 2021, 5:49 PM IST

ಗಬ್ಬಾ(ಜ.14): ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯಕ್ಕೆ ತಯಾರಿ ನಡೆಸಿರುವ ಟೀಂ ಇಂಯಾಗೆ ಗಾಯದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ತಂಡ ಕೀ ಪ್ಲೇಯರ್ಸ್, ಪ್ರಮುಖ ವೇಗಿ, ಆಲ್ರೌಂಡರ್, ಬ್ಯಾಟ್ಸ್‌ಮನ್‌ಗಳೆಲ್ಲಾ ಇಂಜುರಿಗೆ ತುತ್ತಾಗಿದ್ದಾರೆ. ಹೀಗಾಗಿ ಅಂತಿಮ ಟೆಸ್ಟ್ ಪಂದ್ಯಕ್ಕೆ ಇನ್ನೂ ಕೂಡ ಪ್ಲೇಯಿಂಗ್ 11 ಅಂತಿಮಗೊಂಡಿಲ್ಲ. 

ಆಸ್ಟ್ರೇಲಿಯಾ ಎದುರು ಗಾಯಕ್ಕೆ ತುತ್ತಾದವರು ಟೀಂ ಇಂಡಿಯಾದ ಒಬ್ಬಿಬ್ಬರಲ್ಲ, ಬರೋಬ್ಬರಿ ಅರ್ಧ ಡಜನ್..!

ಇಂಜುರಿ ಸಮಸ್ಯೆ ಕಾರಣ, ಜಸ್ಪ್ರೀತ್ ಬುಮ್ರಾ ಸೇರಿದಂತೆ ಕೆಲ ಆಟಗಾರರ ಫಿಟ್ನೆಸ್ ರಿಪೋರ್ಟ್ ಇನ್ನೂ ಬಂದಿಲ್ಲ. ಹೀಗಾಗಿ ಟೀಂ ಇಂಡಿಯಾ ಪಂದ್ಯಕ್ಕೂ ಒಂದು ದಿನ ಮೊದಲೇ ಪ್ಲೇಯಿಂಗ್ 11 ಬಹಿರಂಗ ಪಡಿಸುವ ಹೊಸ ಸಂಪ್ರದಾಯಕ್ಕೆ ಬ್ರೇಕ್ ಹಾಕಿದೆ. ಇದೀಗ ಟಾಸ್ ವೇಳೆ ಆಡೋ ಹನ್ನೊಂದರ ಬಳಗ ಬಹಿರಂಗ ಪಡಿಸಲು ನಿರ್ಧರಿಸಲಾಗಿದೆ.

ಕೆಲ ಆಟಗಾರರ ಫಿಟ್ನೆಸ್ ರಿಪೂರ್ಟ್ ಗಮನಿ, ಆಟಗಾರರ ಆಯ್ಕೆ ನಡೆಯಲಿದೆ. ರವೀಂದ್ರ ಜಡೇಜಾ ಹಾಗೂ ಹನುಮಾ ವಿಹಾರಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.  ಆದರೆ ಬುಮ್ರಾ ಹಾಗೂ ಆರ್ ಅಶ್ವಿನ್ ಫಿಟ್ನೆಸ್ ರಿಪೋರ್ಟ್‌ಗಾಗಿ ಟೀಂ ಇಂಡಿಯಾ ಕಾಯುತ್ತಿದೆ. ಇತ್ತ ಕುಲ್ದೀಪ್ ಯಾದವ್ ಹಾಗೂ ಶಾರ್ದೂಲ್ ಠಾಕೂರ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ಸಂಭಾವ್ಯ ತಂಡ;
ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ(ನಾಯಕ), ವೃದ್ಧಿಮಾನ್ ಸಾಹ, ರಿಷಬ್ ಪಂತ್, ಆರ್ ಅಶ್ವಿನ್, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್

Follow Us:
Download App:
  • android
  • ios