ಬೆಂಗಳೂರು(ಜ.31): ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ತಮ್ಮ ವಿಚಿತ್ರ ಬೌಲಿಂಗ್ ಶೈಲಿಯ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳ ಎದೆಯಲ್ಲಿ ನಡುಕು ಹುಟ್ಟಿಸುತ್ತಿದ್ದಾರೆ. ಆದರೆ ಇದೀಗ ಬುಮ್ರಾ ಟೀಂ ಇಂಡಿಯಾ ದಿಗ್ಗಜ ಸ್ಪಿನ್ನರ್ ಅನಿಲ್‌ ಕುಂಬ್ಳೆ ಬೌಲಿಂಗ್ ಶೈಲಿ ಅನುಕರಿಸುವ ಮೂಲಕ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ದ ತವರಿನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ವೇಗಿ ಜಸ್ಪ್ರೀತ್ ಬುಮ್ರಾ, ನೆಟ್ಸ್‌ನಲ್ಲಿ ಅನಿಲ್‌ ಕುಂಬ್ಳೆ ಬೌಲಿಂಗ್ ಶೈಲಿ ಅನುಸರಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ಟ್ವೀಟ್‌ ಮಾಡಿದ್ದು, ಬುಮ್ರಾ ಈ ಶೈಲಿ ಕುಂಬ್ಳೆ ಬೌಲಿಂಗ್‌ ರೀತಿಯಲ್ಲಿಯೇ ಇದೆ ಎಂದು ಟ್ವೀಟ್ ಮಾಡಿತ್ತು.

ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಜಂಬೋ ಖ್ಯಾತಿಯ ಹೆಮ್ಮೆಯ ಕನ್ನಡಿಗ ವೆಲ್‌ ಡನ್‌ ಬೂಮ್‌, ಬೌಲಿಂಗ್‌ ಶೈಲಿ ಅದೇ ರೀತಿಯಿದೆ. ಮುಂದಿನ ತಲೆಮಾರಿನ ಯುವ ವೇಗದ ಬೌಲರ್‌ಗಳಿಗೆ ನೀವೇ ಸ್ಪೂರ್ತಿಯಾಗಿದ್ದು, ನಿಮ್ಮ ಬೌಲಿಂಗ್ ಶೈಲಿಯನ್ನು ಅನುಕರಿಸುತ್ತಿದ್ದಾರೆ. ಮುಂಬರುವ ಸರಣಿಗೆ ಶುಭಾಶಯಗಳು ಎಂದು ಕುಂಬ್ಳೆ ಹೇಳಿದ್ದಾರೆ.

IPL 2020: 6 ಬೌಲರ್‌ಗಳ ಆ್ಯಕ್ಷನ್ ಅನುಕರಣೆ ಮಾಡಿದ ಜಸ್ಪ್ರೀತ್ ಬುಮ್ರಾ..! ವಿಡಿಯೋ ವೈರಲ್

ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆ  ಟೆಸ್ಟ್ ಕ್ರಿಕೆಟ್‌ನಲ್ಲಿ 619 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 337 ವಿಕೆಟ್ ಕಬಳಿಸಿದ್ದಾರೆ. ಕ್ರಿಕೆಟ್‌ಗೆ ವಿದಾಯ ಹೇಳಿ ದಶಕವೇ ಕಳೆದರೂ ಭಾರತ ಪರ ಗರಿಷ್ಠ ವಿಕೆಟ್‌ ಕಬಳಿಸಿದ ದಾಖಲೆ ಅನಿಲ್ ಕುಂಬ್ಳೆ ಹೆಸರಿನಲ್ಲಿದೆ.